ಮರಳು ದಂಧೆಗೆ ಕೋಲಾರದ ಪೇದೆ ಬಲಿ

ಕೋಲಾರ, ನ.13: ಜಿಲ್ಲೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಮರಳು ಮಾಫಿಯಾ ಕಳೆದ ರಾತ್ರಿ ಪೊಲೀಸ್ ಕಾನ್ ಸ್ಟೇಬಲ್ ಒಬ್ಬರನ್ನು ಬಲಿ ತೆಗೆದುಕೊಂಡಿದೆ.

ರಾತ್ರಿ ವೇಳೆ ಮರಳು ಲಾರಿಗಳನ್ನು ಪರಿಶೀಲನೆ ನಡೆಸುತ್ತಿದ್ದ ವೇಳೆಯಲ್ಲಿ ವೇಗವಾಗಿ ಬಂದ ಮರಳು ಲಾರಿಯೊಂದನ್ನು (ಕೆಎ-63, ಎ-2345) ತಪಾಸಣೆಗೆಂದು ತಡೆದಿದ್ದಾರೆ. ವೇಗವಾಗಿ ಬರುತ್ತಿದ್ದ ಲಾರಿ ಚಾಲಕ ಏಕಾಏಕಿ ಶಿವಕುಮಾರ್ ಮೇಲೆಯೇ ಲಾರಿ ಹರಿಸಿದ್ದಾನೆ. ಸ್ಥಳದಲ್ಲೇ ಶಿವಕುಮಾರ್ ಮೃತಪಟ್ಟಿದ್ದು, ಮತ್ತೊಬ್ಬ ಕಾನ್ ‌ಸ್ಟೇಬಲ್ ಲಾರಿಯನ್ನು ಹಿಂಬಾಲಿಸಿದ್ದಾರೆ.

ಮೂಲತಃ ಕೋಲಾರ ಜಿಲ್ಲೆಯ ತಿಮ್ಮಸಂದ್ರ ಗ್ರಾಮದ ಶಿವಕುಮಾರ್ ಗೆ ಪತ್ನಿ ಕೋಮಲಾ, 16 ವರ್ಷದ ಪುತ್ರ ಹರ್ಷಿತ್, 13 ವರ್ಷದ ಪುತ್ರಿ ಅಶ್ವಿನಿ ಇದ್ದಾರೆ.

ಕಳೆದ ರಾತ್ರಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಅಕ್ರಮ ಮರಳು ಸಾಗಣೆ ಲಾರಿಗಳನ್ನು ತಪಾಸಣೆ ಮಾಡುತ್ತಿದ್ದ ವೇಳೆ ನಗರ ಠಾಣೆ ಕಾನ್ ಸ್ಟೇಬಲ್ ಟಿ.ಎಂ.ಶಿವಕುಮಾರ್ (40) ಮೇಲೆ ಮರಳು ಲಾರಿ ಹರಿಸಲಾಗಿದೆ. ರಾತ್ರಿ ವೇಳೆ ಹೆದ್ದಾರಿಯಲ್ಲಿ ಅಕ್ರಮವಾಗಿ ಮರಳು ಸಾಗಣೆ ಮಾಡುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ್ದ ಅಧಿಕಾರಿಗಳು ಲಾರಿಗಳನ್ನು ತಪಾಸಣೆ ಮಾಡಲು ಶಿವಕುಮಾರ್ ಹಾಗೂ ಠಾಣೆಯ ಮತ್ತೊಬ್ಬ ಕಾನ್ ಸ್ಟೇಬಲ್ ಅವರನ್ನು ನಿಯೋಜಿಸಿದ್ದರು.

ಆದರೆ, ರಾತ್ರಿ 2.15ರ ಸುಮಾರಿಗೆ ನಗರ ಹೊರ ವಲಯದ ಕೊಂಡರಾಜನಹಳ್ಳಿ ಆಂಜನೇಯ ದೇಗುಲ ಬಳಿ ಮರಳು ಲಾರಿಗಳನ್ನು ತಡೆದು ಈ ಇಬ್ಬರು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಚಾಲಕ ಸಿಕ್ಕಿಬೀಳುವ ಭಯದಿಂದ ಲಾರಿಯನ್ನು ಬಿಟ್ಟು ಪರಾರಿಯಾಗಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಲಾರಿ ಮಾಲೀಕರ ವಿಳಾಸ ಪತ್ತೆಹಚ್ಚಿ ಮುಂದಿನ ಕ್ರಮ ಜರುಗಿಸಿದ್ದಾರೆ.ಲಾರಿ ಬೆಂಗಳೂರು ಮೂಲದ ವ್ಯಕ್ತಿಯೊಬ್ಬರಿಗೆ ಸೇರಿದ್ದೆಂದು ತಿಳಿದು ಬಂದಿದೆ.

ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ಕೋಲಾರ ಮುಂತಾದ ಕಡೆಗಳಿಂದ ಬಂದಿರುವ ಕ್ರೈಂ ಸುದ್ದಿಗಳ ವರದಿ ಇಲ್ಲಿದೆ ತಪ್ಪದೇ ಓದಿ

ಕೋಲಾರ

ಕೋಲಾರ

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ತಾಲೂಕು ಸಿಂಗೊಂಡಹಳ್ಳಿ ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ.

ಸಿಂಗೊಂಡಹಳ್ಳಿ ಗ್ರಾಮದ ವಾಸಿ ವೆಂಕಟೇಶಪ್ಪ ಎಂಬುವರ ಮೇಲೆ ಜಗಳ ತೆಗೆದ ಅಂಗಡಿ ಗೋಪಾಲ ಎಂಬುವರು ಅವಾಚ್ಯ ಶಬ್ದಗಳಿಂದ ಬೈದು ದೊಣ್ಣೆಯಿಂದ ಹೊಡೆದು ಹಲ್ಲೆ ಮಾಡಿ ಪ್ರಾಣಬೆದರಿಕೆ ಹಾಕಿರುತ್ತಾರೆ. ಹಳೇ ವೈಷಮ್ಯ ಈ ಕೃತ್ಯಕ್ಕೆ ಕಾರಣವಾಗಿರುತ್ತದೆ.
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08152-243066 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

ಶಿವಮೊಗ್ಗ

ಶಿವಮೊಗ್ಗ

ಶಿವಮೊಗ್ಗ ಗ್ರಾಮಾಂತರ: ಅಪಘಾತದಿಂದ ಮರಣ

ಪಿರ್ಯಾದಿ ಚಂದ್ರನಾಯ್ಕ್ 40 ವರ್ಷ ವಾಸ ಅಬ್ಬಲಗೆರೆ ಇವರ ಅಳಿಯ ರವಿನಾಯ್ಕ ಅಬ್ಬಲಗೆರೆ ಮೈನ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿಯು ತನ್ನ ವಾಹನವನ್ನು ಅತಿ ವೇಗ ಹಾಗೂ ಅಜಾಗರುಕತೆಯಿಂದ ಚಲಿಸಿ ಡಿಕ್ಕಿ ಹೊಡೆಸಿದ ಪರಿಣಾಮ ತಲೆಗೆ ಪೆಟ್ಟು ಬಿದ್ದು ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ದಾಖಾಲಿಸಲಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿರುತ್ತಾನೆ

ಉಡುಪಿ

ಉಡುಪಿ

ಕುಂದಾಪುರ ತಾಲೂಕು ನಾಡಾ ಗ್ರಾಮದ ಪಡುಕೋಣೆ ಹಳಿಯಮ್ಮ ದೈವದ ಮನೆಯ ಎದುರಿನ ಬಾಗಿಲನ್ನು ಯಾರೋ ಕಳ್ಳರು ಬಲಾತ್ಕಾರವಾಗಿ ದೂಡಿ ಒಂದು ಸ್ಟಿಲ್‌ ಮತ್ತು ತಾಮೃದ ಡಬ್ಬಿಯನ್ನು ಹಾಗೂ ಅಲ್ಲೇ ಪಕ್ಕದಲ್ಲಿರುವ ಕಾಣಿಕೆ ಡಬ್ಬಿಯನ್ನು ಸಹ ಒಡೆದು ಹಾಗೂ ದೈವಸ್ಥಾನದ ಪಕ್ಕದಲ್ಲಿರುವ ಜಟ್ಟಿಗೇಶ್ವರ ದೈವದ ಮನೆಯ ಒಂದು ಕಬ್ಬಿಣದ ಕಾಣಿಕೆ ಡಬ್ಬದ ಬೀಗದ ಕೊಂಡಿಯನ್ನು ಮುರಿದು ಹಾಗೂ ನಾಗಸ್ಥಾನದಲ್ಲಿದ್ದ ತಾಮೃದ ಒಂದು ಕಾಣಿಕೆ ಡಬ್ಬಿ ಮತ್ತು ಹೊರಸುತ್ತಿನ ಹೈಗುಳಿಯ ತಾಮೃದ ಒಂದು ಕಾಣಿಕೆ ಡಬ್ಬಿಯನ್ನು ಒಡೆದು ಅದರಲ್ಲಿದ್ದ ಒಟ್ಟು ಆರು ಡಬ್ಬಿಗಳಿಂದ ಅಂದಾಜು ಸುಮಾರು ಆರು ನೂರು ರೂಪಾಯಿ ನಗದನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂಬುದಾಗಿ ನಾರಾಯಣ ಎಂ ಶೆಟ್ಟಿ ಸಂಸಾಡಿ ಆಡಳಿತ ಮಂಡಳಿ ಅದ್ಯಕ್ಷರು ಚಿಕ್ಕಣಮಕ್ಕಿ ಹಾಗೂ ಹಳಿಯಮ್ಮ ದೇವಸ್ಥಾನ ಪಡುಕೋಣೆ, ನಾಡಾ ಗ್ರಾಮರವರು ನೀಡಿದ ದೂರಿನಂತೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 114/2013 ಕಲಂ 457, 380 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ದಾವಣಗೆರೆ ಹಲುವಾಗಲು ಪೊಲೀಸ್ ಠಾಣೆ

ದಾವಣಗೆರೆ ಹಲುವಾಗಲು ಪೊಲೀಸ್ ಠಾಣೆ

ಮೃತನು ಹೆಚ್. ಶಶೀಕುಮಾರ, 18ವರ್ಷ ಈತನು ತನ್ನ ಗ್ರಾಮದ ತನ್ನ ಮನೆಯಲ್ಲಿ ಮೃತನ ತಂದೆ ಮನೆ ಕೆಲಸ ಮಾಡಲು ಹೇಳಿ ಬೈಯ್ದು ಬುದ್ದಿವಾದ ಹೇಳಿದ್ದಕ್ಕೆ ಅದನ್ನೆ ಮನಸಲ್ಲಿ ಇಟ್ಟುಕೊಂಡು ಬೇಸರ ಮಾಡಿಕೊಂಡು ತನ್ನ ಗ್ರಾಮದಲ್ಲಿ ಮೃತನು ದನದ ಕೊಟ್ಟಿಗೆಯಲ್ಲಿದ್ದ ಯಾವುದೂ ವಿಷಸೇವನೆ ಮಾಡಿ ಒದ್ದಡುತ್ತಿದ್ದವನನ್ನು ಚಿಕಿತ್ಸೆಗೆ ತೆಲಿಗಿ ಸರ್ಕಾರಿ ಆಸ್ಪತ್ರೆಗೆ ಒಂದು ವಾಹನದಲ್ಲಿ ಕೆದು ಕೊಂಡು ಹೊಗುತ್ತಿದ್ದಾಗ ಮಾರ್ಗಮದ್ಯದಲ್ಲಿ ರಾತ್ರಿ ಸಮಯದಲ್ಲಿ ಮೃತ ಪಟ್ಟಿರುತ್ತಾನೆ ಅಂತಾ ಇದ್ದ ಲಿಖಿತ ದೂರಿನ ಮೇರೆಗೆ ಮೇಲ್ಕಂಡಂತೆ ಕೇಸು ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೆ. ಯು.ಡಿ.ಆರ್ ನಂ: 29/2013, ಕಲಂ: 174 ಸಿ.ಆರ್.ಪಿ.ಸಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+