Breaking; ಬೆಳಗಾವಿ-ದೆಹಲಿ ವಿಮಾನ ಆರಂಭಿಸುವಂತೆ ಸಚಿವರಿಗೆ ಮನವಿ

ಬೆಂಗಳೂರು, ಡಿಸೆಂಬರ್ 21; ಬೆಳಗಾವಿ-ನವದೆಹಲಿ ನಡುವೆ ವಿಮಾನ ಸೇವೆಯನ್ನು ಮತ್ತೆ ಆರಂಭಿಸಬೇಕು ಎಂದು ಕೇಂದ್ರ ಸಚಿವರಿಗೆ ಮನವಿ ಮಾಡಲಾಗಿದೆ. ಸ್ಪೈಸ್‌ಜೆಟ್ ಬೆಳಗಾವಿಯಿಂದ ಎಲ್ಲಾ ವಿಮಾನ ಸೇವೆ ರದ್ದುಗೊಳಿಸಿದ ಬಳಿಕ ಉಭಯ ನಗರಗಳ ನಡುವಿನ ವಿಮಾನ ಸೇವೆಯೂ ಸ್ಥಗಿತವಾಗಿದೆ.

ಬುಧವಾರ ನವದೆಹಲಿಯಲ್ಲಿ ಕೇಂದ್ರ ವಿಮಾನಯಾನ ಸಚಿವರಾದ ಜ್ಯೋತಿರಾದಿತ್ಯ ಸಿಂಧಿಯಾರನ್ನು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಭೇಟಿ ಮಾಡಿದರು. ಚಿಕ್ಕೋಡಿ ಎಂಪಿ ಅಣ್ಣಾಸಾಹೇಬ್ ಜೊಲ್ಲೆ, ಬೆಳಗಾವಿ ಸಂಸದೆ ಮಂಗಲಾ ಸುರೇಶ್ ಅಂಗಡಿ ಜೊತೆಗಿದ್ದರು.

ಬೆಳಗಾವಿಯಿಂದ ದೆಹಲಿ ಮತ್ತು ಮುಂಬೈಯ ನಡುವೆ ಈ ಹಿಂದೆ ಕಾರ್ಯ ನಿರ್ವಹಿಸುತ್ತಿದ್ದ ವಿಮಾನಗಳ ಸೇವೆಯನ್ನು ನಿಲ್ಲಿಸಿದ್ದು ಅವುಗಳನ್ನ ಮತ್ತೆ ಪುನರಾರಂಭಿಸಬೇಕೆಂದು ಸಂಸದರು ಸಚಿವರಿಗೆ ಮನವಿ ಮಾಡಿದರು.

Start Belagavi New Delhi Flight Iranna Kadadi Request To Minister

ಸ್ಪೈಸ್‌ಜೆಟ್ ಡಿಸೆಂಬರ್ 10ರಿಂದ ಜಾರಿಗೆ ಬರುವಂತೆ ಬೆಳಗಾವಿ ವಿಮಾನ ನಿಲ್ದಾಣದಿಂದ ಎಲ್ಲಾ ವಿಮಾನಗಳ ಸೇವೆಯನ್ನು ಸ್ಥಗಿತಗೊಳಿಸಿದೆ. ಆದ್ದರಿಂದ ಬೆಳಗಾವಿ-ನವದೆಹಲಿ ವಿಮಾನ ಸೇವೆಯೂ ರದ್ದಾಗಿದೆ. ಇದರಿಂದಾಗಿ ಬೆಳಗಾವಿಯಿಂದ ದೆಹಲಿಗೆ ಹೋಗುವವರು 5 ಗಂಟೆ ಪ್ರಯಾಣ ಮಾಡಿ ಸಂಪರ್ಕ ವಿಮಾನವನ್ನು ಹಿಡಿದು ಸಾಗಬೇಕಿದೆ.

ಮಾರ್ಚ್‌ ತಿಂಗಳಿನಲ್ಲಿ ಸ್ಪೈಸ್‌ಜೆಟ್ ಬೆಳಗಾವಿ-ನವದೆಹಲಿ ವಿಮಾನ ಸಂಚಾರ ಆರಂಭಿಸಿತ್ತು. ವಾರದ ಎಲ್ಲಾ ದಿನಗಳು ಸಹ ಈ ವಿಮಾನ ಹಾರಾಟ ನಡೆಸುತ್ತಿತ್ತು. ಇದರಿಂದಾಗಿ ಬೆಳಗಾವಿ ಮಾತ್ರವಲ್ಲದೇ ಮಹಾರಾಷ್ಟ್ರ, ಗೋವಾ ರಾಜ್ಯದ ಜನರಿಗೂ ದೇಶದ ರಾಜಧಾನಿ ತಲುಪಲು ಸಹಾಯಕವಾಗಿತ್ತು.

ಮೊದಲು ಬೆಳಗಾವಿ-ದೆಹಲಿ ವಿಮಾನ ಸೇವೆ ವಾರದ ಎರಡು ದಿನ ಮಾತ್ರ ಇತ್ತು. ಬಳಿಕ ಇದಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದರಿಂದ ವಾರದ ಎಲ್ಲಾ ದಿನ ವಿಮಾನ ಹಾರಾಟ ಆರಂಭಿಸಲಾಗಿತ್ತು. ಈಗ ವಿಮಾನ ಸೇವೆ ರದ್ದಾಗಿದೆ.

ಕೇಂದ್ರ ಸಚಿವರಿಗೆ ಪತ್ರ; ಬೆಳಗಾವಿ-ನವದೆಹಲಿ ವಿಮಾನ ಸೇವೆ ಮತ್ತೆ ಆರಂಭಿಸಬೇಕು ಎಂದು ಒತ್ತಾಯಿಸಲಾಗುತ್ತಿದೆ. ಕಳೆದ ವಾರ ಬೆಳಗಾವಿಯ ಮಹಾರಾಷ್ಟ್ರ ಏಕೀಕರಣ ಯುವ ಸಮಿತಿ ಜ್ಯೋತಿರಾದಿತ್ಯ ಸಿಂಧಿಯಾಗೆ ಈ ಕುರಿತು ಪತ್ರವನ್ನು ಬರೆದಿತ್ತು.

ಬೆಳಗಾವಿ ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯದ ಗಡಿಯಲ್ಲಿದೆ. ಫೌಂಡ್ರಿ ಉದ್ಯಮದಿಂದಾಗಿ ಬೆಳಗಾವಿ ದೇಶದಲ್ಲಿಯೇ ಪ್ರಸಿದ್ಧಿ ಪಡೆದಿದೆ ರಾಜಧಾನಿಗೆ ವಿಮಾನ ಸೇವೆ ನಿಲ್ಲಿಸಿದ್ದರಿಂದ ಪ್ರಯಾಣಿಕರಿಗೆ ತೊಂದರೆ ಆಗಿದೆ ಎಂದು ಹೇಳಿತ್ತು. ವಿಮಾನ ಸೇವೆ ಪುನಃ ಆರಂಭಿಸಬೇಕು ಎಂದು ಮನವಿ ಮಾಡಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+