ಬೊಮ್ಮಸಂದ್ರ ಗೆಸ್ಟ್ ಹೌಸ್ ನಲ್ಲಿ ಯುವಕನ ಶವ

ಬೆಂಗಳೂರು, ಫೆ.12: ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯ ಅತಿಥಿಗೃಹವೊಂದರಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದ್ದು ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ. ಮೃತನನ್ನು ಇಗ್ಗಲೂರು ಗ್ರಾಮದ 25 ವರ್ಷ ವಯಸ್ಸಿನ ಹರೀಶ್ ಎಂದು ಗುರುತಿಸಲಾಗಿದೆ.

ಬೊಮ್ಮಸಂದ್ರದ ಜನನಿಬಿಡ ಪ್ರದೇಶದಲ್ಲಿರುವ ಚೇತನ್ ಗೆಸ್ಟ್ ಹೌಸ್ ನಲ್ಲಿ ಹರೀಶ್ ಶವ ಪತ್ತೆಯಾಗಿದೆ. ಫೆ.4 ರಂದು ಹರೀಶ್ ಹಾಗೂ ಅವರ ಹಿರಿಯ ಸೋದರರೊಬ್ಬರು ಗೆಸ್ಟ್ ಹೌಸ್ ನ ಕೊಠಡಿಯನ್ನು ಬುಕ್ ಮಾಡಿದ್ದರು. ಮಂಗಳವಾರದ ತನಕ ಹರೀಶ್ ಹಾಗೂ ಅವರ ಅಣ್ಣ ಮೋಹನ್ (28) ಇಬ್ಬರು ಗೆಸ್ಟ್ ಹೌಸ್ ಗೆ ಹೋಗಿ ಬಂದು ಮಾಡಿದ್ದನ್ನು ಸ್ಥಳೀಯರು ನೋಡಿದ್ದಾರೆ.

ಆದರೆ, ನಿನ್ನೆ ದಿವಸ ಹರೀಶ್ ಅವರನ್ನು ಬಿಟ್ಟು ಕೊಠಡಿಗೆ ಬೀಗ ಜಡಿದು ಮೋಹನ್ ಅವರು ಹೊರ ಹೋಗಿದ್ದಾರೆ.ಕೊಠಡಿಯಿಂದ ಕೆಟ್ಟ ವಾಸನೆ ಬಂದ ಕಾರಣ ಸ್ಥಳೀಯರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಬಾಗಿಲು ಮುರಿದು ಒಳಹೊಕ್ಕಾಗ ಹರೀಶ್ ಶವ ಬೆಡ್ ಮೇಲೆ ಬಿದ್ದಿರುವುದು ಪತ್ತೆಯಾಗಿದೆ. ಮೋಹನ್ ನಾಪತ್ತೆಯಾಗಿದ್ದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಉಡುಪಿ : ಜೀವ ಬೆದರಿಕೆ ಪ್ರಕರಣ

ಉಡುಪಿ : ಜೀವ ಬೆದರಿಕೆ ಪ್ರಕರಣ

ಬೈಂದೂರು: ಇಬ್ಬರು ಅಪರಿಚಿತ ವ್ಯಕ್ತಿಗಳು ಫಿರ್ಯಾದಿ ಎನ್.ವಾಸುದೇವ ಪ್ರಭು (54), ತಂದೆ-ರಾಧಾಕೃಷ್ಣ ಪ್ರಭು ವಾಸ-ದಾಮೋದರ್ ನಿಲಯ, ನಾಯ್ಕನಕಟ್ಟೆ, ಕೆರ್ಗಾಲ್ ಗ್ರಾಮ, ಕುಂದಾಪುರ ತಾಲೂಕು ರವರ ಮನೆಗೆ ಬಂದು ತಾವು ಸಿ.ಓ.ಡಿ ಪೊಲೀಸ್ ಸಿಬ್ಬಂದಿಗಳೆಂದು ಅವರಲ್ಲಿ ಓರ್ವನ ಹೆಸರು ಮಹಾಬಲೇಶ್ವರ ಎಂದು ತಿಳಿಸಿದ್ದು, ನಂತರ ಮಂಗಳೂರು ಜೈಲಿನಲ್ಲಿರುವ ಲತೀಫ್ ಎಂಬಾತನಿಗೆ ಜಾಮೀನು ನೀಡಲು 1 ಲಕ್ಷ ರೂಪಾಯಿ, 1 ಎಕರೆ ಜಾಗದ ಪಹಣಿ ಪತ್ರವನ್ನು ಹಾಗೂ ಇಬ್ಬರು ಸರ್ಕಾರಿ ನೌಕರರ ಷ್ಯೂರಿಟಿಯನ್ನು ತಯಾರಿ ಮಾಡುವಂತೆ ಫಿರ್ಯಾದಿದಾರರಿಗೆ ಹೇಳಿದ್ದು, ಫಿರ್ಯಾದಿದಾರರು ನನಗೂ ಮತ್ತು ,ಲತೀಫ್ ಗೂ ಯಾವುದೇ ಸಂಬಂಧವಿರುವುದಿಲ್ಲ, ನಾನೇಕೆ ಜಾಮೀನು ನೀಡಬೇಕು ಎಂದು ತಿಳಿಸಿದಾಗ,ಆರೋಪಿ ಮಹಾಬಲೇಶ್ವರನು ಹಣ ಮತ್ತು ಜಾಮೀನು ನೀಡದಿದ್ದರೆ ನಿಮ್ಮನ್ನು ಈ ಕೇಸಿನಲ್ಲಿ ಸೇರಿಸುವುದಾಗಿ ತಿಳಿಸಿದ್ದು ನಂತರ ದಿನಾಂಕ 11/02/2014 ರಂದು ಮದ್ಯಾಹ್ನ 2.05 ಗಂಟೆಗೆ ಫಿರ್ಯಾದಿದಾರರಿಗೆ ಕರೆ ಮಾಡಿ 1 ಲಕ್ಷ ರೂಪಾಯಿ, 1 ಎಕರೆ ಜಾಗದ ಪಹಣಿ ಪತ್ರವನ್ನು ರೆಡಿ ಮಾಡಿದ್ದೀರಾ ಎಂದು ಕೇಳಿದ್ದು, ನಂತರ ಸಂಜೆ 4.30 ಗಂಟೆಗೆ ಆರೋಪಿಯು ತನ್ನ ಮೋಟಾರು ಬೈಕ್ ನಲ್ಲಿ ಫಿರ್ಯಾದಿದಾರರ ಮನೆಗೆ ಬಂದು ಫಿರ್ಯಾದಿದಾರರ ತಮ್ಮ ಮತ್ತು ಅವರ ಹೆಂಡತಿಯನ್ನುದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ನೀವು ನನಗೆ ಹಣ ನೀಡದಿದ್ದರೆ ನಿಮ್ಮನ್ನು ಕೊಲ್ಲದೇ ಬಿಡುವುದಿಲ್ಲವೆಂದು ಜೀವ ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ವಾಸುದೇವ ಪ್ರಭುರವರು ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 29/2014 ಕಲಂ 384, 506 ,504 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಮುಳಬಾಗಿಲು : ವಿಮಾ ಕೇಂದ್ರದಲ್ಲಿ ಕಳ್ಳತನ

ಮುಳಬಾಗಿಲು : ವಿಮಾ ಕೇಂದ್ರದಲ್ಲಿ ಕಳ್ಳತನ

ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣಕ್ಕೆ ಸಂಬಂಧೀಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ರಾತ್ರಿ ಸಮಯದಲ್ಲಿ ಮುಳಬಾಗಿಲು ಟೌನ್, ಸಂತೆ ಮೈದಾನದ ಬಳಿ ಇರುವ ವೆಂಕಟಪ್ಪನವರ ವಿಮಾ ಕೇಂದ್ರದ ಬೀಗವನ್ನು ಯಾರೋ ಕಳ್ಳರು ನಕಲಿ ಕೀಯನ್ನು ಉಪಯೋಗಿಸಿ, ಕಛೇರಿಯ ಒಳ ಪ್ರವೇಶಿಸಿ, ಬೀರುವಿನಲ್ಲಿದ್ದ ಸುಮಾರು 1,00,000-00 ರೂ.ಗಳ ಹಣ ಮತ್ತು ಮೊಬೈಲ್‌ನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08152-243066 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

ತುಂಗಾನಗರ ಠಾಣೆ ಅಸ್ವಾಭಾವಿಕ ಸಾವು ಪ್ರಕರಣ

ತುಂಗಾನಗರ ಠಾಣೆ ಅಸ್ವಾಭಾವಿಕ ಸಾವು ಪ್ರಕರಣ

ಕು|| ಪ್ರಿಯಾಂಕ ಶೆಟ್ಟಿ ಬಿನ್ ದೇವದಾಸ್, 20 ವರ್ಷ, ಗುತ್ಯಪ್ಪ ಕಾಲೋನಿ ಶಿವಮೊಗ್ಗ ಇವಳು ತನ್ನ ಮನೆಯಲ್ಲಿ ಯಾರೋ ಇಲ್ಲದ ಸಮಯದಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿರುವ ಬಗ್ಗೆ.

ಅಕ್ರಮ ಮಧ್ಯ ಮಾರಾಟ ಪ್ರಕರಣ : ರಘುಪತಿ ಬಿನ್ ಲಕ್ಕಪ್ಪ ಈತನು ಸೊರಬ ಟೌನ್ ಭಾಷಾ ಬೀಡಾ ಅಂಗಡಿಯ ಹತ್ತಿರ ಮದ್ಯ ಮಾರಾಟ ಮಾಡುತ್ತಿದ್ದು, ದಾಳಿ ಮಾಡಿ ವಿವಿಧ ಕಂಪನಿಯ ಒಟ್ಟು ರೂ. 10,000/- ಮದ್ಯವನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿದೆ.
ತಿರುಮಣಿ ಠಾಣಾ ಮೊ.ಸಂ: 12/2014. ಕಲಂ: 366 IPC

ತಿರುಮಣಿ ಠಾಣಾ ಮೊ.ಸಂ: 12/2014. ಕಲಂ: 366 IPC

ದಿನಾಂಕ: 11/02/2014 ರಂದು ಬಿ.ಗಂಗಣ್ಣ ಬಿನ್ ಬಜ್ಜಣ್ಣ, 41 ವರ್ಷ, ಕುರುಬರು, ಕ್ಯಾತಗಾನ ಕೆರೆ ಗ್ರಾಮ ಇವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೆಂದರೆ, ನನ್ನ ಮೊದಲನೇ ಮಗಳಾದ ಜಿ.ಜಮುನಾ ಬಿನ್ ಗಂಗಣ್ಣ, 17 ವರ್ಷ, ಇವಳು ಪಾವಗಡ ಪಟ್ಟಣದ ಶಾಂತಿ ಕಾಲೇಜಿನಲ್ಲಿ ಪ್ರಥಮ ಪಿ.ಯು.ಸಿ ವಿದ್ಯಾರ್ಥಿನಿಯಾಗಿದ್ದು, ಪ್ರತಿ ದಿನ ಕಾಲೇಜಿಗೆ ಊರಿನಿಂದ ಹೋಗಿ ಬರುತ್ತಿದ್ದಳು,

ಕಾಲೇಜಿಗೆ ಹೋದವಳು, ಮರಳಿ ಸಾಯಂಕಾಲ ಮನೆಗೆ ವಾಪಸ್ಸು ಬರಲಿಲ್ಲಾ, ನಾವು ಮರು ದಿನ ಕಾಲೇಜಿಗೆ ಹೋಗಿ, ಕಾಲೇಜಿನ ಸಿಬ್ಬಂದಿ ವರ್ಗದವರನ್ನು, & ತನ್ನ ಕಾಲೇಜಿನ ಗೆಳತಿಯರನ್ನು ವಿಚಾರಿಸಿದಾಗ, ಕಾಲೇಜಿಗೆ ಬರಲಿಲ್ಲವೆಂದು ಉತ್ತರ ನೀಡಿದರು, ಆಗ ನಾವು ಪಾವಗಡ & ಬಂಧುಗಳ ಊರಿನಲ್ಲಿ ವಿಚಾರಿಸಿದಾಗ ಅವರು ಕೂಡ ಇಲ್ಲ ಎಂಬ ಉತ್ತರ ನೀಡಿದರು,

ನನ್ನ ಅಣ್ಣನಾದ ಬಜ್ಜಣ್ಣನಿಗೆ ಪೋನ್ ಮಾಡಿ, ತಿಮ್ಮರಾಜು ಬಿನ್ ಹನುಮಂತರಾಯಪ್ಪ, ತಿಮ್ಮಮ್ಮನಹಳ್ಳಿ ರವರು ನನ್ನ ಮಗಳು ಜಮುನಾಳಿಗೆ ಉದ್ಯೋಗ ಕೊಡಿಸುವುದಕ್ಕಾಗಿ ಹೈದರಾಬಾದ್ ಗೆ ಕರೆದುಕೊಂಡು ಹೋಗಿರುತ್ತೇನೆ, ಮರಳಿ ನಾಳೆ ಕಳುಹಿಸಿಕೊಡುತ್ತೇನೆ, ಎಂದು ಹೇಳಿ ಇದುವರೆಗೂ ಕಳುಹಿಸಿಕೊಟ್ಟಿರುವುದಿಲ್ಲಾ, ಮತ್ತೆ ನಾವೇ ಖುದ್ದು ಸದರಿ ನಂಬರಿಗೆ ಪೋನ್ ಮಾಡಿದರೆ ಪದೇ ಪದೇ ನೀವು ಪೋನ್ ಮಾಡಿದರೆ ಜಮುನಾಳನ್ನು ಕೊಂದು ಹಾಕುವುದಾಗಿ ಹೇಳುತ್ತಾನೆ, ನೀವು ಮತ್ತೆ ಪೋನ್ ಮಾಡಬೇಡಿ ನಿಮ್ಮ ಮಗಳನ್ನು 2 ತಿಂಗಳ ನಂತರ ಕಳುಹಿಸಿಕೊಡುತ್ತೇನೆ ಎಂದು ಹೇಳಿದ್ದಾನೆ, ನನ್ನ ಮಗಳಾದ ಜಮುನಾಳಿಗೆ 17 ವರ್ಷಗಳಾಗಿರುತ್ತದೆ, ಇವಳಿಗೆ ಇಲ್ಲಸಲ್ಲದ ಮಾಯಮಾತುಗಳನ್ನು ಹೇಳಿ ತಿಮ್ಮರಾಜನೇ ಕರೆದುಕೊಂಡು ಹೋಗಿರುವುದಾಗಿ ಸತ್ಯಾಂಶ ತಿಳಿದುಬಂದಿರುತ್ತದೆ, ಆದುದರಿಂದ ತಾವುಗಳು ಇದರ ಬಗ್ಗೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕಾಗಿ ನೀಡಿದ ದೂರನ್ನು ಸ್ವೀಕರಿಸಿ ಪ್ರಕರಣ ದಾಖಲು ಮಾಡಿರುತ್ತೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+