ಭಾರತದಾದ್ಯಂತ ಗುರುವಾರ ಏನೆಲ್ಲಾ ಘಟನೆಗಳು ನಡೆದವು?

Posted By:
Subscribe to Oneindia Kannada

ಬೆಂಗಳೂರು,ಮಾರ್ಚ್,03: ಒಂದೆಡೆ ಕುಡಿಯುವ ನೀರಿಗಾಗಿ ಭುಗಿಲೆದ್ದ ರೈತರ ಹೋರಾಟ, ಮತ್ತೊಂದೆಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಊಬ್ಲೋ ವಾಚ್ ವಿವಾದ, ಕೇಂದ್ರ ಬಜೆಟ್ ನ ಆಗು-ಹೋಗುಗಳು ಸದ್ಯಕ್ಕೆ ಬಿಸಿ ಬಿಸಿ ಚರ್ಚೆಯಲ್ಲಿರುವ ವಿಷಯಗಳು.

ಶಾಶ್ವತ ನೀರಾವರಿಗಾಗಿ ಬೆಂಗಳೂರಲ್ಲಿ ಹೋರಾಟ ನಡೆಸುತ್ತಿರುವ ಬಯಲು ಸೀಮೆ ಶಾಶ್ವತ ನೀರಾವರಿ ಹೋರಾಟ ಸಮಿತಿಯ ರೈತರು ಪೊಲೀಸರ ಲಾಠಿ ಏಟಿಗೆ ಒಳಗಾಗಿದ್ದಾರೆ. ಇದರಲ್ಲಿ ಒಬ್ಬ ರೈತರ ಬೆರಳು ತುಂಡಾಗಿದೆ. ಇನ್ನೊಬ್ಬ ರೈತರ ತಲೆಗೆ ಬಲವಾದ ಹೊಡೆತ ಬಿದ್ದಿದೆ. ಇನ್ನಷ್ಟು ಮಂದಿ ರೈತರಿಗೆ ಗಾಯಗಳಾಗಿವೆ. ಇದು ನೀರಿಗಾಗಿ ಪ್ರತಿಭಟನೆ ಕೈಗೊಂಡ ರೈತರ ಪರಿಸ್ಥಿತಿ.[ಕರ್ನಾಟಕದಲ್ಲಿ ಭೀಕರ ಬರಗಾಲ, ಹೇಳುವವರಿಲ್ಲ ಕೇಳುವವರಿಲ್ಲ]

ಆಹಾರ, ಕುಡಿಯುವ ನೀರು, ವೇತನ ಹೆಚ್ಚಳ ಹೀಗೆ ಹಲವಾರು ಬೇಡಿಕೆಗಳ ಈಡೇರಿಕೆಗಾಗಿ ನಾನಾ ಹೋರಾಟಗಳು ಶತಶತಮಾನಗಳಿಂದಲೂ ನಡೆಯುತ್ತಿದೆ. ಆದರೆ ಸರ್ಕಾರ ಇದಕ್ಕೆ ಕಿಂಚಿತ್ತೂ ಬಗೆಹರಿಸದೆ ಭರವಸೆಯ ಮಹಾಪೂರದಲ್ಲಿಯೇ ಜನರ ಬಾಯಿಮುಚ್ಚಿಸುವ ಕಾರ್ಯಗಳು ನಡೆಯುತ್ತಿವೆ.[ಕುಡಿಯುವ ನೀರು ಕೇಳಿದ ರೈತರಿಗೆ ಪೊಲೀಸರ ಲಾಠಿ ಏಟು]

ಈ ಸುದ್ದಿಯ ಜೊತೆಗೆ ಬೆಂಗಳೂರು ಇಂಡಿಯಾ ನ್ಯಾನೊ 2016ರ ಕಾರ್ಯಕ್ರಮ, ಒಂದು ವರ್ಷ ಬಾಹ್ಯಾಕಾಶದಲ್ಲಿ ಕಳೆದು ತನ್ನೂರಿಗೆ ಮರಳಿದ ಸ್ಕಾಟ್ ಕೆಲ್ಲಿಯ ಸಂಭ್ರಮ ಹೀಗೆ ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಸುದ್ದಿಗಳು ಇಲ್ಲಿವೆ.

ರೈತರು ಮತ್ತು ರೈತ ಮುಖಂಡರ ಬಂಧನ

ರೈತರು ಮತ್ತು ರೈತ ಮುಖಂಡರ ಬಂಧನ

ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಶಾಶ್ವತ ಕುಡಿಯುವ ನೀರಾವರಿ ಯೋಜನೆಗೆ ಒತ್ತಾಯಿಸಲು ಭಾಗವಹಿಸಿದ ರೈತ ಸಂಘದ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಸೇರಿದಂತೆ ಹಲವು ರೈತರನ್ನು ಪೊಲೀಸರು ಬಂಧಿಸಿದ್ದಾರೆ.

ಹುಟ್ಟುಹಬ್ಬದ ಶುಭಾಶಯಗಳು

ಹುಟ್ಟುಹಬ್ಬದ ಶುಭಾಶಯಗಳು

ಟಾಟಾ ಗ್ರೂಪಿನ ಮುಖ್ಯಸ್ಥ ಸೀರಸ್ ಮಿಸ್ಟ್ರೀ ಅವರು ಟಾಟಾ ಸ್ಟೀಲ್ ಸಂಸ್ಥೆಯ ಸಂಸ್ಥಾಪಕ ಜಮ್ಸೇತಿ ನಸೇರ್ ವಾಂಜಿ ಅವರ 177ನೇ ವರ್ಷದ ಹುಟ್ಟು ಹಬ್ಬವನ್ನು ಜಮ್ಶೇಧ್ ಪುರದಲ್ಲಿ ಆಚರಿಸಿದರು. ಆ ಸಂದರ್ಭದಲ್ಲಿ ಅವರ ಪುತ್ಥಳಿಗೆ ಹಾರ ಹಾಕಿ ಶುಭಾಶಯ ಹೇಳಿದರು.

ನ್ಯಾನೋ ಸೈನ್ಸ್ ಪ್ರಶಸ್ತಿ ಪ್ರದಾನ

ನ್ಯಾನೋ ಸೈನ್ಸ್ ಪ್ರಶಸ್ತಿ ಪ್ರದಾನ

ಬೆಂಗಳೂರು ಇಂಡಿಯಾ ನ್ಯಾನೊ ೨೦೧೬ರ ಸಮಾರಂಭದಲ್ಲಿ ಪ್ರೊ.ಸಿ.ಎನ್.ಆರ್.ರಾವ್ ಹಾಗೂ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಎಸ್ ಆರ್ ಪಾಟೀಲ್, ಅವರು ಐಐಟಿ ಬಾಂಬೆಯಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿಭಾಗದಲ್ಲಿ ನ್ಯಾನೊ ಎಲೆಕ್ಟ್ರಾನಿಕ್ಸ್ ವಿಭಾಗದ ಮುಖ್ಯಸ್ಥರಾದ ಪ್ರೊ.ರಾಮ್ ಗೋಪಾಲ್ ರಾವ್ ನ್ಯಾನೋ ಸೈನ್ಸ್ ಪ್ರಶಸ್ತಿ ನೀಡಿ ಗೌರವಿಸಿದರು. [ಸಿಎನ್ನಾರ್ ರಾವ್ ರಿಂದ ಬೆಂಗಳೂರು ಇಂಡಿಯಾ ನ್ಯಾನೊಗೆ ಚಾಲನೆ]

ಲೋಕಸಭೆಯಲ್ಲಿ ಮೋದಿ ಮಾತು

ಲೋಕಸಭೆಯಲ್ಲಿ ಮೋದಿ ಮಾತು

ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನೆ ಸಲ್ಲಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸಂಸತ್ತಿನ ಕಲಾಪಗಳು ಗಲಭೆಗೆ ಅವಕಾಶ ಕೊಡಬಾರದು. ಸಂಸತ್ ಇರುವುದು ಚರ್ಚೆ ನಡೆಸುವುದಕ್ಕೆ ಎಂದು ಸಲಹೆ ನೀಡಿದರು.[ರಾಜೀವ್ ಹೇಳಿಕೆ ಮೂಲಕ ಕಾಂಗ್ರೆಸ್ ಗೆ ಪಾಠ ಹೇಳಿದ ಮೋದಿ]

ಸ್ಕಾಟ್ ಕೆಲ್ಲಿಯ ಹೇಳಿದ್ದೇನು?

ಸ್ಕಾಟ್ ಕೆಲ್ಲಿಯ ಹೇಳಿದ್ದೇನು?

ಒಂದು ವರ್ಷ ಬಾಹ್ಯಾಕಾಶದಲ್ಲಿ ಇದ್ದು ಬಂದ ಅಮೆರಿಕಾದ ಸ್ಕಾಟ್ ಕೆಲ್ಲಿ ಅವರು ತಮ್ಮ ಅನುಭವದ ಕಂತೆಯನ್ನು ಬಿಚ್ಚಿಟ್ಟಿದ್ದಾರೆ. ಇವರೊಂದಿಗೆ ರಷ್ಯಾದ ಮೈಕೆಲ್ ಕೊರ್ನಿಕೋ, ಸರ್ಜೆ ವೊಲಕೋವ್ ಹೋಗಿದ್ದಾರೆ. ಅದರಲ್ಲಿ ಕೆಲ್ಲಿ ಮತ್ತು ಮೈಕೆಲ್ ಕೊರ್ನಿಕೋ ಅವರು ದೇಹದ ತೂಕ ಹೆಚ್ಚಾಗದಂತೆ ನೋಡಿಕೊಳ್ಳುವುದರಿಂದ ಏನೆಲ್ಲಾ ಪರಿಣಾಮಗಳು ಆಗುತ್ತದೆ ಎಂಬುದರ ಕುರಿತು ದತ್ತಾಂಶ ಸಂಗ್ರಹಿಸಿದ್ದಾರೆ.[ವರ್ಷದ ನಂತರ ಭೂಮಿಗೆ ಬಂದವನ ಮೊದಲ ದಿನದ ಅನುಭವ]

ಕ್ರಿಕೆಟಿಗರಿಂದ ಸ್ವಚ್ಛ ಕ್ಲಿನಿಕ್ ಗೆ ಚಾಲನೆ

ಕ್ರಿಕೆಟಿಗರಿಂದ ಸ್ವಚ್ಛ ಕ್ಲಿನಿಕ್ ಗೆ ಚಾಲನೆ

ಕ್ರಿಕೆಟಿಗರಾದ ವೆಂಕಟೇಶ್ ಪ್ರಸಾದ್ ಮತ್ತು ಜ್ಹೂಲನ್ ಗೋಸ್ವಾಮಿ ಅವರು ಮಕ್ಕಳೊಂದಿಗೆ ಸೇರಿ ಸ್ವಚ್ಛ ಕ್ಲಿನಿಕ್ ಗೆ ಚಾಲನೆ ನೀಡಿದರು. ಆ ಸಂದರ್ಭದಲ್ಲಿ ಮಕ್ಕಳೊಂದಿಗೆ ಸಂಭ್ರಮಪಟ್ಟಿದ್ದು ಹೀಗೆ. ಸ್ವಚ್ಛ ಕ್ಲಿನಿಕ್ ಉದ್ಘಾಟನಾ ಕಾರ್ಯಕ್ರಮವು ಐಸಿಸಿ ಮತ್ತು ಯುನಿಸೆಫ್ ಅವರ ಸಹಭಾಗಿತ್ವದಲ್ಲಿ ಬೆಂಗಳೂರಿನಲ್ಲಿ ನಡೆಯಿತು.[ವಿಶ್ವ ಟಿ20ಗಾಗಿ ಟೀಂ ಇಂಡಿಯಾಕ್ಕೆ ಸಕತ್ ಟ್ರೆಂಡಿ ದಿರಿಸು]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Bharat Ratna Prof C N R Rao and Karnataka Minister for Information Technology S R Patil presents Prof C N R RAO Bangalore India Nano Science Award to Prof V Ramgopal Rao, Chair Professor and Chief Investigator for the Centre of Excellence in Nanoelectronics Project at IIT Bombay at a function in Bengaluru. Cyrus Mistry, Chairman of Tata Group pays homage to founder of Tata Steel Jamsetji Nusserwanji Tata on his 177th birth anniversary in Jamshedpur.
Please Wait while comments are loading...