ಕರ್ನಾಟಕದಿಂದ ರಾಜ್ಯಸಭೆಗೆ ಮತ್ತೆ ಎಂ ವೆಂಕಯ್ಯನಾಯ್ಡು

Posted By:
Subscribe to Oneindia Kannada

ಬೆಂಗಳೂರು, ಮೇ 22: ಕರ್ನಾಟಕದಿಂದ ರಾಜ್ಯಸಭೆ ಚುನಾವಣೆಗೆ ಮತ್ತೊಮ್ಮೆ ಎಂ ವೆಂಕಯ್ಯ ನಾಯ್ಡು ಅವರ ಹೆಸರನ್ನು ಕರ್ನಾಟಕ ಬಿಜೆಪಿ ಶಿಫಾರಸು ಮಾಡಿದೆ. ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಭಾನುವಾರ ನಡೆದ ಕೋರ್ ಕಮಿಟಿಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಆದರೆ, ಎಂಎಲ್ಸಿ ಚುನಾವಣೆಗೆ ತೀವ್ರ ಸ್ಪರ್ಧೆ ಇರುವುದರಿಂದ ಇನ್ನೂ ಯಾವುದೇ ಹೆಸರನ್ನು ಅಂತಿಮ ಗೊಳಿಸಲಾಗಿಲ್ಲ. ವೆಂಕಯ್ಯ ನಾಯ್ಡು ಅವರ ಹೆಸರನ್ನು ಶಿಫಾರಸು ಮಾಡಿ ಕೇಂದ್ರ ಚುನಾವಣಾ ಸಮಿತಿಗೆ ಕಳಿಸಲಾಗಿದ್ದು, ಬಿಜೆಪಿ ಹೈಕಮಾಂಡ್ ಈ ಬಗ್ಗೆ ಶೀಘ್ರದಲ್ಲೇ ಅಧಿಕೃತ ಪ್ರಕಟಣೆ ಹೊರಡಿಸಲಿದೆ. [ಏನಿದು ವೆಂಕಯ್ಯ ಸಾಕಯ್ಯ ಅಭಿಯಾನ?]

ಇನ್ನು ಎಂಎಲ್ಸಿ ಸ್ಥಾನಕ್ಕಾಗಿ ಕಟ್ಟಾ ಸುಬಮಣ್ಯ ನಾಯ್ಡು, ನಗರ ಬಿಜೆಪಿ ಅಧ್ಯಕ್ಷ ಸುಬ್ಬುನರಸಿಂಹ, ಮಾಜಿ ಸಚಿವ ವಿ ಸೋಮಣ್ಣ ಹೆಸರು ಚಾಲ್ತಿಯಲ್ಲಿದೆ. ಈ ಪೈಕಿ ವಿ ಸೋಮಣ್ಣ ಆಯ್ಕೆಗೆ ಯಡಿಯೂರಪ್ಪ ಅವರು ವಿರೋಧ ವ್ಯಕ್ತಪಡಿಸಿದ್ದು, ಜಗದೀಶ್ ಶೆಟ್ಟರ್ ಅವರು ಸೋಮಣ್ಣ ಪರ ನಿಂತಿರುವುದಾಗಿ ಮಾಧ್ಯಮಗಳಲ್ಲಿ ಸುದ್ದಿ ಬಂದಿದೆ.

Karnataka State BJP recommends M Venkaiah Naidu's name for Rajya Sabha

ಕೇಂದ್ರ ನಗರಾಭಿವೃದ್ಧಿ ಸಚಿವ ಬಿಜೆಪಿಯ ಎಂ.ವೆಂಕಯ್ಯನಾಯ್ಡು, ಆಯನೂರು ಮಂಜುನಾಥ್, ಕಾಂಗ್ರೆಸ್‌ನ ಆಸ್ಕರ್ ಫರ್ನಾಂಡೀಸ್ ಹಾಗೂ ಉದ್ಯಮಿ ವಿಜಯಮಲ್ಯ ಅವರ ಅವಧಿ ಜೂನ್ 30ಕ್ಕೆ ಮುಗಿಯಲಿದೆ. [ರಾಜ್ಯಸಭೆ ಸದಸ್ಯರಾಗಲು ಕಾಂಗ್ರೆಸ್ ನಲ್ಲಿ ಪೈಪೋಟಿ]

ಹೀಗಾಗಿ, ನಾಲ್ಕು ಸ್ಥಾನಗಳನ್ನು ತುಂಬಲು ಪಕ್ಷಗಳು ಮುಂದಾಗಿವೆ. ಈ ಪೈಕಿ ವೆಂಕಯ್ಯ ನಾಯ್ಡು ಹಾಗೂ ಕಾಂಗ್ರೆಸ್ಸಿನಿಂದ ಆಸ್ಕರ್ ಫರ್ನಾಂಡೀಸ್ ಹೆಸರು ಅಂತಿಮವಾಗಿದೆ. 18 ಬಾರಿ ಆಯ್ಕೆಯಾಗಿರುವ ವೆಂಕಯ್ಯ ಅವರಿಗೆ ಕರ್ನಾಟಕ ಬಿಟ್ಟರೆ ಬೇರೆ ರಾಜ್ಯಗಳಿಂದ ಮರು ಆಯ್ಕೆ ಸಾಧ್ಯವಿಲ್ಲ. ಆಯನೂರು ಮಂಜುನಾಥ್ ಅವರಿಗೆ ಪಕ್ಷದಲ್ಲಿ ಉನ್ನತ ಹುದ್ದೆಯ ಭರವಸೆ ಸಿಕ್ಕಿದೆಯಂತೆ.

ವೆಂಕಯ್ಯ ಸಾಕಯ್ಯ ಎಂಬ ಟ್ಯಾಗ್ ನೊಂದಿಗೆ ಇತ್ತೀಚೆಗೆ ಐಟಿ ಬಿಟಿ ಕನ್ನಡಿಗರು ಅಭಿಯಾನ ನಡೆಸಿ, ಕರ್ನಾಟಕದ ಮೂಲದವರನ್ನೇ ಶಿಫಾರಸು ಮಾಡುವಂತೆ ಆಗ್ರಹಿಸಿದ್ದರು. [ರಾಜ್ಯಸಭೆ ಚುನಾವಣೆ ದಿನಾಂಕ ಘೋಷಣೆ]

ಇನ್ನೊಂದೆಡೆ 124 ಸ್ಥಾನ ಬಲ ಹೊಂದಿರುವ ಕಾಂಗ್ರೆಸ್ ಗೆ ಇಬ್ಬರನ್ನು ರಾಜ್ಯಸಭೆಗೆ ಆಯ್ಕೆ ಮಾಡುವ ಅವಕಾಶವಿದೆ. ಕಾಂಗ್ರೆಸ್ ಬೆಂಬಲದಿಂದ ಜೆಡಿಎಸ್(40) ತನ್ನ ಅಭ್ಯರ್ಥಿಯನ್ನು ರಾಜ್ಯಸಭೆಗೆ ಕಳಿಸುವ ತಂತ್ರ ಕೂಡಾ ಆರಂಭಿಸಿದೆ.

ಇತ್ತೀಚೆಗೆ ಜೆಡಿಎಸ್ ನ ಚೆಲುವರಾಯಸ್ವಾಮಿ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು. ಸದ್ಯಕ್ಕೆ ಆಸ್ಕರ್ ಆಯ್ಕೆ ಅಂತಿಮ ಎನ್ನಬಹುದಾದರೆ, ಮತ್ತೊಮ್ಮೆ ಸ್ಥಾನಕ್ಕೆ ಬೆಳಗಾವಿಯ ಲಕ್ಷ್ಮಿ ಹೆಬ್ಬಾಳ್ಕರ್, ಮಾಜಿ ಸಚಿವ ಎಚ್ ವಿಶ್ವನಾಥ್ ಅಲ್ಲದೆ ಮಾಜಿ ವಿದೇಶಾಂಗ ಸಚಿವ ಎಸ್ಎಂ ಕೃಷ್ಣ ಅವರ ಹೆಸರು ಕೂಡಾ ಕೇಳಿ ಬಂದಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Karnataka State BJP recommends M Venkaiah Naidu's name for Rajya Sabha. Union Minister for Urban Development, Housing & Urban Poverty Alleviation, Parliamentary Affairs Venkaiah Naidu has been getting elected to Rajya Sabha since 1998, but locals complain that he has done nothing to Karnataka.
Please Wait while comments are loading...