• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೊಬೈಲ್ ಟವರ್‌ಗೆ ಅನುಮತಿ ಕಡ್ಡಾಯ: ಶಾಲೆ, ಆಸ್ಪತ್ರೆ ಬಳಿ ನಿಷೇಧ

|

ಬೆಂಗಳೂರು, ನವೆಂಬರ್ 20: ರಾಜ್ಯಾದ್ಯಂತ ಅಳವಡಿಸಲಾಗಿರುವ ಎಲ್ಲಾ ರೀತಿಯ ಟವರ್‌ಗಳಿಗೆ ಆಯಾ ಕಂಪನಿಗಳು ಮೂರು ತಿಂಗಳಳಲ್ಲಿ ಪರವಾನಗಿ ಪಡೆಯುವುದು ಕಡ್ಡಾಯ ಎಂದು ಉಪಮುಖ್ಯಮಂತ್ರಿ ಡಾ ಜಿ ಪರಮೇಶ್ವರ ತಿಳಿಸಿದ್ದಾರೆ.

ಮೊಬೈಲ್ ಟವರ್ ಅಳವಡಿಕೆ ಸಂಬಂಧ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ ಅವರು, ರಾಜ್ಯದಲ್ಲಿ ಇದುವರೆಗೆ ಟವರ್ ಅಳವಡಿಕೆಗೆ ಯಾವುದೇ ರೀತಿಯ ನಿಯಮ ಇರಲಿಲ್ಲ, ಯಾವುದೇ ಮಾನದಂಡವಿಲ್ಲದೆ ನೆಟ್ವರ್ಕ್ ಕಂಪನಿಗಳು ಟವರ್‌ಗಳನ್ನು ಅಳವಡಿಸಿದ್ದಾರೆ.

6 ತಿಂಗಳಿನಲ್ಲಿ ಬೆಂಗಳೂರು ತುಂಬಾ ಉಚಿತ ವೈ-ಫೈ

ಹೀಗಾಗಿ ಜನರ ಆರೋಗ್ಯ ದೃಷ್ಟಿಯಲ್ಲಿಟ್ಟುಕೊಂಡು ಕರ್ನಾಟಕ ಇನ್ಸಾಲೇಷನ್ ಆಫ್ ನ್ಯೂ ಟೆಲಿ ಕಮ್ಯುನಿಕೇಷನ್ ಇನ್‌ಫ್ರಾಸ್ಟ್ರಕ್ಚರ್ ಕಾಯಿದೆಗೆ ಹೊಸದಾಗಿ ಕೆಲವು ನಿಯಮಗಳನ್ನು ರೂಪಿಸಲಾಗಿದ್ದು, ಮುಂದಿನ ದಿನಗಳಲ್ಲಿ ಟವರ್‌ಗಳನ್ನು ಅಳವಡಿಸಲು ಕಡ್ಡಾಯವಾಗಿ ಲೈಸೆನ್ಸ್‌ ಪಡೆಯಲೇಬೇಕಾಗುತ್ತದೆ.

ಪ್ರಸ್ತುತ 30 ಸಾವಿರಕ್ಕೂ ಹೆಚ್ಚು ಒಎಫ್‌ಸಿ ಹಾಗೂ ಟೆಲಿಕಮ್ಯುನಿಕೇಷನ್ ಟವರ್ಸ್ ಗಳಿವೆ. ಬೆಂಗಳೂರಲ್ಲಿ ಒಂದರಲ್ಲೇ 6,766 ಟವರ್‌ಗಳಿವೆ. ಇನ್ನುಮುಂದೆ ಮಹಾನಗರ ಪ್ರದೇಶದಲ್ಲಿ ಹೊಸದಾಗಿ ಟವರ್ ಅಳವಡಿಸುವವರು ಶಾಲಾ, ಕಾಲೇಜು, ಆಶ್ಪತ್ರೆ ಧಾರ್ಮಿಕ ಸಂಸ್ಥೆಗಳಿಂದ ಕನಿಷ್ಠ 50 ಮೀಟರ್ ಅಂತರದಲ್ಲಿ ಅಳವಡಿಸಬೇಕು ಎಂದು ಹೇಳಿದರು.

ದಕ್ಷಿಣ ಕನ್ನಡದ ಕೆಲವು ಗ್ರಾಮಗಳಲ್ಲಿ ಸಿಗಲಿದೆ ಉಚಿತ ವೈಫೈ ಸೇವೆ

ಟವರ್‌ಗಳಿಂದ ಹೊರಹೊಮ್ಮುವ ರೇಡಿಯೇಷನ್ ಗಳಿಂದ ಆರೋಗ್ಯ ಸಮಸ್ಯೆ ಉಂಟಾಗಲಿದೆ ಎಂಬುದರ ಬಗ್ಗೆ ಮೌಖಿಕ ದೂರುಗಳಷ್ಟೇ ಕೇಳಿ ಬಂದಿದೆ. ವೈಜ್ಞಾನಿಕವಾಗಿ ಯಾವುದು ದೃಢಪಟ್ಟಿಲ್ಲ, ಆದರೂ ಜನಸಾಮಾನ್ಯರ ಆರೋಗ್ಯದ ದೃಷ್ಟಿಯಿಂದ ಮುನ್ನೆಚ್ಚರಿಕಾ ಕ್ರಮ ವಹಿಸಲಾಗುತ್ತಿದೆ ಎಂದು ಹೇಳಿದರು.

English summary
The state government will soon come out with a policy for installation of mobile phone and other towers. Urban Development Minister U T Khader said the draft of the policy is ready and will be notified after a meeting with Deputy Chief Minister G Parameshwara who is also in-charge of Bengaluru where the problem is grave.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X