ಜು.8ರಿಂದ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ ಮೌಲ್ಯಮಾಪನ

ಬೆಂಗಳೂರು, ಜು.6: ಜೂನ್‌ ತಿಂಗಳಲ್ಲಿ ನಡೆದಿರುವ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಜು.8ರಿಂದ ಆರಂಭವಾಗಲಿದೆ. ಒಟ್ಟು 9 ಜಿಲ್ಲೆಗಳಲ್ಲಿ ಪ್ರಾರಂಭವಾಗುತ್ತಿದ್ದು, ಈ ಸಂಬಂಧ ಈಗಾಗಲೇ ಮೌಲ್ಯಮಾಪಕರಿಗೆ ಮಂಡಳಿಯಿಂದ ಆದೇಶಗಳನ್ನು ರವಾನಿಸಲಾಗಿದೆ.

ಮಂಡಳಿಯಿಂದ ನಿಯೋಜಿಸಲಾಗಿರುವ ಎಲ್ಲ ಶಿಕ್ಷಕರುಗಳು ಮೌಲ್ಯಮಾಪನ ಕಾರ್ಯದಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕು. ಈ ಬಾರಿ ಆನ್‌ಲೈನ್‌ನಲ್ಲಿ ಮಾರ್ಕ್ಸ್ ಎಂಟ್ರಿ ಮಾಡಬೇಕಾಗಿರುವದರಿಂದ ಪ್ರತಿಯೊಬ್ಬ ಮೌಲ್ಯಮಾಪಕರು ಮೌಲ್ಯಮಾಪನದ ಮೊದಲ ದಿನ ಆನ್‌ಲೈನ್‌ ರಿಜಿಸ್ಟ್ರೇಷನ್‌ ಮಾಡಬೇಕಾಗುತ್ತದೆ.

ಮೌಲ್ಯಮಾಪನ ಕಾರ್ಯದಲ್ಲಿ ಭಾಗವಹಿಸುವ ಶಿಕ್ಷಕರಿಗೆ ಪ್ರಯಾಣ ಭತ್ಯೆ, ದಿನ ಭತ್ಯೆ ಹಾಗೂ ಸಂಭಾವನೆಯನ್ನು ನೆಫ್ಟ್ ಮೂಲಕ ಶಿಕ್ಷಕರುಗಳ ಬ್ಯಾಂಕ್‌ ಖಾತೆಗೆ ನೇರವಾಗಿ ವರ್ಗಾವಣೆಯಾಗುತ್ತದೆ.

SSLC supplementary exam evaluation will starts from July 8

ಈ ಎಲ್ಲಾ ಕಾರಣಗಳಿಗಾಗಿ ಮೌಲ್ಯಮಾಪನ ಕಾರ್ಯಕ್ಕಾಗಿ ನಿಯೋಜಿಸಿರುವ ಎಲ್ಲಾ ಜೆಸಿಇ, ಡಿಸಿಇ, ಹಾಗೂ ಎಇಗಳು ಬ್ಯಾಂಕ್‌ ಖಾತೆಯ ವಿವರಗಳುಳ್ಳ ಪಾಸ್‌ ಬುಕ್‌ ಅಥವಾ ಚೆಕ್‌ ಹಾಳೆಯ ಜೆರಾಕ್ಸ್‌ ಪ್ರಿಯನ್ನು ಕಡ್ಡಾಯವಾಗಿ ಮೊದಲ ದಿನವೇ ತರಬೇಕಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+