ಚುನಾವಣಾ ದಿನಾಂಕಕ್ಕೆ ಕರ್ನಾಟಕ ಬಿಜೆಪಿ ತಕರಾರು

ಬೆಂಗಳೂರು, ಮಾ 10: ಒಂಬತ್ತು ಹಂತದಲ್ಲಿ ನಡೆಯುವ ಲೋಕಸಭಾ ಚುನಾವಣೆಯ ಪೈಕಿ ಕರ್ನಾಟಕದಲ್ಲಿ ನಡೆಯುವ ಚುನಾವಣೆಯ ದಿನಾಂಕವನ್ನು ಬದಲಾಯಿಸುವಂತೆ ಬಿಜೆಪಿ ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ.

ರಾಜ್ಯದಲ್ಲಿ ಏಪ್ರಿಲ್ 17ರಂದು ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಸಾಲು ಸಾಲು ರಜೆ ಇರುವ ಹಿನ್ನಲೆಯಲ್ಲಿ ಚುನಾವಣೆಯ ದಿನಾಂಕವನ್ನು ಏಪ್ರಿಲ್ 22 ಅಥವಾ 23ರಂದು ನಡೆಸ ಬೇಕೆಂದು ರಾಜ್ಯ ಬಿಜೆಪಿ ಘಟಕ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದೆ. (ಭಾನುವಾರ ಮತದಾನಕ್ಕೆ ನೊಂದಾಯಿಸಿಕೊಳ್ಳಿ)

ಚುನಾವಣೆ ನಡೆಯುವ ಎರಡು ದಿನ ಮುನ್ನ ಸಾರ್ವತ್ರಿಕ ರಜಾ ದಿನಗಳಿವೆ. ಅದೇ ವಾರದಲ್ಲಿ ಎರಡು ದಿನ ರಜೆ ಹಾಕಿದರೆ ಒಂದು ವಾರವಿಡೀ ರಜೆ ಸಿಕ್ಕಂತಾಗುತ್ತದೆ.

State BJP unit requested Election Commission to change the Lok Sabha Poll date

ಹಾಗಾಗಿ, ಬಹುತೇಕ ಮಂದಿ ಪ್ರವಾಸಕ್ಕೆ ತೆರಳುವ ಸಾಧ್ಯತೆಯಿದೆ. ಇದರಿಂದ ಮತದಾನದ ಪ್ರಮಾಣದಲ್ಲಿ ಶೇಕಡಾವಾರು ಇಳಿಕೆ ಕಂಡು ಬರಲಿದೆ ಎಂದು ಬಿಜೆಪಿ ಆಯೋಗಕ್ಕೆ ಸಲ್ಲಿಸಿದ ಮನವಿ ಪತ್ರದಲ್ಲಿ ತಿಳಿಸಿದೆ.

ಸುರೇಶ್ ಕುಮಾರ್, ವಿಧಾನ ಪರಿಷತ್ ಸದಸ್ಯ ಅಶ್ವಥ್ ನಾರಾಯಣ್ ಮತ್ತು ಎಸ್ ಪ್ರಕಾಶ್ ಅವರನ್ನು ಒಳಗೊಂಡ ಬಿಜೆಪಿ ನಿಯೋಗ ಸೋಮವಾರ (ಮಾ 10) ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದೆ.

ಚುನಾವಣೆ ನಡೆಯುವ ವಾರದಲ್ಲಿ ಬರುವ ರಜಾ ದಿನಗಳು

ಏ 14 (ಸೋಮವಾರ ) - ಅಂಬೇಡ್ಕರ್ ಜಯಂತಿ
ಏ 15 (ಮಂಗಳವಾರ ) - ಸೌರಮಾನ ಯುಗಾದಿ
ಏ 17 (ಗುರುವಾರ) - ಸಾರ್ವತ್ರಿಕ ಚುನಾವಣೆ
ಏ 18 (ಶುಕ್ರವಾರ) - ಗುಡ್ ಫ್ರೈಡೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+