ಹೆದ್ದಾರಿ ಅಪಘಾತ: ಶಿವಗಂಗೆ ರಸ್ತೆಯಲ್ಲಿ ಇಬ್ಬರು ಮರಣ
ಬೆಂಗಳೂರು, ಜ.22: ಶಿವಗಂಗೆ ರಸ್ತೆಯಲ್ಲಿ ಆಟೋರಿಕ್ಷಾ ಹಾಗೂ ಟ್ರಾಕ್ಟರ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಆಟೋರಿಕ್ಷಾದಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬುಧವಾರ ಬೆಳಗ್ಗೆ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ 4 ರ ನೆಲಮಂಗಲ ತಾಲೂಕಿನ ಹೋನ್ನೇನ ಹಳ್ಳಿ ಬಳಿ ಈ ಅಪಘಾತವಾಗಿದೆ. ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಓರ್ವನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ದಾಬಸ್ ಪೇಟೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಪರೀಶಿಲನೆ ಕೈಗೊಂಡಿದ್ದಾರೆ. ಆಕ್ರೋಶಗೊಂಡ ಗ್ರಾಮಸ್ಥರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಕೋಲಾರ, ಉಡುಪಿ, ಚಿಕ್ಕಮಗಳೂರು, ತುಮಕೂರು, ಶಿವಮೊಗ್ಗ ಮುಂತಾದ ಜಿಲ್ಲೆಗಳಿಂದ ಬಂದಿರುವ ಕ್ರೈಂ ವರದಿಗಳತ್ತ ಕಣ್ಣು ಹಾಯಿಸಿ

ಕರ್ನಾಟಕ ರಾಜ್ಯ ಕ್ರೈಂ ನ್ಯೂಸ್ ಕವರೇಜ್
ಅಂದರ್-ಬಾಹರ್ ಜೂಜಾಟ ದಾಳಿ : ಶಿವಪ್ರಸಾದ್, ಸಿ.ಪಿ.ಐ, ಶ್ರೀನಿವಾಸಪುರ ವೃತ್ತ ಮತ್ತು ಸಿಬ್ಬಂದಿಯವರು ಶ್ರೀನಿವಾಸಪುರ ವೃತ್ತ, ಸೋಮಯಾಜನಹಲ್ಲಿ ಗ್ರಾಮದ ಬಳಿ ಅಂದರ್-ಬಾಹರ್ ಜೂಜಾಟದಲ್ಲಿ ನಿರತರಾಗಿದ್ದ 5 ಜನರ ಮೇಲೆ ದಾಳಿ ಮಾಡಿ, ಅವರಿಂದ 10, 000ರೂ.ಗಳನ್ನು ವಶಪಡಿಸಿಕೊಂಡಿರುತ್ತಾರೆ. ಈ ಬಗ್ಗೆ ಶ್ರೀನಿವಾಸಪುರ ಠಾಣೆಯಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆಯ ರೀತ್ಯಾ ಪ್ರಕರಣ ದಾಖಲಾಗಿರುತ್ತದೆ.
ಬಂಧಿತರ ವಿವರ.
* ವೆಂಕಟರಮಣ, ಸೋಮಯಾಜಲಹಳ್ಳಿ, ಶ್ರೀನಿವಾಸಪುರ ತಾಲ್ಲೂಕು,
* ಹರೀಶ್, ಸೋಮಯಾಜಲಹಳ್ಳಿ, ಶ್ರೀನಿವಾಸಪುರ ತಾಲ್ಲೂಕು,
* ರಮೇಶ್, ನಾರಾಯಣಪುರ, ಶ್ರೀನಿವಾಸಪುರ ತಾಲ್ಲೂಕು,
* ಮದನ್ @ ಮಧು, ಬಾಚಿನಕೊಂಡಾ, ಮದನಪಲ್ಲಿ ತಾಲ್ಲೂಕು, ಆಂಧ್ರಪ್ರದೇಶ,
* ಚಿನ್ನಗಾಡು, ನೇರ್ನಹಳ್ಳೀ, ಶ್ರೀನಿವಾಸಪುರ ತಾಲ್ಲೂಕು.

ಸಖರಾಯಪಟ್ಟಣ : ಅಪಘಾತದಲ್ಲಿ ಸಾವು
ಸಖರಾಯಪಟ್ಟಣ ಪೊಲೀಸ್ ಠಾಣೆ ಮೊ.ಸಂ.08/2014 - ಕಲಂ:279 304(ಎ) ಐಪಿಸಿ - ದಿನಾಂಕ 20/01/2014 ರಂದು 2330 ಗಂಟೆಯಲ್ಲಿ ಹಿರೇಗೌಜ ಸಮೀಪ ಸದಾಶಿವ ರವರಿಗೆ ಸೇರಿದ ಜಮೀನಿನಲ್ಲಿ ಬೋರ್‌ವೆಲ್ ಲಾರಿ ಚಾಲಕ ವಿಶ್ವನಾಥನ್ ಕೆ01 ಎಬಿ 6185 ನ್ನು ರಾತ್ರಿ ಸುಮಾರು 11-30 ಬೋರ್ ಕೊರೆಯುತ್ತಿದ್ದ ಸ್ಥಳದಿಂದ ಸ್ವಲ್ಪ ದೂರದಲ್ಲಿ ಲಾರಿಯ ಕೆಲಸಗಾರನಾದ ಶಿವಪೆರುಮಾಳ್ ಬಿನ್ ವೀರಪ್ಪನ್ ಎಂಬುವವರ ವಿಶ್ರಾಂತಿ ಪಡೆಯುತ್ತಿದ್ದು ಪಿರ್ಯಾದುದಾರರಾದ ಶಿವಶಂಕರ್ ಮತ್ತು ಉಳಿದವರು ಬೋರ್ ಕೊರೆಯುವ ಕೆಲಸ ಮಾಡುತ್ತಿದ್ದು ನಂತರ ಸದರಿ ಡಿಸೇಲ್ ತುಂಬಿಸಿಕೊಂಡು ಬರಲು ಹೋಗಿದ್ದ ಕೆಎ-01-ಎಬಿ-6185 ರ ಲಾರಿಯ ಚಾಲಕ ಲಾರಿಯನ್ನು ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಲಾರಿಯನ್ನು ಸರಿಯಾದ ಸ್ಥಳದಲ್ಲಿ ನಿಲ್ಲಿಸಲು ಹಿಮ್ಮುಖವಾಗಿ ಚಾಲನೆ ಮಾಡುತ್ತಿರುವಾಗ್ಗೆ ಅಲ್ಲೇ ವಿಶ್ರಾಂತಿ ಪಡೆಯುತ್ತಿದ್ದ ಶಿವಪೆರುಮಾಳ್ ಬಿನ್ ವೀರಪ್ಪನ್ ಎಂಬುವವರ ತಲೆಯ ಮೇಲೆ ಸದರಿ ಲಾರಿಯ ಎಡಭಾಗದ ಹಿಂದಿನ ಚಕ್ರವು ಹತ್ತಿ ಶಬ್ದವಾಯಿತು. ಕೂಡಲೇ ನಾನು ಮತ್ತು ನಮ್ಮ ಕೆಲಸಗಾರರು ಮತ್ತು ಸ್ಥಳದಲ್ಲಿಯೇ ಇದ್ದ ಸದರಿ ತೋಟದ ಮಾಲೀಕರಾದ ವಿಶ್ವನಾಥ ಬಿನ್ ಪುಟ್ಟಪ್ಪ ರವರು ಸೇರಿ ಬಂದು ನೋಡಲಾಗಿ ಶಿವಪೆರುಮಾಳ್ ರವರ ಮೇಲೆ ಲಾರಿ ಚಕ್ರ ಹತ್ತಿದ್ದರಿಂದ ತಲೆಯು ಸಂಪೂರ್ಣ ಜಜ್ಜಿ ಹೋಗಿ ಶಿವಪೆರುಮಾಳ್ ರವರು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ.
ಲಾರಿ ಚಾಲಕನಾದ ವಿಶ್ವನಾಥನ್ ಬಿನ್ ಪಳನಿಸ್ವಾಮಿ ರವರು ನಿರ್ಲಕ್ಷತೆಯಿಂದ ಹಿಮ್ಮಖವಾಗಿ ಲಾರಿ ಚಾಲನೆ ಮಾಡಿದ್ದರಿಂದ ಸಂಭವಿಸಿರುತ್ತೆ. ಆದ್ದರಿಂದ ಸದರಿ ಲಾರಿ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಕೋರುತ್ತೇನೆ.
ಹೊಳೆಹೊನ್ನೂರು ಠಾಣೆ: ಅಸ್ವಾಭಾವಿಕ ಸಾವು ಪ್ರಕರಣ
ಹೊಳೆಹೊನ್ನೂರು ಠಾಣೆ: ಅಸ್ವಾಭಾವಿಕ ಸಾವು ಪ್ರಕರಣ
ತಿಪ್ಪೇಶಪ್ಪ ಬಿನ್ ಹೊನ್ನಪ್ಪ 30 ವರ್ಷ, ತಟ್ಟೆಹಳ್ಳಿ ಭದ್ರಾವತಿ ತಾ ಇವನು ಜೀವನದಲ್ಲಿ ಜಿಗುಪ್ಸೆಗೊಂಡು ಅತೀಯಾದ ಮದ್ಯಪಾನ ಸೇವನೆ ಮಾಡಿ ಅಸ್ವಸ್ಥನಾಗಿದ್ದು, ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವ ಬಗ್ಗೆ.

ಕಾರ್ಕಳ : ಅಸ್ವಾಭಾವಿಕ ಮರಣ ಪ್ರಕರಣ
ಕಾರ್ಕಳ ನಗರ:ದಿನಾಂಕ:21/21/2014 ರಂದು ರಂದು ರಾತ್ರಿ 10:00 ಘಂಟೆಯಿಂದ ಈ ದಿನ ದಿನಾಂಕ22/01/2014 ರಂದು ಬೆಳಗಿನ ಜಾವ 05:00 ಘಂಟೆಯ ಮಧ್ಯಾವಧಿಯಲ್ಲಿ ಕಾರ್ಕಳ ತಾಲೂಕು ಕಸಬಾ ಗ್ರಾಮದ ಪತ್ತೊಂಜೆಕಟ್ಟೆ ಎಂಬಲ್ಲಿ ಪಿರ್ಯಾದಿದಾರರಾದ ಸದಾನಂದ ಪೂಜಾರಿ (43) ತಂದೆ:ದಿವಂಗತ ಮಾರಪ್ಪ ಪೂಜಾರಿ ವಾಸ:ಶ್ರೀನಿಧಿ, ಗುಂಡ್ಯ ಪತ್ತೊಂಜೆಕಟ್ಟೆ, ಕಸಬಾ ಗ್ರಾಮ, ಕಾರ್ಕಳ ತಾಲೂಕುರವರ ಭಾವ ಕಿಶೋರ್ (49) ಎಂಬವರು ಹೊಟ್ಟೆನೋವಿನಿಂದ ಬಳಲುತಿದ್ದವರು ಎಷ್ಟು ಔಷಧ ಮಾಡಿದರೂ ಗುಣಮುಖವಾಗದೇ ಇದ್ದು ಮತ್ತು ಆರ್ಥಿಕ ಮುಗ್ಗಟಿನಿಂದ ಬಳಲುತಿದ್ದವರು ಅದೇ ವಿಚಾರದಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯ ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಸದಾನಂದ ಪೂಜಾರಿರವರು ನೀಡಿದ ದೂರಿನಂತೆ ಕಾರ್ಕಳ ನಗರ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 03/2014 ಕಲಂ 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಕಳ್ಳಂಬೆಳ್ಳ ಪೊಲೀಸ್ ಠಾಣಾ ಮೊ.ನಂ. 16/2014
ಕಳ್ಳಂಬೆಳ್ಳ ಪೊಲೀಸ್ ಠಾಣಾ ಮೊ.ನಂ. 16/2014, ಕಲಂ 143,323,324,341,504,506
ದಿನಾಂಕ;-21/01/14 ರಂದು ರಂದು ರಾತ್ರಿ 7 ರಿಂದ 7-45 ಗಂಟೆಯವರೆಗೆ ತುಮಕೂರು ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ರವಿಕುಮಾರ್ ಬಿನ್ ಲಕ್ಷ್ಮಯ್ಯ. ಸಲುಪರಹಳ್ಳಿ. ಶಿರಾ ತಾಲ್ಲೂಕ್ ರವರು ನೀಡಿದ ದೂರಿನ ಅಂಶವೇನೆಂದರೆ ನಾನು ದಿ;20/01/14 ರಂದು ರಾತ್ರಿ 7-20 ಗಂಟೆಗೆ ಮನೆಯಲ್ಲಿದ್ದಾಗ ನಮ್ಮೂರಿನ ನಮ್ಮ ಜನಾಂಗದವರೇ ಆದ ರಾಮಯ್ಯ, ಈತನ ಹೆಂಡತಿ ಸಿದ್ಧಗಂಗಮ್ಮ. ಇವರ ಮಕ್ಕಳಾದ ಸಿದ್ದಯ್ಯ. ನರಸಿಂಹಮೂತರ್ಿ. ಭಾಗ್ಯಮ್ಮ. ರಂಗಯ್ಯ. ಲಕ್ಷ್ಮಣ ಇವರುಗಳೆಲ್ಲರೂ ಅಕ್ರಮ ಗುಂಪು ಕಟ್ಟಿಕೊಂಡು ನಮ್ಮ ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ ಏನೋ ನಮ್ಮ ಹೆಣ್ಣು ಮಕ್ಕಳಿಗೆ ಫೋನ್ ಮಾಡಿ ನಿಂದಿಸಿದ್ದೀಯಾ ಎಂತ ಜಗಳ ತೆಗೆದು ನನ್ನ ಜುಟ್ಟು ಹಿಡಿದು ಕೆಡವಿಕೊಂಡು ದೊಣ್ಣೆಗಳಿಂದ ಹೊಡೆದು ಬಿಡಿಸಲು ಬಂದ ನಮ್ಮ ತಾಯಿ ಲಕ್ಷ್ಮಮ್ಮ, ರಂಗಧಾಮಯ್ಯ ರವರಿಗೆ ಕೈಗಳಿಂದ ಹೊಡೆದಿರುತ್ತಾರೆ. ನಮ್ಮ ಲಕ್ಷ್ಮಯ್ಯ ರವರಿಗೆ ಕತ್ತರಿಸಿ ಹಾಕುತ್ತೇವೆಂತ ಪ್ರಾಣ ಬೆದರಿಕೆ ಹಾಕಿರುತ್ತಾರೆ, ಕ್ರಮ ಜರುಗಿಸಿ ಎಂದು ನೀಡಿದ ಹೇಳಿಕೆಯನ್ನು ಹೆಚ್.ಸಿ.291 ಮಹೇಶ್ ರವರು ದೂರನ್ನು ತಂದು ಹಾಜರ್ಪಡಿಸಿದ್ದರ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.












Click it and Unblock the Notifications