ಬಿಜೆಪಿಯಲ್ಲಿ ಸಭೆ ಕರೆಯುವವರು ಗತಿ ಇಲ್ಲ ನಾಯಕತ್ವವೇ ಇಲ್ಲ: ಕಾಂಗ್ರೆಸ್
ರಾಜ್ಯದಲ್ಲಿ ಚುನಾವಣೆ ನಡೆದು, ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು 100 ದಿನಗಳನ್ನೂ ಕಂಪ್ಲೀಟ್ ಮಾಡಿದೆ. ಆದರೂ ಬಿಜೆಪಿ ಮಾತ್ರ ವಿರೋಧ ಪಕ್ಷದ ನಾಯಕನ ಆಯ್ಕೆಯನ್ನೇ ಮಾಡಿಲ್ಲ. ರಾಜ್ಯ ಬಿಜೆಪಿ ವಿಧಾನಸಭೆ ಚುನಾವಣೆಯ ಹೀನಾಯ ಸೋಲಿನಿಂದ ಕಂಗೆಟ್ಟು ಹೋಗಿದೆ ಅಂತಾ ಕಾಂಗ್ರೆಸ್ ಹೇಳುತ್ತಿದೆ. ಹೀಗಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ತಿಕ್ಕಾಟ ಬಲು ಜೋಗಾಗಿದೆ. ಇದೇ ಹೊತ್ತಲ್ಲಿ ಬಿಜೆಪಿಯ ಗಾಯಕ್ಕೆ ಉಪ್ಪು ಸುರಿದಿದೆ ಕಾಂಗ್ರೆಸ್!
ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಸೋಷಿಯಲ್ ಮೀಡಿಯಾ ವಾರ್ ಮುಂದುವರಿಯುತ್ತಿದೆ. ಅತ್ತ ಕಾಂಗ್ರೆಸ್ ಬಗ್ಗೆ ಬಿಜೆಪಿ, ಇತ್ತ ಬಿಜೆಪಿ ಬಗ್ಗೆ ಕಾಂಗ್ರೆಸ್ ಟ್ವೀಟ್‌ನಲ್ಲೇ ಯುದ್ಧ ಸಾರಿವೆ. ಈ ಯುದ್ಧ ಜೋರಾಗಿದ್ದು, ಬಿಜೆಪಿ ವಿಪಕ್ಷ ನಾಯಕನ ಆಯ್ಕೆ ಮಾಡದ ವಿಚಾರದ ಬಗ್ಗೆ ಕಾಂಗ್ರೆಸ್ ಮತ್ತೆ ಕಮೆಂಟ್ ಮಾಡಿದೆ. ಅಲ್ಲದೆ ಬಿಜೆಪಿ ನಾಯಕರಿಗೆ ಈ ಮೂಲಕ ಟಾಂಗ್ ಕೊಟ್ಟಿದ್ದು, ಚುನಾವಣೆ ಮುಗಿದರೂ ಎರಡೂ ಪಕ್ಷಗಳ ಮಧ್ಯೆ ತಿಕ್ಕಾಟ ಮುಂದುವರಿದಿದೆ. ಹಾಗಾದರೆ ಬಿಜೆಪಿ ನಾಯಕರ ಬಗ್ಗೆ ಕಾಂಗ್ರೆಸ್ ಹೇಳಿದ್ದೇನು? ಮುಂದೆ ಓದಿ.

ಬಿಜೆಪಿಯಲ್ಲಿ ದಿನಕ್ಕೊಂದು ವ್ಯಥೆ..
ಕಾಂಗ್ರೆಸ್ ಇದೀಗ ಬಿಜೆಪಿ ವಿರುದ್ಧ ಟ್ವೀಟ್ ಮಾಡಿದ್ದು, 'ಚಂದಮಾಮದಲ್ಲಿ ಬರುತ್ತಿದ್ದ "ದಿನಕ್ಕೊಂದು ಕತೆ"ಯಂತೆ ಬಿಜೆಪಿಯಲ್ಲಿ ದಿನಕ್ಕೊಂದು ವ್ಯಥೆ ಹೊರಬರುತ್ತಿದೆ! ಬಿಜೆಪಿಯಲ್ಲಿ ಸಭೆ ಕರೆಯುವವರು ಗತಿ ಇಲ್ಲ, ನಾಯಕತ್ವವೇ ಇಲ್ಲ, ಬಿಜೆಪಿಯನ್ನು ಯಾರೋ ಅದೃಶ್ಯ ವ್ಯಕ್ತಿಯೊಬ್ಬರು ನಿಯಂತ್ರಿಸುತ್ತಿದ್ದಾರೆ ಎಂದಿದ್ದಾರೆ ಬಿಜೆಪಿಯ ರೇಣುಕಾಚಾರ್ಯ. ಯಾರು ಆ "ಸಂತೋಷ"ದಿಂದಿರುವ ಅದೃಶ್ಯ ವ್ಯಕ್ತಿ ಬಿಜೆಪಿ ಕರ್ನಾಟಕ. ವಿಪಕ್ಷ ನಾಯಕ, ರಾಜ್ಯಾಧ್ಯಕ್ಷನ ಆಯ್ಕೆಯಾಗದಂತೆ ತಡೆದಿರುವುದು ಅದೇ ಅದೃಶ್ಯ ವ್ಯಕ್ತಿಯೇ?' ಎಂದು ಪ್ರಶ್ನೆ ಮಾಡಿದೆ. ಈ ಮೂಲಕ ಮೊದಲೇ ಆಂತರಿಕ ಬೆಂಕಿಯಲ್ಲಿ ಒದ್ದಾಡುತ್ತಿರುವ ಕಮಲ ಪಾಳಯಕ್ಕೆ ರಾಜ್ಯ ಕಾಂಗ್ರೆಸ್ ಘಟಕ ತಿರುಗೇಟು ನೀಡಿದೆ.
ಚಂದಮಾಮದಲ್ಲಿ ಬರುತ್ತಿದ್ದ "ದಿನಕ್ಕೊಂದು ಕತೆ"ಯಂತೆ ಬಿಜೆಪಿಯಲ್ಲಿ ದಿನಕ್ಕೊಂದು ವ್ಯಥೆ ಹೊರಬರುತ್ತಿದೆ!
— Karnataka Congress (@INCKarnataka) August 29, 2023
ಬಿಜೆಪಿಯಲ್ಲಿ ಸಭೆ ಕರೆಯುವವರು ಗತಿ ಇಲ್ಲ, ನಾಯಕತ್ವವೇ ಇಲ್ಲ,
ಬಿಜೆಪಿಯನ್ನು ಯಾರೋ ಅದೃಶ್ಯ ವ್ಯಕ್ತಿಯೊಬ್ಬರು ನಿಯಂತ್ರಿಸುತ್ತಿದ್ದಾರೆ ಎಂದಿದ್ದಾರೆ ಬಿಜೆಪಿಯ ರೇಣುಕಾಚಾರ್ಯ.
ಯಾರು ಆ "ಸಂತೋಷ"ದಿಂದಿರುವ ಅದೃಶ್ಯ ವ್ಯಕ್ತಿ… pic.twitter.com/VppNWepRNZ
ಕಾಂಗ್ರೆಸ್ ವಿರುದ್ಧ ಬಿಜೆಪಿ ಸಮರ!
ಇನ್ನು ಮತ್ತೊಂದು ಕಡೆ 100 ದಿನ ಪೂರೈಸಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಕೂಡ ಸಮರ ಸಾರಿದೆ. ಈ ಕುರಿತು ಬಿಜೆಪಿ ನಾಯಕರು ಪುಸ್ತಕ ಬಿಡುಗಡೆ ಮಾಡಿದ್ದಾರೆ. ಹಾಗೇ ಕರ್ನಾಟಕ ಬಿಜೆಪಿ ಘಟಕ ಟ್ವೀಟ್ ಮಾಡಿ, 'ಸರ್ವಾಧಿಕಾರಿ ಧೋರಣೆ ತೋರುತ್ತಿರುವ ರಾಜ್ಯ ಕಾಂಗ್ರೆಸ್ ತುಘಲಕ್ ಸರ್ಕಾರದ 100 ದಿನಗಳ ಕರಾಳ ಆಡಳಿತ ಕುರಿತ ʻಕೈ ಕೊಟ್ಟ ಯೋಜನೆಗಳು, ಹಳಿ ತಪ್ಪಿದ ಆಡಳಿತʼ ಪುಸ್ತಕವನ್ನು ರಾಜ್ಯಾಧ್ಯಕ್ಷರಾದ ಶ್ರೀ @nalinkateel, ಮಾಜಿ ಮುಖ್ಯಮಂತ್ರಿಗಳಾದ ಶ್ರೀ @BSBommai ಮತ್ತು ಮಾಜಿ ಸಚಿವರಾದ ಶ್ರೀ @GovindKarjol ಅವರು ಇಂದಿನ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿದರು.' ಎಂದು ಕಾಂಗ್ರೆಸ್ ವಿರುದ್ಧ ತೊಡೆತಟ್ಟಿದೆ.

ಸರ್ವಾಧಿಕಾರಿ ಧೋರಣೆ ತೋರುತ್ತಿರುವ ರಾಜ್ಯ ಕಾಂಗ್ರೆಸ್ ತುಘಲಕ್ ಸರ್ಕಾರದ 100 ದಿನಗಳ ಕರಾಳ ಆಡಳಿತ ಕುರಿತ ʻಕೈ ಕೊಟ್ಟ ಯೋಜನೆಗಳು, ಹಳಿ ತಪ್ಪಿದ ಆಡಳಿತʼ ಪುಸ್ತಕವನ್ನು ರಾಜ್ಯಾಧ್ಯಕ್ಷರಾದ ಶ್ರೀ @nalinkateel, ಮಾಜಿ ಮುಖ್ಯಮಂತ್ರಿಗಳಾದ ಶ್ರೀ @BSBommai ಮತ್ತು ಮಾಜಿ ಸಚಿವರಾದ ಶ್ರೀ @GovindKarjol ಅವರು ಇಂದಿನ ಪತ್ರಿಕಾಗೋಷ್ಠಿಯಲ್ಲಿ… pic.twitter.com/NdsFKIvMGa
— BJP Karnataka (@BJP4Karnataka) August 29, 2023
ಒಟ್ನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಫೈಟ್ ಬಲು ಜೋರಾಗಿದೆ. ಹೀಗೆ ಎರಡೂ ಪಕ್ಷಗಳಲ್ಲಿ ಆಂತರಿಕ ಕಿತ್ತಾಟ ಇದ್ದರೂ, ಒಬ್ಬರ ಮೇಲೊಬ್ಬರು ಆರೋಪ ಮಾಡುತ್ತಿದ್ದಾರೆ ಅನ್ನುತ್ತಾ ಜನ ಚರ್ಚೆ ಮಾಡುತ್ತಿದ್ದಾರೆ. ಇದೆಲ್ಲಾ ಏನೇ ಇರಲಿ, ರಾಜಕೀಯದ ಹೊರತು ರಾಜ್ಯದಲ್ಲಿ ಅಭಿವೃದ್ಧಿಯಾಗಲಿ ಅಂತಾ ಇನ್ನಷ್ಟು ಜನ ಆಗ್ರಹಿಸುತ್ತಿದ್ದಾರೆ. ಈ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಿತ್ತಾಟದ ಬಗ್ಗೆ ಚರ್ಚೆ ಬಲು ಜೋರಾಗಿದೆ.











Click it and Unblock the Notifications