ರಾಜೀನಾಮೆಗೆ ಮುನ್ನ ಕೃಷ್ಣ, ಶಾರನ್ನು ಭೇಟಿ ಮಾಡಿದ್ದೇಕೆ?

By: ಅನುಷಾ ರವಿ
Subscribe to Oneindia Kannada

ಬೆಂಗಳೂರು, ಜನವರಿ 30 : ಶ್ರೀನಿವಾಸ ಪ್ರಸಾದ ರಾಜೀನಾಮೆ, ಮಹದೇವ ಪ್ರಸಾದ್ ಸಾವು, ಮೇಟಿ ಲೈಂಗಿಕ ಹಗರಣ, ಜಾರಕಿಹೊಳಿ ಐಟಿ ರೇಡು ಮುಂತಾದ ಘಟನೆಗಳಿಂದ ಜರ್ಝರಿತವಾಗಿರುವ ಕಾಂಗ್ರೆಸ್ ಪಕ್ಷಕ್ಕೆ ಮುಟ್ಟಿನೋಡಿಕೊಳ್ಳುವಂಥ ಹೊಡೆತ ಕೊಟ್ಟಿರುವ ಎಸ್ಎಂ ಕೃಷ್ಣ ಅವರ ಬಳಿಯಿಂದ ಮತ್ತೊಂದು ಅಚ್ಚರಿಯ ಸುದ್ದಿಯೊಂದು ಬಂದಿದೆ.

ಅದೇನೆಂದರೆ, ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ ಜನವರಿ 28ರ ಐದು ದಿನ ಮೊದಲು ಜನವರಿ 23ರಂದು, 84 ವರ್ಷದ ಸೋಮನಹಳ್ಳಿ ಮಲ್ಲಯ್ಯ ಕೃಷ್ಣ ಅವರು, ಬಿಜೆಪಿಯ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿಯಾಗಿದ್ದರು. ಬಿಜೆಪಿಯ ಮೂಲಗಳು ಈ ಸುದ್ದಿಯನ್ನು ಖಚಿತಪಡಿಸಿವೆ. [ಸೋತು ಸೊರಗಿದ್ದ ಅತೃಪ್ತರನ್ನು ಬಡಿದೆಬ್ಬಿಸಿದ ಕೃಷ್ಣರ ಪಾಂಚಜನ್ಯ]

ಕೃಷ್ಣ ಅವರು ರಾಜೀನಾಮೆ ಪತ್ರವನ್ನು ಸೋನಿಯಾ ಗಾಂಧಿ ಅವರಿಗೆ ರವಾನಿಸುತ್ತಿದ್ದಂತೆ, ಕಾಂಗ್ರೆಸ್ ಪಕ್ಷದಲ್ಲಿ ಕಾರ್ಮೋಡ ಕವಿದಂಥ ವಾತಾವರಣ ಸೃಷ್ಟಿಯಾಗಿದ್ದರೆ, ಬಿಜೆಪಿ ಪಾಳಯದಲ್ಲಿ ಕಾರ್ಮೋಡಗಳೆಲ್ಲ ಮರೆಯಾಗಿ ಹೊಂಬಿಸಿಲು ಮೂಡಿದಂಥ ವಾತಾವರಣ ಸೃಷ್ಟಿಯಾಗಿತ್ತು. ಬಿಜೆಪಿಯ ನಾಯಕರು, ಕೃಷ್ಣ ಬಿಜೆಪಿ ಸೇರುವುದಾದರೆ ಸ್ವಾಗತ ಎಂದು ಹೇಳಿಕೆ ನೀಡಿದರು.[ಸಿದ್ಧರಾಮಯ್ಯ ಕಾಂಗ್ರೆಸ್ ಪಕ್ಷಕ್ಕೆ ಶನಿ ಇದ್ದಂತೆ-ಜನಾರ್ದನ ಪೂಜಾರಿ]

ಸ್ವಾಗತ ಕೋರಿದ ಸದಾನಂದ ಗೌಡ

ಸ್ವಾಗತ ಕೋರಿದ ಸದಾನಂದ ಗೌಡ

ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಅವರು, "ಎಸ್ಎಂ ಕೃಷ್ಣ ಅವರು ಸನ್ನಡತೆಯ ರಾಜಕಾರಣಿ. ಅವರು ಬಿಜೆಪಿ ಸೇರುವುದಾದರೆ ಮುಕ್ತಹಸ್ತದಿಂದ ಅವರನ್ನು ಬರಮಾಡಿಕೊಳ್ಳುತ್ತೇವೆ. ಅವರು ಪಕ್ಷಕ್ಕೆ ಖಂಡಿತ ಬಲ ನೀಡುತ್ತಾರೆ. ಇನ್ನಷ್ಟು ನಾಯಕರು ಕಾಂಗ್ರೆಸ್ ತೊರೆಯುವ ನಿರೀಕ್ಷೆಯಿದೆ. ನಾಯಕರ ಗಣನೆ ತೆಗೆದುಕೊಂಡರೆ ಕಾಂಗ್ರೆಸ್ ಬಲ ಭಾರೀ ಕುಸಿಯಲಿದೆ" ಎಂದಿದ್ದರು.[ರಾಜಕೀಯ ನಿವೃತ್ತಿ ಡಿಕ್ಷನರಿಯಲ್ಲೇ ಇಲ್ಲ: ಎಸ್ಸೆಂ ಕೃಷ್ಣ]

ಮಂಕಾಗಿದ್ದ ಬಿಜೆಪಿಗೆ ಹೊಸ ಕಳೆ

ಮಂಕಾಗಿದ್ದ ಬಿಜೆಪಿಗೆ ಹೊಸ ಕಳೆ

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಕೂಡ ಕೃಷ್ಣ ಅವರು ಬಿಜೆಪಿ ಸೇರಿಕೊಂಡರೆ ಸುಸ್ವಾಗತ ಕೋರುವುದಾಗಿ ಹೇಳಿದ್ದಾರೆ. ಕೃಷ್ಣ ನಿರ್ಗಮನದಿಂದ ಕಾಂಗ್ರೆಸ್ ದುರ್ಬಲವಾಗಿ ಕಾಣುತ್ತಿದ್ದರೆ, ಯಡಿಯೂರಪ್ಪ ಮತ್ತು ಈಶ್ವರಪ್ಪ ಗುದ್ದಾಟದಿಂದ ಮಂಕಾಗಿದ್ದ ಬಿಜೆಪಿಗೆ ಹೊಸ ಕಳೆ ಬಂದಂತಾಗಿದೆ.[ಎಸ್.ಎಂ. ಕೃಷ್ಣರ ನಿವಾಸದಲ್ಲಿ ಕಾಂಗ್ರೆಸ್ ನಾಯಕರ ಚರ್ಚೆ]

ಚುನಾವಣೆಯಲ್ಲಿ ಬಿಜೆಪಿಗೆ ಬಲ ತರಲಿದ್ದಾರೆ ಕೃಷ್ಣ

ಚುನಾವಣೆಯಲ್ಲಿ ಬಿಜೆಪಿಗೆ ಬಲ ತರಲಿದ್ದಾರೆ ಕೃಷ್ಣ

ಇದೀಗ ಕೇಳಿಬರುತ್ತಿರುವ ಸುದ್ದಿಯೇನೆಂದರೆ, ಅಮಿತ್ ಶಾ ಅವರನ್ನು ಭೇಟಿಯಾದ ನಂತರ ಕಾಂಗ್ರೆಸ್‌ಗೆ ಗುಡ್ ಬೈ ಹೇಳಿರುವ ಎಸ್ಸೆಂ ಕೃಷ್ಣ ಸದ್ಯದಲ್ಲಿಯೇ ಭಾರತೀಯ ಜನತಾ ಪಕ್ಷ ಸೇರಲಿದ್ದಾರೆ ಅಥವಾ 2018ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸಹಾಯಹಸ್ತ ಚಾಚಲಿದ್ದಾರೆ. ಯಾವುದಾದರೂ ಬಿಜೆಪಿಗೆ ಲಾಭವೇ.[ಎಸ್ ಎಂ ಕೃಷ್ಣ ಅಂದ್ರೆ ನೆನಪಾಗುವ ಈ ಐದು ವಿಚಾರ]

ಕಾಂಗ್ರೆಸ್ ವರ್ಚಸ್ಸಿಗೆ ಭಾರೀ ಹೊಡೆತ

ಕಾಂಗ್ರೆಸ್ ವರ್ಚಸ್ಸಿಗೆ ಭಾರೀ ಹೊಡೆತ

ಕೃಷ್ಣ ಅವರ ನಡೆಯಿಂದ ಕಾಂಗ್ರೆಸ್ ವರ್ಚಸ್ಸಿಗೆ ಭಾರೀ ಹೊಡೆತ ನೀಡಿರುವುದಂತೂ ಗ್ಯಾರಂಟಿ. ಸಿದ್ದರಾಮಯ್ಯ ಅವರ ನಿರ್ಲಕ್ಷ್ಯದಿಂದ ಘಾಸಿಗೀಡಾಗಿದ್ದ ಕೃಷ್ಣ ಅವರು, ಆತ್ಮಾಭಿಮಾನಕ್ಕೆ ಧಕ್ಕೆ ನೀಡುತ್ತಿರುವ ಪಕ್ಷದಲ್ಲಿ ನಾನಿರುವುದಿಲ್ಲ ಎಂದು ಹೇಳಿ ಹೊರಬಂದಿದ್ದಾರೆ. ರಾಹುಲ್ ಗಾಂಧಿ ಕೂಡ ಹಿಂದೆ ಕೃಷ್ಣ ಅವರನ್ನು ಕಡೆಗಣಿಸಿದ್ದಾರೆ.

ಚುನಾವಣೆಯಲ್ಲಿ ವ್ಯತಿರಿಕ್ತ ಪರಿಣಾಮ ಗ್ಯಾರಂಟಿ

ಚುನಾವಣೆಯಲ್ಲಿ ವ್ಯತಿರಿಕ್ತ ಪರಿಣಾಮ ಗ್ಯಾರಂಟಿ

"ಹಳೇ ಮೈಸೂರು ಪ್ರಾಂತ್ಯದಲ್ಲಿ ಎಸ್ಸೆಂ ಕೃಷ್ಣ ಅವರು ಮೊದಲಿನ ಹಿಡಿತ ಹೊಂದಿರದಿರಬಹುದು. ಕಾಂಗ್ರೆಸ್ಸನ್ನು ಗೆಲ್ಲಿಸಲು ಸಾಧ್ಯವಾಗದಿರಬಹುದು. ಆದರೆ, ಅವರ ರಾಜೀನಾಮೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಚುನಾವಣೆಯಲ್ಲಿ ವ್ಯತಿರಿಕ್ತ ಪರಿಣಾಮ ಬೀರುವುದಂತೂ ಖಚಿತ. ಅದು ಕಾಂಗ್ರೆಸ್ ಪಕ್ಷದ ಕಳವಳಕ್ಕೆ ಕಾರಣವಾಗಿದೆ." ಎಂದು ಕಾಂಗ್ರೆಸ್ ಪದಾಧಿಕಾರಿಯೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ.

ಪರಂ ಮತ್ತು ಡಿಕೆಶಿ ಪ್ರಯತ್ನ ವಿಫಲ

ಪರಂ ಮತ್ತು ಡಿಕೆಶಿ ಪ್ರಯತ್ನ ವಿಫಲ

ಕೃಷ್ಣ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬ ಸುದ್ದಿ ಹೊರಬೀಳುತ್ತಿದ್ದಂತೆ ಅವರನ್ನು ಮನವೊಲಿಸಿ, ರಾಜೀನಾಮೆ ಹಿಂತೆಗೆದುಕೊಳ್ಳಲು ದೌಡಾಯಿಸಿದ್ದು ಗೃಹ ಸಚಿವ ಡಾ. ಎಂ. ಪರಮೇಶ್ವರ ಮತ್ತು ಕೃಷ್ಣ ಅವರ ಪಟ್ಟಶಿಷ್ಯ ಡಿಕೆ ಶಿವಕುಮಾರ್ ಅವರು. ಆದರೆ, ಅವರ ಪ್ರಯತ್ನ ಫಲ ನೀಡಿಲ್ಲ.

ಸಾಂತ್ವನಗೊಳಿಸುವ ಕೆಲಸ ಸಿದ್ದು ಮಾಡಲಿಲ್ಲ

ಸಾಂತ್ವನಗೊಳಿಸುವ ಕೆಲಸ ಸಿದ್ದು ಮಾಡಲಿಲ್ಲ

ಪರಮೇಶ್ವರ ಮತ್ತು ಡಿಕೆಶಿ ಅವರನ್ನು ಹೊರತುಪಡಿಸಿದರೆ, ಕೃಷ್ಣ ಅವರನ್ನು ಕಡೆಗಣಿಸಿರುವ ಸಿದ್ದರಾಮಯ್ಯ ಅವರಾಗಲಿ, ಕರ್ನಾಟಕದ ಕಾಂಗ್ರೆಸ್ ಸಂಸದರಾಗಲಿ ಅವರನ್ನು ಭೇಟಿಯಾಗಿ ಸಾಂತ್ವನ ಹೇಳುವ, ಮನವೊಲಿಸುವ ಪ್ರಯತ್ನವನ್ನೇ ಮಾಡಿಲ್ಲ. ಇದು ಕೃಷ್ಣ ಅವರಿಗೆ ಭಾರೀ ಹೊಡೆತ ನೀಡಿದೆ.

ರಾಜಕೀಯ ನಿವೃತ್ತಿ ಇಲ್ಲವೇ ಇಲ್ಲ

ರಾಜಕೀಯ ನಿವೃತ್ತಿ ಇಲ್ಲವೇ ಇಲ್ಲ

ವಯಸ್ಸು 84 ಆಗಿದ್ದರೂ ಎಸ್ಸೆಂ ಕೃಷ್ಣ ಅವರಲ್ಲಿ ರಾಜಕೀಯ ಇನ್ನೂ ಯೌವನಾವಸ್ಥೆಯಲ್ಲಿದೆ. ರಾಜಕಾರಣದಲ್ಲಿ ಸಾಕಷ್ಟು ಮಾಗಿರುವ ಅವರ ಮನದಲ್ಲಿ ರಾಜಕೀಯ ಇನ್ನೂ ಹಚ್ಚಹಸಿರಾಗಿದೆ, ಇನ್ನೂ ಮಾಡಬೇಕೆಂಬ ಹುಮ್ಮಸ್ಸು ತುಂಬಿಕೊಂಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Sources from BJP suggest that days before his he resigned from the Congress, SM Krishna had met BJP National President Amit Shah. On January 23 in Delhi, Krishna met Shah 5 days before he sent his resignation letter to Sonia Gandhi.
Please Wait while comments are loading...