ಸಿದ್ದರಾಮಯ್ಯ ಅಮೃತ ಮಹೋತ್ಸವ: srlopcm75@gmail.com ಇ-ಮೇಲ್ ಸೀಕ್ರೆಟ್
ಬೆಂಗಳೂರು, ಜು. 11: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹುಟ್ಟುಹಬ್ಬ ಆಚರಣೆ ಸಂಬಂಧ ರಚನೆಯಾಗಿರುವ ಅಮೃತ ಮಹೋತ್ಸವ ಸಮಿತಿ ಇ ಮೇಲ್ ರಚನೆ ಮಾಡಲಾಗಿದ್ದು, ಆ ಪದಗಳು ಇದೀಗ ರಾಜಕೀಯ ವಲಯದಲ್ಲಿ ಭಾರಿ ಚರ್ಚೆ ಹುಟ್ಟುಹಾಕಿವೆ.
ಅರ್.ವಿ. ದೇಶಪಾಂಡೆ ಗೌರವಾಧ್ಯಕ್ಷರು, ಕೆ.ಎನ್. ರಾಜಣ್ಣ ಅಧ್ಯಕ್ಷರು ಅಗಿರುವ ಅಮೃತ ಮಹೋತ್ಸವ ಸಮಿತಿ ವಿವರದಲ್ಲಿ ಇ ಮೇಲ್ [email protected] ಹೆಸರಿನ ಇ ಮೇಲ್ ಕ್ರಿಯೇಟ್ ಮಾಡಲಾಗಿದೆ. ಇದರ ಅರ್ಥ ಮಾತ್ರ ಅರ್ಥಗಳಿಗೆ ಅವಕಾಶ ಕಲ್ಪಿಸಿದೆ. ಎಸ್.ಆರ್ ಅಂದ್ರೆ ಸಿದ್ದರಾಮಯ್ಯ, ಎಲ್‌ಓಪಿ ಅಂದ್ರೆ, ಲೀಡರ್ ಆಫ್ ಆಪೋಜಿಷನ್ (ವಿರೋಧ ಪಕ್ಷದ ನಾಯಕರು) ಸಿಎಂ 75 ಅಂದ್ರೆ, ಮುಖ್ಯಮಂತ್ರಿ 75 ಎಂಬ ಅರ್ಥ ನೀಡುತ್ತದೆ. ಅಂದರೆ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು 75 ನೇ ವರ್ಷದಲ್ಲಿ ಮುಖ್ಯಮಂತ್ರಿ ಎಂದು ನೀಡುತ್ತದೆ. ಅಂದರೆ ಮುಂದಿನ ಸಿಎಂ ಸಿದ್ದರಾಮಯ್ಯ ಎಂಬ ಅರ್ಥವನ್ನು ನೀಡುವಂತಿದೆ.

ರಾಜ್ಯದಲ್ಲಿ ಬಿಜೆಪಿ ಆಡಳಿತದ ವಿರೋಧಿ ಅಲೆ ಎದ್ದಿದೆ. ಚುನಾವಣೆಗೂ ಮುನ್ನ ಆರು ತಿಂಗಳ ಮೊದಲೇ ಸಿಎಂ ಅಭ್ಯರ್ಥಿಯನ್ನು ಕಾಂಗ್ರೆಸ್ ಘೋಷಣೆ ಮಾಡಿದರೆ ಪಕ್ಷ ಸುಲಭವಾಗಿ ವಿಧಾನಸಭೆ ಚುನಾವಣೆಯಲ್ಲಿ ಜಯ ಸಾಧಿಸಲಿದೆ ಎಂಬ ಸಂದೇಶವನ್ನು ಹೈಕಮಾಂಡ್ ಗೆ ಕಾಂಗ್ರೆಸ್ ನಾಯಕರು ರವಾನಿಸಿದ್ದರು. ಇದರ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮುನಿಸಿಕೊಂಡಿದ್ದರು. ಈ ವಿಚಾರವಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರ ನಡುವೆ ಮನಸ್ತಾಪ ಉಂಟಾಗಿತ್ತು. ಮೇಲ್ನೋಟಕ್ಕೆ ಎಲ್ಲಿಯೂ ತೋರಿಸಿಕೊಳ್ಳದಿದ್ದರೂ ಇಬ್ಬರ ನಡುವೆ ಭಿನ್ನಭಿಪ್ರಾಯ ಮೂಡಿತ್ತು. ಈ ವಿಚಾರ ತಿಳಿದ ಕೂಡಲೇ ಸದ್ಯಕ್ಕೆ ಸಾಮೂಹಿಕ ನಾಯಕತ್ವದಲ್ಲಿ ಪಕ್ಷವನ್ನು ಮುನ್ನೆಡಿಸಿ ಎಂದು ರಾಹುಲ್ ಗಾಂಧಿ ಇಬ್ಬರು ನಾಯಕರನ್ನು ಕರೆಸಿ ಸಂಧಾನ ಮಾಡಿಸಿದ್ದರು.

ಇದೀಗ ಸಿದ್ದರಾಮಯ್ಯ ಅವರ ಅಮೃತ ಮಹೋತ್ಸವ ಆಚರಣೆ ಅಂಗವಾಗಿ ರಚನೆಯಾಗಿರುವ ಅಮೃತ ಮಹೋತ್ಸವ ಸಮಿತಿಯ ಇಮೇಲ್ ಇದೀಗ ಕಾಂಗ್ರೆಸ್ ನಾಯಕರಲ್ಲಿ ಚರ್ಚೆ ಹುಟ್ಟುಹಾಕಿದೆ. ಕೈ ಪಕ್ಷದ ಮುಂದಿನ ಸಿಎಂ ಸಿದ್ದು ಎಂಬ ಸೂಕ್ಷ್ಮತೆ ಇಮೇಲ್ ನಲ್ಲಿ ಇರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಅದು ಉದ್ದೇಶ ಪೂರ್ವಕವಾಗಿ ಹಾಕಿದರೂ ಅಥವಾ ಅಭಿಮಾನದಿಂದ ಕ್ರಿಯೇಟ್ ಮಾಡಿದರೋ ಗೊತ್ತಿಲ್ಲ. ಆದ್ರೆ ಸಿದ್ದು ಇಮೇಲ್ ನ ಸಂದೇಶ ಮಾತ್ರ ಅವರನ್ನು ಸಿಎಂ ಅಭ್ಯರ್ಥಿ ಎಂದು ಬಿಂಬಿಸುವಂತಿದೆ. ಇದು ಕೆಲವರ ಕಣ್ಣು ಕೆಂಪಾಗಿಸಿದರೂ ಅಚ್ಚರಿ ಪಡಬೇಕಿಲ್ಲ.












Click it and Unblock the Notifications