ಎಸ್ಎಸ್ಎಲ್‌ಸಿ ಫಲಿತಾಂಶ 2021 ಪ್ರಕಟ: ವಿಶೇಷ ಮುಖ್ಯಾಂಶಗಳು

ಬೆಂಗಳೂರು, ಆ. 09: ಬಹು ನಿರೀಕ್ಷಿತ ಎಸ್ಎಸ್ಎಲ್‌ಸಿ ಪರಿಕ್ಷೆ 2021 ರ ಫಲಿತಾಂಶ ಪ್ರಕಟವಾಗಿದೆ. ಕೊರೊನಾ ನಡುವೆಯೂ ರಾಜ್ಯದಲ್ಲಿ ಎಸ್ಎಸ್ಎಲ್‌ಸಿ ಪರೀಕ್ಷೆ ತೆಗೆದುಕೊಂಡಿದ್ದ ವಿದ್ಯಾರ್ಥಿಗಳ ಪೈಕಿ ಶೇ. 99. 9 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ಸುದ್ದಿಗೋಷ್ಠಿಯಲ್ಲಿ ಎಸ್ಎಸ್ಎಲ್‌ಸಿ ಪರೀಕ್ಷಾ ಫಲಿತಾಂಶದ ವಿವರಗಳನ್ನು ನೀಡಿದರು.

ರಾಜ್ಯದಲ್ಲಿ ಮೊದಲ ಬಾರಿಗೆ ಕೊರೊನಾ ಮಾರ್ಗದರ್ಶಿ ಸೂತ್ರಗಳನ್ನು ಪಾಲನೆ ಮಾಡಿ ಎಸ್ಎಸ್ಎಲ್‌ಸಿ ಪರೀಕ್ಷೆ ನಡೆಸಲಾಗಿದೆ. ದೇಶದಲ್ಲಿಯೇ ಮೊದಲ ಬಾರಿಗೆ ಬಹು ಆಯ್ಕೆ ಪ್ರಶ್ನೆ ಪತ್ರಿಕೆ ಮಾದರಿ ಪರೀಕಕ್ಷೆ ನಡೆಸಿದ್ದು, ವಿದ್ಯಾರ್ಥಿಗಳು ಗಳಿಸಿರುವ ಅಂಕಗಳ ಆಧಾರದ ಮೇಲೆ ಗ್ರೇಡಿಂಗ್ ನೀಡಲಾಗಿದೆ. ರಾಜ್ಯದಲ್ಲಿ ಪರೀಕ್ಷೆ ತೆಗೆದುಕೊಂಡ ವಿದ್ಯಾರ್ಥಿಗಳಲ್ಲಿ ಶೇ. 99.9 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ ಆಗಿದ್ದಾರೆ. ಬಹುತೇಕ ವಿದ್ಯಾರ್ಥಿಗಳು ತಮ್ಮ ಸ್ವಂತ ಪರಿಶ್ರಮದಿಂದಲೇ ಪಾಸ್ ಆಗಿದ್ದು, ಶೇ. 9 ರಷ್ಟು ವಿದ್ಯಾರ್ಥಿಗಳು ಗ್ರೇಸ್ ಮಾರ್ಕ್ಸ್ ಪಡೆದು ಪಾಸಾಗಿದ್ದಾರೆ ಎಂದು ತಿಳಿಸಿದರು.

ಎ+ ಗ್ರೇಡ್ ಪಡೆದ ವಿದ್ಯಾರ್ಥಿಗಳ ವಿವರ :

ರಾಜ್ಯದಲ್ಲಿ ಶೇ. 100 ಅಂಕಕ್ಕೆ ಶೇ. 90 ರಷ್ಟು ಅಂಕವನ್ನು 1.28, 931 ವಿದ್ಯಾರ್ಥಿಗಳು ಗಳಿಸಿದ್ದು, ಶೇ. 16. 52 ರಷ್ಟು ವಿದ್ಯಾರ್ಥಿಗಳು ಎ + ಗ್ರೇಡ್ ನಲ್ಲಿ ಉತ್ತಿರ್ಣರಾಗಿದ್ದಾರೆ. 2.50, 317 ವಿದ್ಯಾರ್ಥಿಗಳು ಶೇ. 80 ರಿಂದ 90 ರಷ್ಟು ಅಂಕ ಗಳಿಸಿ ಎ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. 2.87,684 ವಿದ್ಯಾರ್ಥಿಗಳು ಶೇ. 60 ರಿಂದ 79 ಅಂಕ ಗಳಿಸುವ ಮೂಲಕ ಬಿ ದರ್ಜೆಯಲ್ಲಿ ಉತ್ತೀರ್ಣ ರಾಗಿದ್ದಾರೆ. 1,13, 610 ವಿದ್ಯಾರ್ಥಿಗಳು ಶೇ. 35 ರಿಂದ 59 ಅಂಕ ಗಳಿಸಿದ್ದು, ಸಿ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಉಳಿದ ಶೇ. 9 ರಷ್ಟು ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕ ನೀಡಿ ಉತ್ತೀರ್ಣ ಮಾಡಲಾಗಿದೆ ಎಂದು ನೂತನ ಸಚಿವರು ಮಾಹಿತಿ ನೀಡಿದರು.

Karnataka SSLC Result 2021 Declared; Check Statistics and Highlights

ಶೇ 99.09ರಷ್ಟು ದಾಖಲೆ ಫಲಿತಾಂಶ ಬಂದಿದೆ.

ಎ + (90-100 ಮಾರ್ಕ್ಸ) 1, 28, 931 ಮಂದಿ, 16.52%

ಎ ಗ್ರೇಡ್ (80-89 ಮಾರ್ಕ್ಸ) 2,50,317 ಮಂದಿ, 32.07%

ಬಿ ಗ್ರೇಡ್ (60-79 ಮಾರ್ಕ್ಸ) 2,87,684 ಮಂದಿ, 13.86%

ಸಿ ಗ್ರೇಡ್ (35-59 ಮಾರ್ಕ್ಸ) 1,13,610 ಮಂದಿ, 14.55%

ಸಿ ಗ್ರೇಡ್ ಅಂಕಗಳಲ್ಲಿ 9% ಮಂದಿಗೆ ಗ್ರೇಸ್ ಅಂಕ ನೀಡಿ ಪಾಸ್ ನೀಡಲಾಗಿದೆ.

625 ಅಂಕಕ್ಕೆ 625 ಅಂಕ ಗಳಿಸಿದ ವಿದ್ಯಾರ್ಥಿಗಳ ವಿವರ: ರಾಜ್ಯದಲ್ಲಿ ಈ ವರ್ಷ 157 ವಿದ್ಯಾರ್ಥಿಗಳು 625 ಅಂಕಗಳಿಗೆ 625 ಅಂಕ ಗಳಿಸುವ ಮೂಲಕ ದಾಖಲೆ ಬರೆದಿದ್ದಾರೆ. ಉಳಿದಂತೆ 287 ವಿದ್ಯಾರ್ಥಿಗಳು 625 ಅಂಕಗಳಿಗೆ 623 ಅಂಕ ಗಳಿಸಿದ್ದಾರೆ. ಎರಡು ವಿದ್ಯಾರ್ಥಿಗಳು 622 ಅಂಕ ಗಳಿಸಿದ್ದಾರೆ. 449 ವಿದ್ಯಾರ್ಥಿಗಳು 621 ಅಂಕ ಗಳಿಸಿದ್ದಾರೆ. ಕೇವಲ 28 ವಿದ್ಯಾರ್ಥಿಗಳು 620 ಅಂಕಗಳನ್ನು ಗಳಿಸಿದ್ದಾರೆ.

625/625 ಪಡೆದವರು 157 ವಿದ್ಯಾರ್ಥಿಗಳು

623/625- 287 ವಿದ್ಯಾರ್ಥಿಗಳು

622/625- 2 ವಿದ್ಯಾರ್ಥಿಗಳು

621/625- 449 ವಿದ್ಯಾರ್ಥಿಗಳು

620/625- 28 ವಿದ್ಯಾರ್ಥಿಗಳು

ಭಾಷಾವಾರು ಫುಲ್ ಮಾರ್ಕ್ಸ ಪಡೆದವರು:

ಪ್ರಥಮ ಭಾಷೆ ಕನ್ನಡ ಹಾಗೂ ಇಂಗ್ಲೀಷ್ ಭಾಷೆಯಲ್ಲಿ 25,302 ವಿದ್ಯಾರ್ಥಿಗಳು 125 ಅಂಕಕ್ಕೆ 125 ಅಂಕ ಗಳಿಸಿದ್ದಾರೆ. ಕನ್ನಡ ಹಾಗೂ ಇಂಗ್ಲೀಷ್ ನ್ನು ದ್ವಿತೀಯ ಭಾಷೆಯನ್ನಾಗಿ ಆಯ್ಕೆ ಮಾಡಿಕೊಂಡು ಪರೀಕ್ಷೆ ಬರೆದವರಲ್ಲಿ 36,628 ವಿದ್ಯಾರ್ಥಿಗಳು 100 ಕ್ಕೆ 100 ಅಂಕ ಗಳಿಸಿದ್ದಾರೆ. 36,776 ವಿದ್ಯಾರ್ಥಿಗಳು ತೃತಿಯ ಭಾಷೆ ಯಲ್ಲಿ 100/100 ಅಂಕ ಗಳಿಸಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು.

Karnataka SSLC Result 2021 Declared; Check Statistics and Highlights

ಹೈಸ್ಕೂಲ್ ತರಗತಿ ಆರಂಭ: ರಾಜ್ಯದಲ್ಲಿ ಆಗಸ್ಟ್ ನಿಂದ ಎಸ್ಎಸ್ಎಲ್ ಸಿ ಹಾಗೂ 9 ನೇ ತರಗತಿ ಭೌತಿಕ ತರಗತಿಗಳನ್ನು ಪ್ರಾರಂಭಿಸಲು ತೀರ್ಮಾನಿಸಲಾಗಿದೆ. ಪೋಷಕರ ಹಾಗೂ ಶಿಕ್ಷಣ ತಜ್ಞರ ಸಮಿತಿ ನೀಡಿರುವ ವರದಿಯನ್ನು ಸರ್ಕಾರದ ಗಮನಕ್ಕೆ ತರಲಾಗಿದೆ. ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡ ರಾಜ್ಯದಲ್ಲಿ ಮಕ್ಕಳು ಶಿಕ್ಷಣ ವಂಚಿತರಾಗಬಾರದು ಎಂದು ಹೇಳಿದ್ದಾರೆ.

ಆಗಸ್ಟ್ 23 ರಿಂದ 9 ಮತ್ತು 10 ನೇ ತರಗತಿ ವಿದ್ಯಾರ್ಥಿಗಳಿಗೆ ಬೌತಿಕ ತರಗತಿಗಳನ್ನು ಪ್ರಾರಂಭಿಸಲಾಗುವುದು ಎಂದು ಸಚಿವರು ಇದೇ ವೇಳೆ ತಿಳಿಸಿದರು.

Recommended Video

      ನಾಗರಹೊಳೆಯ ಈ ದೃಶ್ಯ ಮೈ ಜುಮ್ಮ್ ಅನ್ನಿಸುತ್ತೆ! | Oneindia Kannada

      ಕಾಲೇಜು ಸೀಟು ಸಮಸ್ಯೆ ಇಲ್ಲ: ಈ ವರ್ಷ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದವರು 8.76 ಲಕ್ಷ ವಿದ್ಯಾರ್ಥಿಗಳು. ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಪಿಯುಸಿ, ಜೆಒಸಿ, ಐಟಿಐ ನಲ್ಲಿ 12 ಲಕ್ಷ ವಿದ್ಯಾರ್ಥಿಗಳು ದಾಖಲಾತಿಯಾಗಲು ಅವಕಾಶವಿದೆ. ಹೀಗಾಗಿ ಈ ಫಲಿತಾಂಶದಿಂದ ಕಾಲೇಜುಗಳಲ್ಲಿ ಸೀಟು ಸಿಗದೇ ಯಾವ ವಿದ್ಯಾರ್ಥಿಯ ವಿದ್ಯಾಭ್ಯಾಸಕ್ಕೂ ತೊಂದರೆ ಆಗುವುದಿಲ್ಲ. ಇನ್ನೂ ಹೊಸ ಪರವಾನಗಿ ಕೋರಿ ಹಲವು ಸಂಸ್ಥೆಗಳು ಅರ್ಜಿ ಸಲ್ಲಿಸಿವೆ. ಹೀಗಾಗಿ ವಿದ್ಯಾರ್ಥಿಗಳು ಕಾಲೇಜು ಶಿಕ್ಷಣ ಪ್ರವೇಶಕಾತಿ ಕುರಿತು ಆತಂಕ ಪಡೆಯುವ ಅಗತ್ಯವಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+