ಕ್ರೈಂ: ಬೀದಿ ಜಗಳ ಬಿಡಿಸಲು ಬಂದವ ಹತನಾದ

ಬೆಂಗಳೂರು,ನ.14: ಮಡಿವಾಳದ ಸಿದ್ಧಾರ್ಥನಗರದ ವಾಸಿ ಬಾರ್ ‌ಬೆಂಡರ್ ಸುಂದರ್ ಟೈಂ ಸರಿಯಿರಲಿಲ್ಲ. ಆತ ಬೀದಿ ಜಗಳ ಬಿಡಿಸಲು ಹೋಗಿ ಪಡ್ಡೆ ಹುಡುಗರಿಂದ ಕಲ್ಲೇಟು ಚೂಕು ಇರಿತಕ್ಕೆ ಒಳಗಾಗಿ ದುರಂತ ಸಾವನ್ನಪ್ಪಿದ್ದಾನೆ.

ಮಡಿವಾಳದ ಸಿದ್ಧಾರ್ಥನಗರದ ನಿವಾಸಿಯಾಗಿದ್ದ 42 ವರ್ಷದ ಸುಂದರ್ ಬಾರ್ ಟೆಂಡರ್ ಆಗಿ ಕೆಲಸ ಮಾಡುತ್ತಿದ್ದ. ಕಳೆದ ರಾತ್ರಿ ಅಂಬೇಡ್ಕರ್ ಸಂಘದ ಮನೆಯ ಹತ್ತಿರ ಬೀದಿ ನಾಟಕ ಆಡುವವರು ಬಂದು ವಿದ್ಯುತ್ ಬೆಳಕು ಬೇಕೆಂದು ಮನೆಯಿಂದ ವಿದ್ಯುತ್ ಸಂಪರ್ಕ ನೀಡುವಂತೆ ಕೇಳಿಕೊಂಡಿದ್ದಾರೆ.

ಬೀದಿ ನಾಟಕ ಆಡುತ್ತಿದ್ದ ಹುಡುಗಿಯರನ್ನು ಚುಡಾಯಿಸಿ, ಡ್ಯಾನ್ಸ್ ಮಾಡಲು ಬಂದ ಐವರು ಇದನ್ನು ಪ್ರಶ್ನಿಸಿದ್ದ ವ್ಯಕ್ತಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಮಡಿವಾಳ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಆಗ ಆರ್.ಸೆಲ್ವಿ ಎಂಬುವರು ತಮ್ಮ ಬಳಿಯಿದ್ದ ಬೀಗದ ಕೀಯಿಂದ ಅಂಗನವಾಡಿಯ ಬೀಗ ತೆಗೆದು ವಿದ್ಯುತ್ ಸಂಪರ್ಕ ನೀಡಿದ್ದಾರೆ. ಬೀದಿ ನಾಟಕ ನಡೆಯುವಾಗ ಅಲ್ಲಿಗೆ ಬಂದ ಡಿಂಗ್ರಿ, ಲಾಲ್, ಕಾರಪುಡಿ ನಾಗ, ಶಶಿ ಹಾಗೂ ಮತ್ತೊಬ್ಬ ಸ್ಥಳಕ್ಕೆ ಬಂದು ನಾಟಕವಾಡುತ್ತಿದ್ದ ಹುಡುಗಿಯರನ್ನು ಚುಡಾಯಿಸಿ ಹಾಡು ಹಾಕಿ ನಾವು ಡ್ಯಾನ್ಸ್ ಮಾಡುತ್ತೇವೆ ಎಂದು ಗಲಾಟೆ ಮಾಡಿದ್ದಾರೆ.

ಅದಕ್ಕೆ ಸೆಲ್ವಿ ಅವರು ಆಕ್ಷೇಪ ವ್ಯಕ್ತಪಡಿಸಿ ವಿದ್ಯುತ್ ಸಂಪರ್ಕವನ್ನು ತೆಗೆದು ನಾಟಕ ಆಡುವವರಿಗೆ ಹೋಗುವಂತೆ ತಿಳಿಸಿದ್ದಾರೆ. ಆಗ ಹುಡುಗರೆಲ್ಲರೂ ಗಲಾಟೆ ಮಾಡಿ ಸೆಲ್ವಿ ಅವರಿಗೆ ಕಲ್ಲಿನಿಂದ ಹೊಡೆದು ಗಾಯಗೊಳಿಸಿದ್ದಾರೆ.

ಅಷ್ಟರಲ್ಲಿ ಸಮೀಪದ ಮನೆಯಲ್ಲೇ ವಾಸವಿರುವ ಸೆಲ್ವಿ ಅವರ ತಮ್ಮ ಸುಂದರ್ ಸ್ಥಳಕ್ಕೆ ಬಂದು ಹುಡುಗರನ್ನು ಪ್ರಶ್ನಿಸಿದ್ದಾರೆ. ಇದರಿಂದ ಕೆರಳಿದ ಹುಡುಗರ ಗುಂಪು ಸುಂದರ್ ಅವರಿಗೆ ಸೊಂಟದ ಎಡಭಾಗ, ಎದೆಯ ಮೇಲ್ಭಾಗ ಹಾಗೂ ಗಲ್ಲದ ಹತ್ತಿರ ಚಾಕುವಿನಿಂದ ಇರಿದು ಎಲ್ಲರೂ ಪರಾರಿಯಾಗಿದ್ದಾರೆ.

ಈ ಸಂಬಂಧ ಮೃತನ ಮಗ ಪ್ರತಾಪ್ ಮಡಿವಾಳ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ಕೋಲಾರ ಮುಂತಾದ ಕಡೆಗಳಿಂದ ಬಂದಿರುವ ಕ್ರೈಂ ಸುದ್ದಿಗಳ ವರದಿ ಇಲ್ಲಿದೆ ತಪ್ಪದೇ ಓದಿ

ಶಿರಾಳಕೊಪ್ಪ ಠಾಣೆ ; ವರದಕ್ಷಿಣೆ ಕಿರುಕುಳ

ಶಿರಾಳಕೊಪ್ಪ ಠಾಣೆ ; ವರದಕ್ಷಿಣೆ ಕಿರುಕುಳ

ಶ್ರೀಮತಿ ನರಕೀನಾ ಭಾನು ಕೋಂ ಸೈಯದ್ ಸಾದತ್ 21 ವರ್ಷ ವಾಸ; ಉಡುಗಣಿ ಗ್ರಾಮ 1 ವರ್ಷದ ಹಿಂದೆ ಆರೋಪಿತ ಸೈಯದ್ ಸಾದತ್ ವಾಸ; ಉಡುಗಣಿ ನೊಂದಿಗೆ ಮದುವೆ ಆಗಿದ್ದು ಪ್ರತಿದಿನದಂತೆ ಪಿರ್ಯಾದಿ ವಿಪರೀತ ಕುಡಿದು ಮನೆಯಲ್ಲಿ ಅಡುಗೆ ಮಾಡುತ್ತಿದ್ದ ಆರೋಪಿತಳಿಗೆ ಕಾಲಿನಿಂದ ಒದ್ದು ,ಗಲಾಟೆ ಮಾಡಿ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿಹಚ್ಚಿ ಕೊಲ್ಲಲು ಪ್ರಯತ್ನಪಟ್ಟಿದ್ದು ,ಪಿರ್ಯಾದಿಯ ಮೈಯಲ್ಲಾ ಸುಟ್ಟುಹೋಗಿ ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ.

ಕೋಲಾರ ಗ್ರಾಮಾಂತರ

ಕೋಲಾರ ಗ್ರಾಮಾಂತರ

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ತಾಲೂಕು ಸಿಂಗೊಂಡಹಳ್ಳಿ ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ.

ಸಿಂಗೊಂಡಹಳ್ಳಿ ಗ್ರಾಮದ ವಾಸಿ ವೆಂಕಟೇಶಪ್ಪ ಎಂಬುವರ ಮೇಲೆ ಜಗಳ ತೆಗೆದ ಅಂಗಡಿ ಗೋಪಾಲ ಎಂಬುವರು ಅವಾಚ್ಯ ಶಬ್ದಗಳಿಂದ ಬೈದು ದೊಣ್ಣೆಯಿಂದ ಹೊಡೆದು ಹಲ್ಲೆ ಮಾಡಿ ಪ್ರಾಣಬೆದರಿಕೆ ಹಾಕಿರುತ್ತಾರೆ. ಹಳೇ ವೈಷಮ್ಯ ಈ ಕೃತ್ಯಕ್ಕೆ ಕಾರಣವಾಗಿರುತ್ತದೆ.
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08152-243066 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ

ಚಿಕ್ಕಮಗಳೂರು

ಚಿಕ್ಕಮಗಳೂರು

ಗೋಣಿಬೀಡು ಪೊಲೀಸ್ ಠಾಣೆ ಮೊ.ಸಂ. 112/2013 - ಕಲಂ: 379 ಐಪಿಸಿ - ಪಿರ್ಯಾದುರಾರರು ಪ್ರದೀಪ್ ದೇವರುಂದ ವಾಸಿ ಇವರು ಟಿವಿಎಸ್ ವಿಕ್ಟರ್ ಜಿಎಕ್ಸ್ ಬೈಕ್ ನಂ- ಕೆಎ-46, ಇ-735 ಬೈಕ್ ನ್ನು ದೇವರುಂದ ಮೂಡಿಗೆರೆ ರಸ್ತೆಯ ಅಜ್ಜಿ ಹಿತ್ಲು ಗೆ ಹೋಗುವ ರಸ್ತೆ ಬದಿಯಲ್ಲಿ ನಿಲ್ಲಿಸಿ ಜೆಸಿಬಿಯಲ್ಲಿ ರಸ್ತೆ ಕೆಲಸ ಮಾಡಿಸುತ್ತಿದ್ದು ಕೆಲಸ ಮುಗಿಸಿ ಸಂಜೆ ಸುಮಾರು 6-00 ಗಂಟೆಗೆ ಹೋಗಿ ಬೈಕ್ ನೋಡಿದಾಗ ನಿಲ್ಲಿಸಿದ ಸ್ಥಳದಲ್ಲಿ ಬೈಕ್ ಇರದೇ ಯಾರೋ ಕಳ್ಳರು ಬೈಕ್ ನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.

ಉಡುಪಿ

ಉಡುಪಿ

ನಾಗವೇಣಿ ಪಿ.ಡಿ.ಓ ಗ್ರಾಮ ಪಂಚಾಯತಿ ಉಪ್ಪುಂದ ಗ್ರಾಮ ಕುಂದಾಪುರ ತಾಲೂಕು ಇವರು ನ.13 ಉಪ್ಪುಂದ ಗ್ರಾಮದ ವಿವಾದಿತ ಅನಧಿಕೃತವಾದ ಹಂದಿ ಸಾಕಣೆ ಕೇಂದ್ರ ವನ್ನು ಸಾರ್ವಜನಿಕ ಆಕ್ಷೇಪ, ವಿಶೇಷ ತಹಶೀಲ್ದಾರ್ ಆದೇಶದಂತೆ ತೆರವುಗೊಳಿಸಲು ಸದ್ರಿ ಹಂದಿ ಸಾಕಣೆ ಕೇಂದ್ರವನ್ನು ನೆಡೆಸುತ್ತಿದ್ದ ಫಿಲೋಮಿನಾ ರೋಡ್ರಿಗಸ್ ವಾಸ ಜನತಾ ಕಾಲೋನಿ, ಉಪ್ಪುಂದ ಗ್ರಾಮ ಎಂಬುವರ ಜಾಗಕ್ಕೆ ತೆರಳಿ ಸದ್ರಿ ಅನಧಿಕೃತ ಹಂದಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನೆಡೆಸಿದ ಸಂಧರ್ಭದಲ್ಲಿ ಫಿಲೋಮಿನಾ ರೋಡ್ರಿಗಸ್ ರ ಪತಿ ಥಾಮಸ್ ರೋಡ್ರಿಗಸ್ ಎಂಬಾತನು ನಾಗವೇಣಿರವರಿಗೆ ಕರ್ತವ್ಯ ನಿರ್ವಹಿಸದಂತೆ ಬೆದರಿಕೆಯೊಡ್ಡಿ ಭಯಾನಕವಾದ ನಾಯಿಯನ್ನು ಛೂ ಬಿಡಲು ಪ್ರಯತ್ನಿಸುವ ಮೂಲಕ ಹಲ್ಲೆ ನೆಡೆಸಿ ನಾಗವೇಣಿರವರ ಕಾನೂನು ಬದ್ದ ಕರ್ತವ್ಯಕ್ಕೆ ಅಡ್ಡಿ ಪಡಿಸಿದುದಾಗಿದೆ ಈ ಬಗ್ಗೆ ಬೈಂದೂರು ಠಾಣಾ ಅಪರಾಧ ಕ್ರಮಾಂಕ 268/13 ಕಲಂ 353 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೆಯಲ್ಲಿರುತ್ತದೆ.

ದಾವಣಗೆರೆ

ದಾವಣಗೆರೆ

ಠಾಣಾ ಸರಹದ್ದಿನಲ್ಲಿ ಗಸ್ತು ಮಾಡುತ್ತಿರವಾಗ ಜಿಲ್ಲಾ ಪಂಚಾಯ್ತಿ ಹತ್ತಿರ ಅಂಡರ್ ಬ್ರಿಡ್ಜ್ ಕೆಳಗೆ 09 ಜನ ಅಂದರ್-ಬಾಹರ್ ಎಂಬ ನಸೀಬಿನ ಜೂಜಾಟ ಆಡುತ್ತಿದ್ದರೆಂತಾ ಬಂದ ಖಚಿತ ಮಾಹಿತಿ ಮೇರೆಗೆ ಪಿಎಸ್ಐ ಅಪರಾಧ ವಿಬಾಗ ಹಾಗೂ ಠಾಣಾ ಸಿಬ್ಬಂದಿಯೊಂದಿಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ಇಸ್ಪಿಟ್ ಜೂಜಾಡುತ್ತಿದ್ದವರ ಮೇಲೆ ದಾಳಿ ಮಾಡಿ 09 ಜನ ಆರೋಪಿತರು ಮತ್ತು 52 ಇಸ್ಪೀಟ್ ಎಲೆಗಳನ್ನು ಹಾಗೂ 2620/- ರೂ ನಗದು ಹಣವನ್ನು ವಶಕ್ಕೆ ಪಡೆದು 5.30 ಠಾಣೆಗೆ ಬಂದು ವರದಿ ತಯಾರಿಸಿ 5.30 ಕ್ಕೆ ಸ್ವ-ದೂರಿನ ಮೇರೆಗೆ ಮೇಲ್ಕಂಡಂತೆ ಕೇಸು ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+