ಎಲ್ಲಾ ಪೊಲೀಸ್ ಠಾಣೆಯಲ್ಲಿ 'ನಿಮಗೆ ಸಹಾಯ ಬೇಕೆ?’ ಡೆಸ್ಕ್ ಆರಂಭ

Posted By: Gururaj
Subscribe to Oneindia Kannada

ಬೆಂಗಳೂರು, ಡಿಸೆಂಬರ್ 06 : ಕರ್ನಾಟಕದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಇನ್ನು ಮುಂದೆ ರಿಸೆಪ್ಷನ್ ಡೆಸ್ಕ್ ಸ್ಥಾಪನೆಯಾಗಲಿದೆ. ಜನಸ್ನೇಹಿ ಪೊಲೀಸ್ ವ್ಯವಸ್ಥೆಯಡಿ ಇದನ್ನು ಸ್ಥಾಪಿಸಲಾಗುತ್ತಿದೆ.

ಡಿಜಿ ಮತ್ತು ಐಜಿಪಿ ನೀಲಮಣಿ ಎನ್.ರಾಜು ಅವರು ಡಿಸೆಂಬರ್ 31ರೊಳಗೆ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ರಿಸೆಪ್ಷನ್ ಡೆಸ್ಕ್ ಆರಂಭಿಸಲು ಸೂಚನೆ ನೀಡಿದ್ದಾರೆ. ತರಬೇತಿ ಪಡೆದ ಸಿಬ್ಬಂದಿಗಳು ಇಲ್ಲಿ ಕಾರ್ಯನಿರ್ವಹಣೆ ಮಾಡಲಿದ್ದಾರೆ.

ರಾಜ್ಯ ಪೊಲೀಸ್ ಮಹಾನಿರ್ದೇಶಕಿ ಖಡಕ್ ಆರ್ಡರ್

Soon all police stations to have reception desk

ಪ್ರತಿ ಪೊಲೀಸ್ ಠಾಣೆಯ 3 ರಿಂದ 4 ಸಿಬ್ಬಂದಿಗಳಿಗೆ ಡೆಸ್ಕ್ ನಲ್ಲಿ ಕಾರ್ಯ ನಿರ್ವಹಿಸಲು ತರಬೇತಿ ನೀಡಲಾಗುತ್ತದೆ. ಠಾಣೆಗೆ ಬರುವ ಪ್ರತಿ ಸಾರ್ವಜನಿಕರ ಜೊತೆ ಮೊದಲು ಇವರು ಮಾತುಕತೆ ನಡೆಸಲಿದ್ದಾರೆ.

ರಾಜ್ಯದ ಮೊದಲ ಮಹಿಳಾ ಡಿಜಿಪಿಯಾಗಿ ನೀಲಮಣಿ ರಾಜು ಅಧಿಕಾರ ಸ್ವೀಕಾರ

May I help you/ ನಿಮಗೆ ಸಹಾಯ ಬೇಕೆ? ಎಂಬ ಹೆಸರಿನಲ್ಲಿ ಡೆಸ್ಕ್ ಸ್ಥಾಪನೆಯಾಗಲಿದೆ. ಇಲ್ಲಿ ವಿಸಿಟರ್ ಪುಸ್ತಕವನ್ನು ಇಡಲಾಗುತ್ತದೆ. ಠಾಣೆಗೆ ಬರುವ ಪ್ರತಿಯೊಬ್ಬ ವ್ಯಕ್ತಿಯೂ ಇಲ್ಲಿ ಹೆಸರು ಮತ್ತು ದೂರವಾಣಿ ಸಂಖ್ಯೆಗಳನ್ನು ಬರೆಯುವುದು ಕಡ್ಡಾಯ.

ಮೈಸೂರು ಎಸ್‌ಪಿ ರವಿ ಡಿ.ಚನ್ನಣ್ಣನವರ್ ಸಂದರ್ಶನ

ವ್ಯಕ್ತಿ ಠಾಣೆಗೆ ಬಂದ ಕಾರಣ, ಭೇಟಿಯಾದ ವ್ಯಕ್ತಿ, ಠಾಣೆಗೆ ಆಗಮಿಸಿದ ಸಮಯ, ಹೊರ ಹೋದ ಸಮಯವನ್ನು ಡೆಸ್ಕ್‌ನಲ್ಲಿ ಕೆಲಸ ಮಾಡುವವರು ನಮೂದು ಮಾಡಿಕೊಳ್ಳಲಿದ್ದಾರೆ. ರಿಜಿಸ್ಟರ್‌ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಹೆಸರು, ಬ್ಯಾಡ್ಜ್ ನಂಬರ್ ಇರುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
All the police stations across the state will have a reception desk in the name of May I Help You. Trained personnel to address the grievances of the public in the desk. DG& IGP Neelamani N Raju has ordered to establish reception desks.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ