ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ರೈಂ: ಕಡಿಮೆ ಅಂಕ ಗಳಿಕೆ, ನೊಂದ ವಿದ್ಯಾರ್ಥಿ ಆತ್ಮಹತ್ಯೆ

By Mahesh
|
Google Oneindia Kannada News

ಬೆಂಗಳೂರು, ನ.6: ಗೌರಿಬಿದನೂರು ಪಟ್ಟಣದಲ್ಲಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ಬೆಳಗ್ಗೆ ನಡೆದಿದೆ. ಇತ್ತೀಚೆಗೆ ನಡೆದಿದ್ದ ಪರೀಕ್ಷೆಗಳಲ್ಲಿ ವಿದ್ಯಾರ್ಥಿ ಶ್ಯಾಮಸುಂದರ ರೆಡ್ಡಿ ನಪಾಸಾಗಿದ್ದ.

22 ವರ್ಷದ ಶ್ಯಾಮಸುಂದರ ರೆಡ್ಡಿ ಎಂಬ ವಿದ್ಯಾರ್ಥಿ ಬಿ.ಕಾಂ ಪರೀಕ್ಷೆಗಳಲ್ಲಿ ಕಡಿಮೆ ಅಂಕ ಗಳಿಸಿದ್ದ ಕೆಲವು ಸಬ್ಜೆಕ್ಟ್ ಫೇಲ್ ಆದ ನಂತರ ತೀವ್ರವಾಗಿ ನೊಂದಿದ್ದ ಯಾರೊಂದಿಗೂ ಹೆಚ್ಚು ಮಾತನಾಡುತ್ತಿರಲಿಲ್ಲ ಎಂದು ತಿಳಿದು ಬಂದಿದೆ. ಮರು ಪರೀಕ್ಷೆಗೆ ಕೂತ ವಿದ್ಯಾರ್ಥಿ ಮತ್ತೊಮ್ಮೆ ಫೇಲ್ ಆಗಿದ್ದರಿಂದ ಗೌರಿಬಿದನೂರಿನ ವಿವಿ ಪುರಂನ ನಿವಾಸದಲ್ಲಿ ನೇಣು ಬಿಗಿದು ಕೊಂಡು ಶ್ಯಾಮಸುಂದರ ರೆಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ

ಯಲಹಂಕ: ಕೋಗಿಲು ನಿವಾಸಿ 45 ವರ್ಷದ ತಿಮ್ಮರಾಜು ತಲೆ ಮೇಲೆ ಅಂಬೇಡ್ಕರ್ ವೈದ್ಯ ಕಾಲೇಜ್ ಸಮೀಪವಿರುವ ಆಶಿಯಾನ ಅಪಾರ್ಟ್ ಮೆಂಟ್ ‌ನಲ್ಲಿ ಲಿಫ್ಟ್ ಬಿದ್ದು ಮೃತಪಟ್ಟಿರುವ ಘಟನೆ ಡಿ.ಜೆ.ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ನಡೆದಿದೆ.

ಪಾವಗಡ ಮೂಲದ ತಿಮ್ಮರಾಜು, ಆರ್.ಟಿ.ನಗರದ ಸಿಬಿಐ ರಸ್ತೆಯಲ್ಲಿರುವ ಶ್ರವಣ್ ಗ್ಯಾಸ್ ಏಜೆನ್ಸಿಯಲ್ಲಿ ಕಳೆದ ಹತ್ತು ವರ್ಷಗಳಿಂದ ಗುತ್ತಿಗೆ ನೌಕರರಾಗಿ ಕೆಲಸ ಮಾಡುತ್ತಿದ್ದರು. ದ್ವಿಚಕ್ರವಾಹನದಲ್ಲಿ ಗ್ಯಾಸ್ ಸಿಲಿಂಡರ್ ಗಳನ್ನು ಹಾಕಿಕೊಂಡು ಕೆಲ ಕಡೆ ವಿತರಿಸಿ ಮಧ್ಯಾಹ್ನ 12.30 ರ ಸುಮಾರಿಗೆ ಆಶಿಯಾನ ಅಪಾರ್ಟ್ ಮೆಂಟ್ ಗೆ ಹೋಗಿದ್ದಾರೆ. ಎರಡನೇ ಮಹಡಿಗೆ ಸಿಲಿಂಡರ್ ಅನ್ನು ತೆಗೆದುಕೊಂಡು ಹೋಗಬೇಕಿತ್ತು. ಹೀಗಾಗಿ, ಲಿಫ್ಟ್ ನ ಬಟನ್ ಒತ್ತಿದ್ದಾರೆ.

ಆದರೆ, ಲಿಫ್ಟ್ ಇನ್ನೂ ಕೆಳಗೆ ಬಂದಿರಲಿಲ್ಲ. ಹೀಗಾಗಿ, ಲಿಫ್ಟ್ ಇಳಿಯುವ ಜಾಗದಲ್ಲಿ ಅವರು ಬಿದ್ದಿದ್ದಾರೆ. ಆಗ ಮೇಲಿಂದ ಬಂದ ಲಿಫ್ಟ್ ಅವರ ತಲೆಗೆ ಬಡಿದಿದೆ. ತೀವ್ರವಾಗಿ ಗಾಯಗೊಂಡ ತಿಮ್ಮರಾಜು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅಪಾರ್ಟ್ ಮೆಂಟ್ ಮೇಲ್ವಿಚಾರಕರು ಹಾಗೂ ಲಿಫ್ಟ್ ರಿಪೇರಿ ಮಾಡಿದವರ ನಿರ್ಲಕ್ಷ್ಯವೇ ಈ ಘಟನೆಗೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಕಮಲ್ ಪಂಥ್ ತಿಳಿಸಿದ್ದಾರೆ.

ಧಾರವಾಡ

ಧಾರವಾಡ

ರೈಲ್ವೆ ಎಂಜಿನ್ ಮತ್ತು ಟ್ರಾಲಿ ನಡುವೆ ಮಂಗಳವಾರ ಮಧ್ಯಾಹ್ನ ಅಳ್ನಾವರ ಬಳಿ ಸಂಭವಿಸಿದ ಅಪಘಾತದಲ್ಲಿ ಟ್ರಾಲಿಯಲ್ಲಿದ್ದ ಇಬ್ಬರು ರೈಲ್ವೆ ಸಿಬ್ಬಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ.

ಈ ಮಾರ್ಗದಲ್ಲಿ ರೈಲುಗಳು ಸಂಚರಿಸದ ಕಾರಣ ಚಾಲಕರಿಗೆ ಸಂದೇಶ ರವಾನಿಸಲು ಯಾವುದೇ ತರಹದ ಸಿಗ್ನಲ್ ವ್ಯವಸ್ಥೆ ಇಲ್ಲ. ಅಳ್ನಾವರ ನಿಲ್ದಾಣದಿಂದ ಹೊರಡುವ ಸಂದರ್ಭದಲ್ಲಿಯೇ ಅವರಿಗೆ ಮಾಹಿತಿ ತಿಳಿಸಲಾಗುತ್ತದೆ. ಆದರೆ ಇಂತಹ ಆಧುನಿಕ ತಂತ್ರಜ್ಞಾನ ಯುಗದಲ್ಲೂ ಅಪಘಾತ ಸಂಭವಿಸಿರುವುದು ಸಂಶಯಕ್ಕೆ ಎಡೆಮಾಡಿದೆ.

ಮಾಲೂರು ಪೊಲೀಸ್ ಠಾಣೆ

ಮಾಲೂರು ಪೊಲೀಸ್ ಠಾಣೆ

ಕೊಲೆ ಪ್ರಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಮಾಲೂರು ತಾಲ್ಲೂಕು, ಹುಲ್ಕೂರು ಗ್ರಾಮದಲ್ಲಿ ಸಂಭವಿಸಿರುತ್ತದೆ.

ವೆಂಕಟೇಶ್ ರವರನ್ನು ಅದೇ ಗ್ರಾಮದ ಚಲಪತಿ ಮತ್ತು ವೆಂಕಟಪತಿ ರವರು ಜಗಳ ಮಾಡಿ, ಅವಾಚ್ಯ ಶಬ್ದಗಳಿಂದ ಬೈದು, ಮಚ್ಚು ಮತ್ತು ಗಡಾರಿಯಿಂದ ಹಲ್ಲೆ ಮಾಡಿ, ತೀವ್ರತರವಾದ ರಕ್ತಗಾಯವನ್ನುಂಟು ಮಾಡಿದ್ದು. ವೆಂಕಟೇಶ್ ರವರು ಮಾಲೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತಾರೆ. ವೆಂಕಟೇಶ್ ರವರ ದಯಾದಿ ಕರಗಪ್ಪನವರ ಮೇಲೆ ಚಲಪತಿ ಜಗಳ ಮಾಡುತ್ತಿದ್ದಾಗ ಅವರಿಂದ ಬಿಡಿಸಲು ಹೋದ ವೆಂಕಟೇಶ್ ರವರ ಮೇಲೆ ಹಲ್ಲೆ ಮಾಡಿರುತ್ತಾರೆ.

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08152-243066ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

ಜೀವ ಬೆದರಿಕೆ ಪ್ರಕರಣ

ಜೀವ ಬೆದರಿಕೆ ಪ್ರಕರಣ

ಕೊಲ್ಲೂರು: ಪಿರ್ಯಾದಿ ಚಂದ್ರ ಶೇಖರ ಶೆಟ್ಟ(36) ತಂದೆ: ಅಣ್ಣಪ್ಪ ಶೆಟ್ಟಿ ವಾಸ:ಕಳಮುಳ್ಳಣ್ ಚಿತ್ತೂರು ಗ್ರಾಮ ಕುಂದಾಪುರ ಇವರು ವಂಡ್ಸೆಯಲ್ಲಿ ಕೆಲಸ ಮುಗಿಸಿ ವಾಪಾಸು ಮನೆ ಕಡೆ ತನ್ನ ಬೈಕಿನಲ್ಲಿ ಶಾರ್ಕೆ ಮಾರ್ಗವಾಗಿ ಬರುತ್ತಿರುವಾಗ ಶಾರ್ಕೆ ಭಟ್ಟರ ಮನೆ ಮನೆಯ ಹತ್ತಿರ ತಲುಪುತ್ತಿರುವಾಗ ನೆರೆಮನೆಯವರಾದ ಪ್ರತಾಪ, ನಾಗರಾಜ ಮತ್ತು ಗುರುರಾಜ ರವರು ಅಡ್ಡಗಟ್ಟಿ ತೆಡೆದು ನಿಲ್ಲಸಿ, ಮೂವರು ಸೇರಿ ಬೈಕಿನಿಂದ ಎಳೆದು ಹಾಕಿ ಬಿಳಿಸಿ ಅವರಲ್ಲಿ ಪ್ರತಾಪನು ಕೈಯಿಂದ ಮತ್ತು ಕಾಲಿನಿಂದ ಬೆನ್ನಿಗೆ ಹೊಡೆದು ತುಳಿದು ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿರುವುದಾಗಿದೆ. ಕೊಲ್ಲೂರು ಠಾಣೆಯಲ್ಲಿ ಅಪರಾಧ ಕ್ರಮಾಂಕ 81/2013 ಕಲಂ 341.323.506 ಜೊತೆಗೆ 34 ಐ.ಪಿ.ಸಿ ರಂತೆ ಪ್ರಕರಣ ದಾಖಿಸಿ ತನಿಖೆ ಮುಂದುವರಿಸಲಾಗಿದೆ.

ಕಳವು ಪ್ರಕರಣ [ ಶಿವಮೊಗ್ಗ ಗ್ರಾಮಾಂತರ]

ಕಳವು ಪ್ರಕರಣ [ ಶಿವಮೊಗ್ಗ ಗ್ರಾಮಾಂತರ]

ಅಬ್ಬಲಗೆರೆ ಬಳಿ ಮೊಬೈಲ್ ಟವರ್ ಗೆ ಅಳವಡಿಸಿರುವ ಸುಮಾರು 90 ಮೀ ನಷ್ಟು ಕೇಬಲ್ ನ್ನು ಯರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುವರು ಬೆಲೆ 13,500/- ಇ ಬಗ್ಗೆ ಪಿರ್ಯಾದಿ ರತ್ನಾಕರ ಹೆ ಚ್ ಎಸ್ ಬಿನ್ ಸುಬ್ರಾಯ ಉಪವಿಭಾಗಿಯ ಅಭಿಯಂತರು ಮೊಬೈಲ್ ಸರ್ವಿಸ್ ಭಾರತ್ ಸಂಚಾರ ನಿಗಮ ನಿಯಮಿತ ವಾಸ ವಿಜಯನಗರ ರವರು ಠಾಣೆಗೆ ದೂರು ನೀಡಿರುವರು

ಅಸ್ವಾಭಾವಿಕ ಮರಣ ಪ್ರಕರಣ

ಅಸ್ವಾಭಾವಿಕ ಮರಣ ಪ್ರಕರಣ

ಅನಾಮಧೇಯ ಗಂಡಸಿನ ಶವ ಪತ್ತೆ : ಚಳ್ಳಕೆರೆ, ನವಂಬರ್. 05 :: ನಿನ್ನೆ ಬೆಳಿಗ್ಗೆ ಪಟ್ಟಣದ ಚಿತ್ರದುರ್ಗ ರಸ್ತೆಯ ಆಸ್ಪತ್ರೆ ಬಸ್‍ನಿಲ್ದಾಣದ ಬಳಿ ಕಳೆದ ನಾಲ್ಕು ದಿನಗಳಿಂದ ನಿಶಕ್ತನಾಗಿ ಆರೋಗ್ಯ ಸರಿ ಇಲದೇ ಸುಮಾರು 28 ವರ್ಷದ ಅಪರಿಚಿತ ವ್ಯಕ್ತಿಯ ಶವ ಬಿದ್ದಿದ್ದು, ಆತನ ಬಗ್ಗೆ ವಿಳಾಸವಾಗಲೀ, ವಾರಸುದಾರರಾಗಲೀ ಕಂಡು ಬಂದಿರುವುದಿಲ್ಲವೆಂದು ದೂರು ಇದ್ದ ಮೇರೆಗೆ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿರುತ್ತದೆ.

English summary
Karnataka Crime news Coverage : A 25 year degree student allegedly committed suicide in Gauribidanur. He failed in few subject and many more crime related news from across the state
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X