ಸಾಯಿ ಗೋಲ್ಡ್ ಪ್ಯಾಲೇಸ್ ಮಾಲೀಕ ಶರವಣಗೆ ಡಾಕ್ಟರೇಟ್

ದಿ ಓಪನ್ ಇಂಟರ್ ನ್ಯಾಷನಲ್ ಯೂನಿವರ್ಸಿಟಿ ಫಾರ್ ಕಾಂಪ್ಲಿಮೆಂಟರಿ ಮೆಡಿಸಿನ್ಸ್ ಸಂಸ್ಥೆಯು ಸಾಮಾಜ ಸೇವೆಯಲ್ಲಿ ಗುರುತಿಸಿಕೊಂಡಿರುವ ಟಿಎ ಶರವಣಗೆ ಗೌರವ ಡಾಕ್ಟರೇಟ್ ಘೋಷಿಸಿದೆ. ನವೆಂಬರ್ 22 ರಿಂದ 24 ರವರೆಗೆ ಶ್ರೀಲಂಕಾದ ಕೊಲಂಬೋದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಟಿಎ ಶರವಣಗೆ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತದೆ.
The Open International University for Complementary Medicine, ಕೊಲಂಬೋದಲ್ಲಿ WHO ಮತ್ತು UNICEF ಯೋಜನೆಯನ್ವಯ 1962ರಲ್ಲಿ ಸ್ಥಾಪಿತವಾಗಿರುವ ಸಂಸ್ಥೆಯಾಗಿದೆ.
ಟಿಎ ಶರವಣ ಅವರು ಚಿನ್ನಾಭರಣ ಹಾಗೂ ಅಪ್ಪಟ ರೇಷ್ಮೆ ಸೀರೆಗಳಿಗೆ ಹೆಸರಾದ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ಮತ್ತು ಶ್ರೀ ಸಾಯಿ ಸ್ಯಾರಿ ಪ್ಯಾಲೇಸ್ ಮಾಲೀಕರು. ನಗರದ ಬಸವನಗುಡಿ ಮತ್ತು ಪದ್ಮನಾಭನಗರದಲ್ಲಿ ಈ ಮಳಿಗೆಗಳಿವೆ.
ಭಾರತ ವಿಶ್ವ ಕಪ್ ಗೆದ್ದಾಗ ಕ್ರಿಕೆಟ್ ಪ್ರೇಮಿ ಶರಣ ಅವರು 2011ರ ಏಪ್ರಿಲ್ ತಿಂಗಳಲ್ಲಿ ಸಚಿನ್ ತೆಂಡೂಲ್ಕರ್ ಅವರಿಗೆ ಚಿನ್ನ ಲೇಪಿತ ಬೆಳ್ಳಿಯ ವಿಶ್ವ ಕಪ್ ಮಾದರಿಯನ್ನು ನೀಡಿದ್ದರು. 4 ಕೆಜಿ ಬೆಳ್ಳಿ ಮತ್ತು 60 ಗ್ರಾಂ ಚಿನ್ನದಿಂದ ಸಿದ್ಧಪಡಿಸಲಾದ ಟ್ರೋಫಿಯ ಜತೆಗೆ ಬೆಳ್ಳಿಯ ಬ್ಯಾಟ್ ಮತ್ತು ಬಾಲ್ ನೀಡಿದ್ದರು.
ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ಮಳಿಗೆಯಲ್ಲಿ ಉತ್ತಮ ಗುಣಮಟ್ಟದ ವೈವಿಧ್ಯಮಯ ವಜ್ರ, ಮಾಣಿಕ್ಯ, ಪಚ್ಚೆ ಮುಂತಾದ ಬೆಲೆಬಾಳುವ ಹರಳುಗಳ ಆಭರಣಗಳು, ಪಾರಂಪರಿಕ ಮತ್ತು ಸಾಂಪ್ರದಾಯಿಕ ಒಡವೆಗಳು, ಚಿನ್ನದ ವಿಗ್ರಹಗಳು, ಕಡಿಮೆ ತೂಕದ ಆಭರಣಗಳು, ಎರಡೂ ಬದಿ ಬಳಸಬಹುದಾದ ನೆಕ್ ಲೆಸ್ ಗಳು, ಕೈಗಡಿಯಾರಗಳು, ಪ್ಲಾಟಿನಂ, ಬೆಳ್ಳಿ ಹಾಗೂ ವಜ್ರಾಭರಣಗಳು ಎಲ್ಲ ವರ್ಗದವರ ಮನಸ್ಸಿಗೊಪ್ಪುವಂತಹ ಬೃಹತ್ ಸಂಗ್ರಹ ಈ ಮಳಿಗೆಗಳಲ್ಲಿವೆ.
ಇನ್ನು, ಶ್ರೀ ಸಾಯಿ ಸ್ಯಾರಿ ಪ್ಯಾಲೇಸ್‌ನಲ್ಲಿ ಪರಿಶುದ್ಧ ರೇಷ್ಮೆ ಸೀರೆಗಳ ಭಂಡಾರವೇ ಇದೆ. ಪೋಚಂಪಲ್ಲಿ, ಟಿಷ್ಯೂ, ಮೊಳಕಾಲ್ಮೂರು, ಪ್ರಿಂಟೆಡ್ ಹ್ಯಾಂಡ್ ಲೂಮ್, ವಧುವಿನ ಸೀರೆಗಳ ಕಲೆಕ್ಷನ್, ಕಸೂತಿ ಕಲೆ, ಕುಸುರಿ ಕೆಲಸಗಳುಳ್ಳ ಸೀರೆಗಳು ಜೊತೆಗೆ ಚೂಡಿದಾರ್, ಫ್ಯಾನ್ಸಿ ಸೀರೆಗಳು, ಡ್ರೆಸ್ ಮೆಟೀರಿಯಲ್ ಮನೆಮಾಡಿವೆ.












Click it and Unblock the Notifications