SSLC Result 2023: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ, 4 ವಿದ್ಯಾರ್ಥಿಗಳಿಗೆ 625ಕ್ಕೆ 625 ಅಂಕ, ಚಿತ್ರದುರ್ಗಕ್ಕೆ ಮೊದಲ ಸ್ಥಾನ
ಬೆಂಗಳೂರು ಮೇ 8: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಇಂದು ಎಸ್‍ಎಸ್‍ಎಲ್‌ಸಿ ಪರೀಕ್ಷೆ ಫಲಿತಾಂಶವನ್ನು ಬಿಡುಗಡೆ ಮಾಡಿದೆ. ಈ ಬಾರಿ ನಾಲ್ಕು ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಪಡೆದಿದ್ದಾರೆ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಇಂದು ಸುದ್ದಿಗೋಷ್ಟಿಯಲ್ಲಿ, 'ಚಿತ್ರದುರ್ಗ ಹೆಚ್ಚು ಫಲಿತಾಂಶವನ್ನು ಪಡೆದುಕೊಂಡಿದೆ. ಎರಡನೆಯ ಜಿಲ್ಲೆ ಮಂಡ್ಯ, ಮೂರನೇ ಜಿಲ್ಲೆ ಹಾಸನ ಜಿಲ್ಲೆಯಾಗಿದೆ. ಬೆಂಗಳೂರು ಗ್ರಾಮಾಂತರ ನಾಲ್ಕನೇ ಸ್ಥಾನದಲ್ಲಿ ಇದೆ. ಕೊನೆಯ ಜಿಲ್ಲೆ ಯಾದಗಿರಿ ಜಿಲ್ಲೆಯಾಗಿದೆ. ನಾಲ್ಕು ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಪಡೆದಿದ್ದಾರೆ.7 ಲಕ್ಷದ 619 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಬಾಲಕರು ಶೇ80.08ರಷ್ಟು ಉತ್ತೀರ್ಣರಾಗಿದ್ದಾರೆ' ಎಂದು ತಿಳಿಸಿದೆ.
ಚಿತ್ರದುರ್ಗ 96.80%, ಹಾಸನ 96.68%, ಮಂಡ್ಯ 96.74%, ಯಾದಗಿರಿ 75.49% ರಷ್ಟು ಫಲಿತಾಂಶಗಳನ್ನು ಪಡೆದಿದೆ.
SSLCಯಲ್ಲಿ 625ಕ್ಕೆ 625 ಅಂಕ ಪಡೆದ ವಿದ್ಯಾರ್ಥಿಗಳು
ಭೂಮಿಕಾ ಪೈ- ನ್ಯೂ ಮೆಕಾಲೆ ಶಾಲೆ, ಹೊಸೂರು ರಸ್ತೆ, ಬೆಂಗಳೂರು
ಯಶಸ್ಗೌಡ- ಬಿಜಿಎಸ್ ಶಾಲೆ, ಅಗಲಗುರ್ಕಿ, ಚಿಕ್ಕಬಳ್ಳಾಪುರ ಜಿಲ್ಲೆ
ಅನುಪಮಾ ಶ್ರೀಶೈಲ್ ಹಿರೆಹೋಳಿ- ಶ್ರೀಕುಮಾರೇಶ್ವರ ಶಾಲೆ,ಸವದತ್ತಿ
ಬೀಮನಗೌಡ ಪಾಟೀಲ್-ವಿಜಯಪುರ

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಪ್ರಸಕ್ತ ಸಾಲಿನ ಫಲಿತಾಂಶ ಬಿಡುಗಡೆ ಮಾಡಿದ್ದು ರಾಜ್ಯದ 8 ಲಕ್ಷ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶ ಬಿಡುಗಡೆ ಮಾಡಿದೆ. ಬೆಳಗ್ಗೆ 11 ಗಂಟೆಗೆ ಕರ್ನಾಟಕ ಶಿಕ್ಷಣ ಇಲಾಖೆಯ ಅಧಿಕೃತ ವೆಬ್‍ಸೈಟ್ karresults.nic.in ನಲ್ಲಿ ಎಸ್‍ಎಸ್‍ಎಲ್‍ಸಿ ಫಲಿತಾಂಶ ಪ್ರಕಟವಾಗಲಿದೆ.
ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟ
— oneindiakannada (@OneindiaKannada) May 8, 2023
ಮೊದಲನೇ ಸ್ಥಾನ ಚಿತ್ರದುರ್ಗ, ಎರಡನೇ ಸ್ಥಾನ ಮಂಡ್ಯ, ಮೂರನೇ ಸ್ಥಾನ ಹಾಸನ, ಕೊನೆ ಸ್ಥಾನ ಯಾದಗಿರಿ.#sslcresult #karnataka #sslcexamResult2023 #sslcresult2023 #Students pic.twitter.com/2b9SYqeqs3
ಎಸ್ಎಸ್ಎಲ್ಸಿ ಪರೀಕ್ಷೆಗಳನ್ನು 2023 ಮಾರ್ಚ್ 31 ರಿಂದ ಏಪ್ರಿಲ್ 15ರವರೆಗೆ ಕೈಗೊಳ್ಳಲಾಗಿದ್ದು ಒಟ್ಟು ರಾಜ್ಯದ 15,498 ಪ್ರೌಢಶಾಲೆಗಳ 8.42 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿಯಾಗಿದ್ದರು. ರಾಜ್ಯಾದ್ಯಂತ ಒಟ್ಟು 3,305 ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆದಿದ್ದವು. ಬಂದ ಉತ್ತರ ಪತ್ರಿಕೆಗಳನ್ನು ತಿದ್ದಲು 63 ಸಾವಿರ ಶಿಕ್ಷಕರು ಮೌಲ್ಯಮಾಪನ ಕಾರ್ಯದಲ್ಲಿ ಭಾಗವಹಿಸಿದ್ದರು.
ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟ: ಜಿಲ್ಲಾವಾರು ಫಲಿತಾಂಶ ಹೀಗಿದೆ.. #sslcresult #karnataka #sslcexamResult2023 #sslcresult2023 #Students pic.twitter.com/bPTARktYt1
— oneindiakannada (@OneindiaKannada) May 8, 2023
ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿರುವ ಫೋನ್ ನಂಬರ್‌ಗಳಿಗೆ ಎಸ್‌ಎಂಎಸ್(SMS) ಮೂಲಕ ಫಲಿತಾಂಶವನ್ನು ಕಳುಹಿಸಲಾಗುತ್ತದೆ. ಮೊಬೈಲ್ ನಲ್ಲೂ ವಿದ್ಯಾರ್ಥಿಗಳು ತಮ್ಮ ರಿಸಲ್ಟ್ ಪಡೆಯಬಹುದಾಗಿದೆ.
ವಿದ್ಯಾರ್ಥಿಗಳು ಫಲಿತಾಂಶ ನೋಡುವುದು ಹೇಗೆ?
ಮೊದಲು ವಿದ್ಯಾರ್ಥಿಗಳು karresults.nic.in ಅಧಿಕೃತ ವೆಬ್‌ಸೈಟ್ ತೆರೆಯಬೇಕು.
ಮುಖಪುಟದಲ್ಲಿ ಕರ್ನಾಟಕ ಎಸ್‌ಎಸ್‌ಎಲ್‌ಸಿ 2023 ಫಲಿತಾಂಶ ಲಿಂಕ್ ಅನ್ನು ಕ್ಲಿಕ್ ಮಾಡಬೇಕು
ಲಾಗಿನ್ ಪುಟದಲ್ಲಿ ನಿಮ್ಮ ನೋಂದಣಿ ಸಂಖ್ಯೆಯನ್ನು ನಮೂದಿಸಿ ಮತ್ತು ವಿವರಗಳನ್ನು ನೀಡಬೇಕು
ಕೊನೆಯಲ್ಲಿ ಫಲಿತಾಂಶವನ್ನು ಪರಿಶೀಲಿಸಿ ಮತ್ತು ಡೌನ್‌ಲೋಡ್ ಮಾಡಿಕೊಳ್ಳಬಹುದು.












Click it and Unblock the Notifications