ಕಂದಾಯ ಖಾತೆ ಸಿಕ್ಕರೆ ತುಂಬಾ ಸಂತೋಷ: ಕಾಗೋಡು ತಿಮ್ಮಪ್ಪ

Posted By:
Subscribe to Oneindia Kannada

ಬೆಂಗಳೂರು, ಜೂನ್ 19: ಕರ್ನಾಟಕ ಅಸೆಂಬ್ಲಿ ಸ್ವೀಕರ್ ಸ್ಥಾನಕ್ಕೆ ಭಾನುವಾರ ರಾಜೀನಾಮೆ ನೀಡಿದ ಬಳಿಕ ಖಾಸಗಿ ಸುದ್ದಿವಾಹಿನಿ ಜತೆ ಮಾತನಾಡಿದ ಕಾಗೋಡು ತಿಮ್ಮಪ್ಪ, ಸರ್ಕಾರವನ್ನು ಸರಿದಾರಿಗೆ ತರಲು ಮಾಡಬೇಕಾದ್ದನ್ನು ಮಾಡುತ್ತೇನೆ, ವ್ಯವಸ್ಥೆಯ ಕೊಳೆಯನ್ನು ತೊಳೆಯುವುದೇ ನನ್ನ ಗುರಿ. ಕಂದಾಯ ಖಾತೆ ಪ್ರಬಲವಾಗಿದ್ದು, ನನಗೆ ಕಂದಾಯ ಸಚಿವ ಸ್ಥಾನ ಸಿಕ್ಕರೆ ಸಂತೋಷ ಎಂದಿದ್ದಾರೆ.

ಸಚಿವನಾಗಿ ಕೇವಲ ನನ್ನ ಖಾತೆಗಷ್ಟೇ ಸೀಮಿತವಾಗಿರುವುದಿಲ್ಲ, ಸ್ಪೀಕರ್ ಆಗಿದ್ದಾಗ ಸರ್ಕಾರಕ್ಕೆ ಚಾಟಿ ಬೀಸುತ್ತಿದ್ದೆ ಸಚಿವನಾಗಿಯೂ ಹಾಗೆಯೇ ಚಾಟಿ ಬೀಸುತ್ತಿರುತ್ತೇನೆ ಎಂದು ಕಾಗೋಡು ತಿಮ್ಮಪ್ಪ ಹೇಳಿದ್ದಾರೆ.

Kagodu Thimmappa resigns to Speaker Post, eyes Revenue Minister post

ಕಾಂಗ್ರೆಸ್ ಸಂಘಟನೆ ಸಂಪೂರ್ಣ ದುರ್ಬಲವಾಗಿದೆ, ಸಂಘಟನೆಯನ್ನು ಬೇರು ಮಟ್ಟದಿಂದ ಕಟ್ಟುವ ಕೆಲಸ ಮಾಡುತ್ತೇನೆ ಇಷ್ಟು ದಿನ ಸ್ಪೀಕರ್ ಹುದ್ದೆಯಲ್ಲಿದ್ದ ಕಾರಣಕ್ಕೆ ಇದು ಸಾಧ್ಯವಾಗುತ್ತಿರಲಿಲ್ಲ ಎಂದು ತಮ್ಮ ಆಶಯವನ್ನು ವ್ಯಕ್ತಪಡಿಸಿದ್ದಾರೆ.

ಸ್ಪೀಕರ್ ಸ್ಥಾನಕ್ಕೆ ಆಹ್ವಾನ ಬಂದಿಲ್ಲ: ಕೆಬಿ ಕೋಳಿವಾಡ
ಮಂತ್ರಿಯಾಗಲು ಎಲ್ಲಾ ಅರ್ಹತೆಗಳು ನನ್ನಲ್ಲಿ ಇವೆ. ಪಕ್ಷದ ವರಿಷ್ಠ ನನಗೆ ಅವಕಾಶ ನೀಡಿಲ್ಲ. ಅರ್ಹತೆ ಇದ್ದರೂ ಅವರನ್ನು ಸಂಪುಟದಿಂದ ಕೈಬಿಡುವ ಪರಿಸ್ಥಿತಿ ಬರುತ್ತದೆ. ಅನರ್ಹರಿಗೆ ಸ್ಥಾನ ಕಲ್ಪಿಸಲಾಗುತ್ತದೆ. ಇದು ಮುಖ್ಯಮಂತ್ರಿಗಳ ಪರಮಾಧಿಕಾರಿ. ಅವರು ಸಂದರ್ಭಕ್ಕೆ ತಕ್ಕಂತೆ ವರ್ತಿಸಬೇಕಾಗುತ್ತದೆ. ಈ ಸಂದರ್ಭದಲ್ಲಿ ನಾನು ಯಾರು ಅಯೋಗ್ಯರು, ಯೋಗ್ಯರು ಎಂಬುದನ್ನು ತೀರ್ಮಾನಿಸುತ್ತಾರೆ. 14 ಮಂದಿ ಬಿಟ್ಟಿರುವುದಕ್ಕೆ ಅನರ್ಹತೆ, ಜಾತಿ, ಆರೋಗ್ಯ, ಕಾರ್ಯಕ್ಷಮತೆ ಕಡಿಮೆ ಹೀಗೆ ಅನೇಕ ಕಾರಣಗಳಿರಬಹುದು ಎಂದು ಕೆಬಿ ಕೋಳಿವಾಡ ಅವರು ಪ್ರತಿಕ್ರಿಯಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Veteran leader MLA from Sagara, Shivamogga Kagodu Thimmappa today(Jun 19) officially resigned from Karnataka assembly speaker post. He said he will be happy if he get Revenue portfolio in the Siddaramaiah cabinet.
Please Wait while comments are loading...