ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

SSLC ಬೋರ್ಡ್ ಪ್ರಕಟಿಸುವ ಮೊದಲೇ ಖಾಸಗಿ AAPನಲ್ಲಿ ಫಲಿತಾಂಶ ಪ್ರಕಟ

|
Google Oneindia Kannada News

ಬೆಂಗಳೂರು, ಮೇ. 19: ಕರ್ನಾಟಕ ಎಸ್ಎಸ್ಎಲ್ ಸಿ ಫಲಿತಾಂಶ 2022 ರನ್ನು ಹ್ಯಾಕ್ ಮಾಡಿರುವ ಅನುಮಾನ ವ್ಯಕ್ತವಾಗಿದೆ. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಫಲಿತಾಂಶವನ್ನು ಪ್ರಕಟಿಸುವ ಮುನ್ನ ಖಾಸಗಿ ಆಪ್ ನಲ್ಲಿ ಎಸ್ಎಸ್ಎಲ್ ಸಿ ಫಲಿತಾಂಶ ಸೋರಿಕೆಯಾಗಿದೆ. ಇದರಿಂದ ಫಲಿತಾಂಶಕ್ಕೆ ಇದ್ದಂತಹ ಪಾವಿತ್ರ್ಯತೆ ಹಾಳಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಕರ್ನಾಟಕ ಶಿಕ್ಷಣ ಇಲಾಖೆಯ ಅಧಿಕೃತ ವೆಬ್ ತಾಣಗಳಾದ https://karresults.nic.in/# ಹಾಗೂ https://sslc.karnataka.gov.in/english ವೆಬ್ ತಾಣಗಳಲ್ಲಿ ಅಧಿಕೃತವಾಗಿ ಪ್ರಕಟವಾಗಬೇಕಿತ್ತು. ಈ ಎರಡೂ ವೆಬ್ ತಾಣಗಳಲ್ಲಿ ಫಲಿತಾಂಶ ಪ್ರಕಟವಾಗಿಲ್ಲ. ಆದ್ರೆ, ಎಸ್ಎಸ್ಎಲ್ ಸಿ ಎಕ್ಸಾಮಿನೇಷನ್ ರಿಸೆಲ್ಟ್ 2022 ಅಪ್ ನಲ್ಲಿ ಫಲಿತಾಂಶ ಪ್ರಕಟವಾಗಿದ್ದು, ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

Breaking: SSLC ಫಲಿತಾಂಶ ಪ್ರಕಟ: ಶೇ.85.63ರಷ್ಟು ಉತ್ತೀರ್ಣ, ಬಾಲಕಿಯರು ಮೇಲುಗೈBreaking: SSLC ಫಲಿತಾಂಶ ಪ್ರಕಟ: ಶೇ.85.63ರಷ್ಟು ಉತ್ತೀರ್ಣ, ಬಾಲಕಿಯರು ಮೇಲುಗೈ

ಕರ್ನಾಟಕ ಎಸ್ಎಸ್ಎಎಲ್ ಸಿ ಎಕ್ಸಾಮಿನೇಷನ್ ರಿಸಲ್ಟ್ 2022 ಎನ್ನುವ ಆಪ್ ನಲ್ಲಿ ಫಲಿತಾಂಶ ಗುರುವಾರ ಬೆಳಗ್ಗೆಯೇ ಪ್ರಕಟವಾಗಿದೆ. ವಿದ್ಯಾರ್ಥಿಗಳು ಫಲಿತಾಂಶ ನೋಡಿ ಸಂಭ್ರಮಿಸತೊಡಗಿದ್ದರು. ಈ ಆಪ್ ನ್ನು ಬಳಿಸಿ 'ಒನ್‌ಇಂಡಿಯಾ ಕನ್ನಡ' ಕೂಡ ಫಲಿತಾಂಶ ನೋಡಿದಾಗ ವಿದ್ಯಾರ್ಥಿಗಳಿಬ್ಬರ ಫಲಿತಾಂಶ ಲಭ್ಯವಾಯಿತು.

Karnataka SSLC Result 2022 allegedly hacked by Private App?

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಅಧಿಕೃತ ವೆಬ್ ತಾಣ ಓಪನ್ ಆಗುತ್ತಿಲ್ಲ. ಆದರೆ, ಕರ್ನಾಟಕ ಎಸ್ಎಸ್ಎಲ್ ಸಿ ಫಲಿತಾಂಶದ ವಿವರವನ್ನು ಕನ್ನಡದಲ್ಲಿಯೇ ವಿವರ ಹಾಕಿದ್ದು, ಫಲಿತಾಂಶದ ವಿವರಗಳು ಶಿಕ್ಷಣ ಸಚಿವರು ಪ್ರಕಟಿಸುವ ಮೊದಲೇ ಖಾಸಗಿ ಅಪ್ ನಲ್ಲಿ ಪ್ರಕಟವಾಗಿದೆ. ಈ ಫಲಿತಾಂಶವೂ ಅಧಿಕೃತ ವೆಬ್ ತಾಣಗಳಲ್ಲಿ ಪ್ರಕಟವಾಗುವ ಫಲಿತಾಂಶ ಎರಡೂ ಒಂದೇ ಆಗಿರಲಿದೆಯಾ ಎಂಬುದು ಮಧ್ಯಾಹ್ನದ ನಂತರ ಗೊತ್ತಾಗಲಿದೆ.

English summary
Karnataka SSLC Exam Result 2022 leaked before official announcement by Education Minister BC Nagesh, allegedly hacked by Private App?. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X