ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್ 2ನೇ ಅಲೆ; ಕರ್ನಾಟಕದಲ್ಲಿ ಹೊಸ ಕೇಸ್, ಸಾವಿನಲ್ಲಿ ದಾಖಲೆ

|
Google Oneindia Kannada News

ಬೆಂಗಳೂರು, ಮೇ 21; ಕರ್ನಾಟಕದಲ್ಲಿ ಮೇ ತಿಂಗಳಿನಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆಯೂ ಹೆಚ್ಚಿದೆ. ಸೋಂಕಿತರ ಸಾವಿನ ಸಂಖ್ಯೆಯೂ ಹೆಚ್ಚಾಗಿದೆ. ಕೋವಿಡ್ 2ನೇ ಅಲೆ ಮೇ ತಿಂಗಳಿನಲ್ಲಿ ಕರ್ನಾಟಕದಲ್ಲಿ ಆತಂಕ ಸೃಷ್ಟಿ ಮಾಡಿದೆ.

ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ಪ್ರಕಾರ ಕರ್ನಾಟಕದಲ್ಲಿ ಮೇ 20ರ ತನಕ 23,306 ಜನರು ಮೃತಪಟ್ಟಿದ್ದಾರೆ. ಇದರಲ್ಲಿ ಶೇ 34.88 ಅಂದರೆ 8,321 ಜನರು ಮೇ ತಿಂಗಳಿನಲ್ಲಿಯೇ ಸಾವನ್ನಪ್ಪಿದ್ದಾರೆ.

ಬೆಂಗಳೂರು; ಮನೆ ಆರೈಕೆಯಲ್ಲಿದ್ದ 778 ಕೋವಿಡ್ ಸೋಂಕಿತರು ಸಾವು ಬೆಂಗಳೂರು; ಮನೆ ಆರೈಕೆಯಲ್ಲಿದ್ದ 778 ಕೋವಿಡ್ ಸೋಂಕಿತರು ಸಾವು

ಹೊಸ ಪ್ರಕರಣಗಳ ಸಂಖ್ಯೆಲ್ಲಿ ಮೊದಲ ಅಲೆಗೆ ಹೋಲಿಕೆ ಮಾಡಿದರೆ ಮೇ ತಿಂಗಳಿನಲ್ಲಿ 2ನೇ ಅಲೆಯಲ್ಲಿ ಐದು ಪಟ್ಟು ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಸೆಪ್ಟೆಂಬರ್ 20ರಂದು 10 ಸಾವಿರ ಗರಿಷ್ಠ ಹೊಸ ಪ್ರಕರಣ ರಾಜ್ಯದಲ್ಲಿ ದಾಖಲಾಗಿತ್ತು. 2ನೇ ಅಲೆಯಲ್ಲಿ ಮೇ 5ರಂದು ರಾಜ್ಯದಲ್ಲಿ 50,112 ಪ್ರಕರಣ ವರದಿಯಾಗಿದೆ.

ಭಾರತದಲ್ಲಿ ಕೊರೊನಾ 2ನೇ ಅಲೆಯಲ್ಲಿ 269 ವೈದ್ಯರು ಸಾವು ಭಾರತದಲ್ಲಿ ಕೊರೊನಾ 2ನೇ ಅಲೆಯಲ್ಲಿ 269 ವೈದ್ಯರು ಸಾವು

ಕೋವಿಡ್ 2ನೇ ಅಲೆ ಹರಡುವಿಕೆ ತಡೆಯಲು ಕರ್ನಾಟಕದಲ್ಲಿ 14 ದಿನದ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಗುರುವಾರದ ಮಾಹಿತಿಯಂತೆ ಕರ್ನಾಟಕದಲ್ಲಿ 28869 ಹೊಸ ಪ್ರಕರಣ ದಾಖಲಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 534954. ಮೇ 24ರ ತನಕ ರಾಜ್ಯದಲ್ಲಿ ಲಾಕ್‌ಡೌನ್ ಜಾರಿಯಲ್ಲಿರಲಿದೆ.

ಕೋವಿಡ್ ಹೆಚ್ಚಿರುವ ಜಿಲ್ಲೆಗಳಿಗೆ ಆಕ್ಸಿಜನ್ ಕಾನ್ಸಂಟ್ರೇಟರ್: ಸುಧಾಕರ್ ಕೋವಿಡ್ ಹೆಚ್ಚಿರುವ ಜಿಲ್ಲೆಗಳಿಗೆ ಆಕ್ಸಿಜನ್ ಕಾನ್ಸಂಟ್ರೇಟರ್: ಸುಧಾಕರ್

ಯಾವಾಗ ಎಷ್ಟು ಸಾವು?

ಯಾವಾಗ ಎಷ್ಟು ಸಾವು?

ಡಿಸೆಂಬರ್ 31ರ ತನಕ ಕರ್ನಾಟಕದಲ್ಲಿ 12,081 ಸೋಂಕಿತರು ಮೃತಪಟ್ಟಿದ್ದರು. ಬಳಿಕ ಮೊದಲ ಅಲೆ ಅರ್ಭಟ ಕಡಿಮೆಯಾದ ಕಾರಣ ಮೂರು ತಿಂಗಳು ಸಾವಿನ ಸಂಖ್ಯೆಯೂ ಕಡಿಮೆ ಆಯಿತು. ಡಿಸೆಂಬರ್‌ನಿಂದ ಮಾರ್ಚ್ 31ರ ತನಕ ದಾಖಲಾದ ಮರಣಗಳ ಸಂಖ್ಯೆ 504.

ಪ್ರತಿದಿನ ಕನಿಷ್ಠ 100 ಸಾವು

ಪ್ರತಿದಿನ ಕನಿಷ್ಠ 100 ಸಾವು

ಕೋವಿಡ್ 2ನೇ ಅಲೆ ಸಂದರ್ಭದಲ್ಲಿ ಏಪ್ರಿಲ್‌ನಲ್ಲಿ ಪ್ರತಿದಿನ ಕನಿಷ್ಠ 100 ಜನರು ಮೃತಪಟ್ಟಿದ್ದಾರೆ. ಮೇ ತಿಂಗಳಿನಲ್ಲಿ ಪ್ರತಿದಿನ ಸುಮಾರು 416 ಜನರು ಮೃತಪಟ್ಟಿದ್ದಾರೆ. ಗುರುವಾರದ ಮಾಹಿತಿಯಂತೆ ರಾಜ್ಯದಲ್ಲಿ ಮೃತಪಟ್ಟವರ ಸಂಖ್ಯೆ 23,854.

ಹೊಸ ಪ್ರಕರಣಗಳಲ್ಲೂ ಏರಿಕೆ

ಹೊಸ ಪ್ರಕರಣಗಳಲ್ಲೂ ಏರಿಕೆ

ಸಾವಿನ ಸಂಖ್ಯೆ ಮಾತ್ರವಲ್ಲ ಹೊಸ ಪ್ರಕರಣಗಳಲ್ಲೂ ಏರಿಕೆಯಾಗಿದೆ. ಮಾರ್ಚ್ ಅಂತ್ಯದ ವೇಳೆಗೆ ಪ್ರತಿದಿನ ಸುಮಾರು 4000 ಹೊಸ ಪ್ರಕರಣ ದಾಖಲಾಗುತ್ತಿತ್ತು. ಏಪ್ರಿಲ್ 15ರ ವೇಳೆಗೆ ಅದು 14 ಸಾವಿರಕ್ಕೆ ಏರಿಕೆ ಕಂಡಿತು. ಮೇ 5ರಂದು ರಾಜ್ಯದಲ್ಲಿ 50,112 ಹೊಸ ಪ್ರಕರಣ ದಾಖಲಾಗಿತ್ತು.

Recommended Video

ಮಾಸ್ಕ್ ಧರಿಸಿಲ್ಲಾ ಅಂತಾ ಮಹಿಳೆಗೆ ಈ ರೀತಿ ಹಲ್ಲೆ ಮಾಡೋದು ಸರಿನಾ? | Oneindia Kannada
ಯಾವ ಜಿಲ್ಲೆಯಲ್ಲಿ ಎಷ್ಟು?

ಯಾವ ಜಿಲ್ಲೆಯಲ್ಲಿ ಎಷ್ಟು?

ಹೊಸ ಪ್ರಕರಣಗಳ ಸಂಖ್ಯೆ ಬೆಂಗಳೂರು ನಗರದಲ್ಲಿ ಮಾತ್ರ ಹೆಚ್ಚಳವಾಗಿಲ್ಲ. ವಿವಿಧ ಜಿಲ್ಲೆಗಳಲ್ಲಿಯೂ ಹೆಚ್ಚಾಗಿದೆ ಎಂದು ಅಂಕಿ ಸಂಖ್ಯೆಗಳು ಹೇಳುತ್ತಿವೆ. ಮೇ 20ರ ವರದಿಯಂತೆ ಬೆಂಗಳೂರು 9,409. ತುಮಕೂರು 1,796. ಮೈಸೂರು 1,879. ಬಳ್ಳಾರಿ 1,109 ಹೊಸ ಪ್ರಕರಣಗಳು ದಾಖಲಾಗಿವೆ.

English summary
Karnataka reported 23,306 deaths till May 20. 8,321 deaths reported in the month of May. Compare to 1st wave significant spike in fatalities during the second wave.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X