ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ ಪ್ರವೇಶ ಪತ್ರ ಲಭ್ಯ

|
Google Oneindia Kannada News

ಬೆಂಗಳೂರು, ಜೂನ್ 20: ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಬರೆದವರ ಪೈಕಿ ಶೇ 85 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಇನ್ನುಳಿದ ಶೇ15 ರಷ್ಟು ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಗೆದ್ದವರಿಗೇ ಒಂದೇ ಅವಕಾಶ ಸೋತವರಿಗೆ ಮತ್ತೊಂದು ಅವಕಾಶ ಎನ್ನುವಂತೆ ವಿದ್ಯಾರ್ಥಿಗಳಿಗೆ ಜೂನ್ 27ರಿಂದ ಪೂರಕ ಪರೀಕ್ಷೆ ಎದುರಾಗಲಿದ್ದೂ ಇನ್ನೊಂದು ವಾರ ಬಾಕಿಯಿದೆಯಷ್ಟೇ. ಶಾಲೆಗಳು ಎಸ್ಎಸ್ಎಲ್‌ಸಿ ಪ್ರವೇಶಪತ್ರವನ್ನು ಡೌನ್ ಲೋಡ್ ಮಾಡಿಕೊಂಡು ವಿದ್ಯಾರ್ಥಿಗಳಿಗೆ ವಿತರಿಸಬಹುದಾಗಿದೆ.

ಎಸ್‌ಎಸ್‌ಎಲ್‌ಸಿಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ದರಾಗಿ ಉತ್ತೀರ್ಣರಾದರೇ ಎಲ್ಲ ವಿದ್ಯಾರ್ಥಿಗಳಂತೆಯೇ 2022-23ನೇ ಸಾಲಿನಲ್ಲಿ ಕಾಲೇಜಿಗೆ ಸೇರಿಕೊಳ್ಳಬಹುದಾಗಿದೆ. ಇದರಿಂದಾಗಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಪೂರಕ ಪರೀಕ್ಷೆಗೆ ಸಿದ್ದರಾಗಬೇಕಿದೆ.

ಜೂನ್ 2022 ಪೂರಕ ಪರೀಕ್ಷೆ ವೇಳಾಪಟ್ಟಿ

ದಿನಾಂಕ 27.06.2022(ಸೋಮವಾರ) - ವಿಜ್ಞಾನ, ರಾಜ್ಯಶಾಸ್ತ್ರ, ಕರ್ನಾಟಕ ಸಂಗೀತ/ಹಿಂದೂಸ್ಥಾನಿ ಸಂಗೀತ.

ದಿನಾಂಕ 28.06.2022(ಮಂಗಳವಾರ) -ಪ್ರಥಮ ಭಾಷೆ (ಕನ್ನಡ, ತೆಲುಗು,ಹಿಂದಿ,ಮರಾಠಿ,ಉರ್ದು, ಇಂಗ್ಲೀಷ್, ಸಂಸ್ಕೃತ)

ದಿನಾಂಕ 29.06.2022(ಬುಧವಾರ) - ದ್ವಿತೀಯ ಭಾಷೆ(ಇಂಗ್ಲಿಷ್,ಕನ್ನಡ)

ದಿನಾಂಕ 30.06.2022(ಗುರುವಾರ) - ಸಮಾಜ ವಿಜ್ಞಾನ

ದಿನಾಂಕ 01.07.2022(ಶುಕ್ರವಾರ) - ತೃತೀಯ ಭಾಷೆ (ಹಿಂದಿ, ಕನ್ನಡ ಇಂಗ್ಲೀಷ್, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು)

ಎನ್.ಎಸ್.ಕ್ಯೂ.ಎಫ್ ಪರೀಕ್ಷಾ ವಿಷಯಗಳು(ಮಾಹಿತಿ ತಂತ್ರಜ್ಞಾನ, ರೀಟೇಲ್, ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಅಂಡ್ ವೆಲ್‌ನೆಸ್)

Karnataka SSLC Supplementary Exam 2022 Hall Ticket ready, Exam from June 27 to July 4

ದಿನಾಂಕ 02.07.2022(ಶನಿವಾರ) ಎಲಿಮೆಂಟ್ ಆಫ್ ಮೆಕಾನಿಕಲ್ ಮತ್ತು ಎಲೆಕ್ಟ್ರಿಕಲ್ ಇಂಜಿನಿಯರಿಂಗ್-2,ಇಂಜಿನಿಯರ್ ಗ್ರಾಫಿಕ್ಸ್-2, ಎಲಿಮೆಂಟ್ಸ್ ಆಫ್ ಎಲೆಕ್ಟ್ರಾನಿಕ್ ಇಂಜಿನಿಯರಿಂಗ್, ಎಲಿಮೆಂಟ್ಸ್ ಆಫ್ ಕಂಪ್ಯೂಟರ್ ಸೈನ್ಸ್, ಅರ್ಥಶಾಸ್ತ್ರ

ದಿನಾಂಕ 03.07.2022(ಭಾನುವಾರ) ರಜೆ ದಿನ

ದಿನಾಂಕ 04.07.2022(ಸೋಮವಾರ) ಗಣಿತ, ಸಮಾಜ ಶಾಸ್ತ್ರ

Karnataka SSLC Supplementary Exam 2022 Hall Ticket ready, Exam from June 27 to July 4

ಜೂನ್ 2022ರ ಪೂರಕ ಪರೀಕ್ಷೆಯು ಜೂನ್ 27 ರಿಂದ ಆರಂಭವಾಗಿ ಜುಲೈ 04ಕ್ಕೆ ಮುಕ್ತಾಯವಾಗಲಿದೆ. ಪೂರಕ ಪರೀಕ್ಷೆಗೆ ಅರ್ಹವಾಗಿರುವ ವಿದ್ಯಾರ್ಥಿಗಳು ಆನ್ ಲೈನ್ ಮೂಲಕ ನೋಂದಾಯಿಸಿಕೊಳ್ಳಲು ದಿನಾಂಕ:20.05.2022 ರಿಂದ 30.052022ರವರೆಗೆ ಅವಕಾಶವನ್ನು ಕಲ್ಪಿಸಿದೆ.

Recommended Video

Basavaraj Bommai ಅವರು Modi ಮುಂದೆ ಏನು ಹೇಳಿದ್ದಿಷ್ಟು | *Politics | Oneindia Kannada

English summary
Karnataka SSLC Supplementary Exam 2022 one week remaining, Time Table; Here is the Karnataka SSLC Supplementary Exam 2022 schedule, exam from June 27 to July 4. Know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X