ಭಾರೀ ಮಳೆಯ ನಡುವೆಯೂ ಸೈಕ್ಲಿಂಗ್ ಮಾಡಿ ಸೈ ಎನಿಸಿಕೊಂಡ ಎಸ್ಪಿ ಅಣ್ಣಾಮಲೈ
ಚಿಕ್ಕಮಗಳೂರು, ಜುಲೈ.15: ಮಲೆನಾಡಲ್ಲಿ ಭಾರೀ ಗಾಳಿಯೊಂದಿಗೆ ಧಾರಾಕಾರ ಮಳೆಯಾಗುತ್ತಿದೆ. ಆದರೆ ಈ ಮಳೆಯಲ್ಲೇ ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ ಸೈಕ್ಲಿಂಗ್ ರೈಡ್ ಮಾಡಿದ್ದಾರೆ.
ಮಂಗಳೂರು ಮತ್ತು ಚಿಕ್ಕಮಗಳೂರು ಸೈಕ್ಲಿಂಗ್ ಕ್ಲಬ್ ನಿಂದ ಆಯೋಜನೆಗೊಂಡ, ಶನಿವಾರ ನಡೆದ ಮೂರನೇ ವರ್ಷದ 'ಮಾನ್ಸೂನ್ ಬ್ರಿವೇ ಸೈಕ್ಲಿಂಗ್' ನಲ್ಲಿ ಎಸ್ಪಿ ಅಣ್ಣಾಮಲೈ ಕೂಡ ಭಾಗವಹಿಸಿದ್ದರು.
ಬೆಳಗ್ಗೆ ಆರು ಗಂಟೆಗೆ ನಗರದ ಟೌನ್ ಕ್ಯಾಂಟೀನ್ ನಿಂದ ಆರಂಭವಾದ ಸೈಕಲ್ ರಾಲಿಯಲ್ಲಿ 20 ಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. ಬಾಳೆಹೊನ್ನೂರು, ಎನ್.ಆರ್.ಪುರ, ಕೊಪ್ಪ, ತೀರ್ಥಹಳ್ಳಿ, ಮಂಡಗದ್ದೆ ಮಾರ್ಗವಾಗಿ ಸಕ್ರೆಬೈಲಿನ ಮೂಲಕ ಒಟ್ಟು 300 ಕಿ.ಮೀ. ಕ್ರಮಿಸಿ ಅದೇ ಮಾರ್ಗವಾಗಿ ಚಿಕ್ಕಮಗಳೂರಿಗೆ ಹಿಂದಿರುಗಿದ್ದಾರೆ.

ಆದರೆ ಸುರಿಯೋ ಧಾರಾಕಾರ ಮಳೆ, ಭಾರೀ ಗಾಳಿಯ ನಡುವೆಯೇ ಎಸ್ಪಿ ಸೈಕ್ಲಿಂಗ್ ರೈಡ್ ಮಾಡಿರುವುದನ್ನು ಕಂಡು ಸ್ಥಳಿಯರು ಸಂತಸ ವ್ಯಕ್ತಪಡಿಸಿದ್ದಾರೆ. ಅವರು ಮಾರ್ಗ ಮಧ್ಯೆ ಊಟ-ತಿಂಡಿ-ಕಾಫಿಗೆ ಸೈಕಲ್ ನಿಲ್ಲಿಸಿದಾಗ ಅವರೊಂದಿಗೆ ಜನ ಸೆಲ್ಫಿ ತೆಗೆದುಕೊಂಡು ಖುಷಿಪಟ್ಟಿದ್ದಾರೆ.

ಅಣ್ಣಾಮಲೈ ಎರಡನೇ ವರ್ಷದ 'ಮಾನ್ಸೂನ್ ಬ್ರಿವೇ ಸೈಕ್ಲಿಂಗ್' ನಲ್ಲಿಯೂ ಭಾಗವಹಿಸಿದ್ದರು.












Click it and Unblock the Notifications