Express Train: 'ಬಸವ ಎಕ್ಸ್‌ಪ್ರೆಸ್' ಸೇರಿ ವಿವಿಧ ರೈಲುಗಳು ತಾತ್ಕಾಲಿಕ ನಿಲುಗಡೆ ವಿವರ

ಬೆಂಗಳೂರು, ಸೆಪ್ಟಂಬರ್ 23: ವಿಜಯಪುರ ಜಿಲ್ಲೆಯ ಮಹಾಮಹಿಮರ ಸುಕ್ಷೇತ್ರ ಲಚ್ಯಾಣದ ಶ್ರೀ ಸಿದ್ಧಲಿಂಗ ಮಹಾರಾಜರ ಜಾತ್ರೆ ನಡೆಯಲಿದೆ. ಈ ಪ್ರಯುಕ್ತ ನೈಋತ್ಯ ರೈಲ್ವೆ ವಲಯದ ಬಸವ ಎಕ್ಸ್‌ಪ್ರೆಸ್ ರೈಲುಗಳಿಗೆ ಲಚ್ಯಾಣ ರೈಲು ನಿಲ್ದಾಣದಲ್ಲಿ ನಿಲುಗಡೆ ಕೊಡಲು ನಿರ್ಧರಿಸಲಾಗಿದೆ ಎಂದು ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರ ಮಂಜುನಾಥ ಕನಮಡಿ ಅವರು ತಿಳಿಸಿದ್ದಾರೆ.

ಜಿಲ್ಲೆಯ ಲಚ್ಯಾಣದಲ್ಲಿ ಬಸವ ಎಕ್ಸ್‌ಪ್ರೆಸ್‌ ರೈಲನ್ನು ಇದೇ ಸೆಪ್ಟೆಂಬರ್ 24 ಮತ್ತು 25 ರಂದು ಲಭ್ಯ ನಿಲ್ದಾಣದಲ್ಲಿ ಎರಡು ನಿಮಿಷಗಳ ಕಾಲ ತಾತ್ಕಾಲಿಕ ನಿಲುಗಡೆ ಆಗಲಿವೆ. ಇನ್ನು ಕೆಎಸ್‌ಆರ್ ಬೆಂಗಳೂರು-ಮಾರಿಕುಪ್ಪಂ-ಕೆಎಸ್‌ಆರ್ ಬೆಂಗಳೂರು ಮೆಮು ರೈಲು ತಾತ್ಕಾಲಿಕ ನಿಲುಗಡೆ ನೀಡಲಿವೆ. ಹಾಗಾದರೆ ಯಾವ ರೈಲುಗಳು, ಗಾಡಿ ಸಂಖ್ಯೆ ತಿಳಿದು ಪ್ರಯಾಣಿಕರು ಗಮನಿಸಬೇಕಿದೆ.

South Western Railway Basava Express Train Temporary Stoppage at Lachyan station of Vijayapura

* ಮೈಸೂರು-ಬಾಗಲಕೋಟೆ ಬಸವ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 17307) ಲಚ್ಯಾಣ ನಿಲ್ದಾಣಕ್ಕೆ ಬೆಳಗ್ಗೆ 07:23 ಗಂಟೆಗೆ ಆಗಮಿಸಲಿದೆ. ಲಚ್ಯಾಣ ನಿಲ್ದಾಣದಿಂದ 07:25 ಗಂಟೆಗೆ ಹೊರಡಲಿದೆ.

* ಬಾಗಲಕೋಟೆ-ಮೈಸೂರು ಬಸವ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 17308) ಲಚ್ಯಾಣ ನಿಲ್ದಾಣಕ್ಕೆ ಸಂಜೆ 05:25 ಗಂಟೆಗೆ ಆಗಮಿಸಲಿದ್ದು, ಅಲ್ಲಿ ನಿಲುಗಡೆ ನಿಡದ ಬಳಿಕ 05:27 ಗಂಟೆಗೆ ಹೊರಡಲಿದೆ ಎಂದು ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾತ್ಕಾಲಿಕ ನಿಲುಗಡೆಯ ಎಕ್ಸ್‌ಪ್ರೆಸ್ ರೈಲು ವಿವರ

* ರೈಲು ಸಂಖ್ಯೆ 01771/01772 ಕೆಎಸ್‌ಆರ್ ಬೆಂಗಳೂರು-ಮಾರಿಕುಪ್ಪಂ-ಕೆಎಸ್‌ಆರ್ ಬೆಂಗಳೂರು ಮೆಮು ವಿಶೇಷ ಮತ್ತು ರೈಲು ಸಂಖ್ಯೆ 16521 ಬಂಗಾರಪೇಟೆ-ಕೆಎಸ್‌ಆರ್ ಬೆಂಗಳೂರು ಮೆಮು ಎಕ್ಸ್‌ಪ್ರೆಸ್ ರೈಲುಗಳಿಗೆ ದೇವನಗೊಂಡಿ ನಿಲ್ದಾಣದಲ್ಲಿ ಒದಗಿಸಲಾಗಿದೆ. 2024ರ ಅಕ್ಟೋಬರ್ 1ರಿಂದ ಡಿಸೆಂಬರ್ 31ರವರೆಗೆ ಮೂರು ತಿಂಗಳುಗಳ ಕಾಲ ಈ ಪ್ರಕ್ರಿಯೆ ಮುಂದುವರಿಯಲಿದೆ.

* ರೈಲು ಸಂಖ್ಯೆ 16315/16316 ಮೈಸೂರು-ಕೊಚುವೇಲಿ-ಮೈಸೂರು ಎಕ್ಸ್‌ಪ್ರೆಸ್ ಮತ್ತು ರೈಲು ಸಂಖ್ಯೆ 16231 ಕಡಲೂರ್ ಪೋರ್ಟ್-ಮೈಸೂರು ಎಕ್ಸ್‌ಪ್ರೆಸ್ ರೈಲುಗಳಿಗೆ ಮದ್ದೂರು ನಿಲ್ದಾಣದಲ್ಲಿ ಒಂದು ನಿಮಿಷದ ತಾತ್ಕಾಲಿಕ ನಿಲುಗಡೆ ಕೊಡಲಾಗಿದೆ. ಈ ಪ್ರಕ್ರಿಯೆ 2024ರ ಅಕ್ಟೋಬರ್ 1 ರಿಂದ 2025ರ ಅಕ್ಟೋಬರ್ 31 ರವರೆಗೆ ಮುಂದುವರಿಸಲಾಗುತ್ತದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+