ಮಹಿಳೆ ಮೇಲೆ ಹಲ್ಲೆ, ನೋಡುತ್ತಾ ನಿಂತ ಪೇದೆ ಅಮಾನತು
ಬೆಂಗಳುರು
, ಡಿ.20 : ಹೊಸೂರು ಲಸ್ಕರ್ ರಸ್ತೆಯ ಸ್ಟೋನ್ ಅರ್ಟ್ ಮುಂಬಾಗದಲ್ಲಿ ಸುಮಾರು 12-00 ಗಂಟೆಯ ಸಮಯದಲ್ಲಿ ಕಾರು ಸಂಖ್ಯೆ ಕೆ.ಎ.03/5585 ಮತ್ತು 407 ಟೆಂಪೋ ಸಂಖ್ಯೆ: ಕೆ.ಎ.25/5779 ವಾಹನಕ್ಕೆ ಅಪಘಾತವಾಗಿದ್ದು, ಅಪಘಾತಕ್ಕೀಡಾದ ವಿಷಯದ ಬಗ್ಗೆ ಟೆಂಪೋ ಚಾಲಕ ಮತ್ತು ಕಾರು ಚಾಲಕಿ ಜೂಹಿ ಡಿ ಷಾ ಮತ್ತು ಅವರ ಸ್ನೇಹಿತೆ ರಸ್ತೆಯಲ್ಲಿ ಗಲಾಟೆ ಮಾಡಿಕೊಳ್ಳುತ್ತಿದ್ದು, ಸ್ಥಳದಲ್ಲಿದ್ದ ಪೊಲೀಸರ ಮಕ್ಕಳು ಅಸಭ್ಯತನದಿಂದ ವರ್ತಿಸಿ ಹಲ್ಲೆ ಮಾಡಿರುತ್ತಾರೆ. id="toptextpromo"> id='are-slot-1' class='oiad oi-axt oiadv'>ಸದರಿ
ವೇಳೆಯಲ್ಲಿ ಸಂಚಾರ ಪೊಲೀಸರು ಹಾಜರಿದ್ದರೂ ಸಹಾ ಅಮಾಯಕ ಮಹಿಳೆಗೆ ರಕ್ಷಣೆ ನೀಡದಿರುವ ಬಗ್ಗೆ ಆಡುಗೋಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀರಾಮಪ್ಪ, ಎ.ಎಸ್.ಐ. ಮತ್ತು ಮುನಿತಿಮ್ಮಪ್ಪ, ಪಿಸಿ 10925 ರವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತ್ತಿನಲ್ಲಿಡಲಾಗಿದೆ ಎಂದು ಪೊಲೀಸ್ ಆಯುಕ್ತ ರಾಘವೇಂದ್ರ ಔರದಕರ್ ಹೇಳಿದ್ದಾರೆ. ಚಿತ್ರದುರ್ಗ, ದಾವಣಗೆರೆ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ಮುಂತಾದ ಕಡೆಗಳಿಂದ ಬಂದಿರುವ ಕ್ರೈಂ ಸುದ್ದಿಗಳ ವರದಿ ಇಲ್ಲಿದೆ ತಪ್ಪದೇ ಓದಿ... id='are-slot-2' class='oiad oi-axt oiadv'>
ಉಡುಪಿ
ಬ್ರಹ್ಮಾವರ: ಡಿ.19 ರಂದು ಉಡುಪಿ ತಾಲೂಕು ಹಲುವಳ್ಳಿ ಗ್ರಾಮದ ಗುಡ್ಡೆ ಅಂಗಡಿ ಎಂಬಲ್ಲಿ ಪಿರ್ಯಾದಿದಾರರಾದ ದೇವಕಿ (42) ಗಂಡ ದಿ: ಸುರೇಶ್ ಶೇಟ್ಟಿ ವಾಸ ಹೇರೂರು, ಉಡುಪಿ ತಾಲೂಕು ಎಂಬವರು ತನ್ನ ಮಗ ಸುದೇಶ ನೊಂದಿಗೆ ಅವರ ಕಲ್ಲು ಕೋರೆಗೆ ಹೋಗುತ್ತಿದ್ದಾಗ ಆರೋಪಿಗಳಾದ 1) ಮಾಧವ ನಾಯ್ಕ, 2) ಮಾಧವ ನಾಯ್ಕನ ಹೆಂಡತಿ, 3) ಸತೀಶ ನಾಯ್ಕ, 4) ರಾಜೀವ ಕುಲಾಲ್ ಎಂಬವರು ಪಿರ್ಯಾದಿದಾರರಿಗೆ ಮತ್ತು ಅವರ ಮಗನಿಗೆ ಹಲ್ಲೆ ನಡೆಸಿ, ಆಪಾದಿತ ಮಾಧವ ನಾಯ್ಕನು ಪಿರ್ಯಾದಿದಾರರ ಮಗನ ಕುತ್ತಿಗೆಯ ಚಿನ್ನದ ಚೈನನ್ನು ಎಳೆದಾಗ ತುಂಡಾಗಿದ್ದು ಸುಮಾರು 15, 000/- ಮೌಲ್ಯದ ಸರದ ತುಂಡನ್ನು ತೆಗೆದುಕೊಂಡು ಹೋಗಿರುವುದಾಗಿದೆ ಎಂಬುದಾಗಿ ದೇವಕಿರವರು ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 311/13 ಕಲಂ 323, 324, 354, 392 ಜೊತೆಗೆ 34 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಶಿವಮೊಗ್ಗ
ಕಳವು ಪ್ರಕರಣ [ ಕುಂಸಿ ಠಾಣೆ] :ಚೋಡನಾಳ್ ಗ್ರಾಮದ ಉಮಾಮಹೇಶ್ವರಿ ದೇವಸ್ಥಾನದಲ್ಲಿದ್ದ ಹುಂಡಿಯನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುವರು , ಅದರಲ್ಲಿ ಅಂದಾಜು 8000/- ರೂ ಇರಬಹುದು ಎಂದು ಪಿರ್ಯಾದಿ ವೆಂಕಟೇಶ ತಂದೆ ನಾಗಪ್ಪ ವಾಸ ಚೋಡನಾಳ್ ಗ್ರಾಮರವರು ಠಾಣೆಗೆ ದೂರು ನೀಡಿರುವರು

ಕೋಲಾರ
ದೊಂಬಿ ಮತ್ತು ಹಲ್ಲೆ: ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೊಂಬಿ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ತಾಲ್ಲೂಕು, ಮಡೇರಹಳ್ಳಿ ಗ್ರಾಮದಲ್ಲಿ ಸಂಭವಿಸಿರುತ್ತದೆ.
ಮಡೇರಹಳ್ಳಿ ಗ್ರಾಮದ ವಾಸಿ ನರಸಿಂಹಪ್ಪ ಮತ್ತು ಅವರ ಕುಟುಂಬದವರನ್ನ ಅದೇ ಗ್ರಾಮದ ಬುಡಪ್ಪ ಮತ್ತು ಇತರರು ಸೇರಿ ಅಕ್ರಮ ಗುಂಪು ಕಟ್ಟಿಕೊಂಡು ಬಂದು ಜಮೀನಿನ ವಿಚಾರದಲ್ಲಿ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ, ದೊಣ್ಣೆ, ಮಚ್ಚು, ಕಲ್ಲುಗಳಿಂದ ಹಲ್ಲೆ ಮಾಡಿ ಪ್ರಾಣ ಬೆದರಿಕೆ ಹಾಕಿರುತ್ತಾರೆ.
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08152-243066 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

ಚಿಕ್ಕಮಗಳೂರು
ಬಿಸಿಯೂಟದ ಸಿಲಿಂಡರ್ ಕಳುವು ಮೂಡಿಗೆರೆ ಪೊಲೀಸ್ ಠಾಣೆ ಮೊ.ಸಂ.170/2013 - ಕಲಂ: 454 457 380 ಐಪಿಸಿ - ಬಿಳಗುಳದ ಡಾ. ಬಿ .ಆರ್ .ಅಂಬೇಡ್ಕರ್ ಪೌಢಶಾಲೆ ಯಲ್ಲಿ ಬಿಸಿಯೂಟದ ಒಂದು ಕೋಣೆಯಲ್ಲಿ ಎರಡು ಹೆಚ್.ಪಿ ಸಿಲಿಂಡರ್ ಗಳಲ್ಲಿ ಒಂದು ಸಿಲಿಂಡರ್ ನ್ನು ಯಾರೋ ಕಳ್ಳರು ಕದ್ದೋಯ್ದಿರುತ್ತಾರೆ. ಕಾಣೆಯಾದ ಹೆಚ್ .ಪಿ ಸಿಲಿಂಡರ್ ನ ಬೆಲೆ 1700/- ರೂಗಳಾಗಿರುತ್ತದೆ. ದಿನಾಂಕ;14-12-2013 ರಿಂದ ದಿನಾಂಕ;18-12-2013 ರ ಯಾವುದೋ ಸಮಯದಲ್ಲಿ ಕಳ್ಳತನವಾಗಿರುತ್ತದೆ. ಸಿಲಿಂಡರ್ ಮತ್ತು ಕಳ್ಳತನ ಮಾಡಿದವರನ್ನು ಪತ್ತೆ ಮಾಡಿಕೊಡಲು ಕೋರಿ ಹಿತ್ತಲಮನಿ ಮುಖ್ಯಶಿಕ್ಷಕರು ದೂರು ನೀಡಿರುವುದಾಗಿರುತ್ತೆ.












Click it and Unblock the Notifications