ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Bengaluru-Mysuru Expressway ಗೆ ನಾಲ್ವಡಿ ಹೆಸರಿಸಲು ಎಸ್‌ಎಂ ಕೃಷ್ಣ ಪತ್ರ

|
Google Oneindia Kannada News

ಬೆಂಗಳೂರು, ಜನವರಿ 2: ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿಯ ಹಿರಿಯ ನಾಯಕ ಎಸ್ ಎಂ ಕೃಷ್ಣ ಅವರು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರನ್ನು ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ವೇ ಇಡಬೇಕೆಂದು ಒತ್ತಾಯಿಸಿದ್ದಾರೆ.

ಜನವರಿ 1ರಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬರೆದ ತಮ್ಮ ಪ್ರತ್ಯೇಕ ಪತ್ರಗಳಲ್ಲಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕರುಣಾಮಯಿ ರಾಜರು, ತಮ್ಮ ಆಡಳಿತ ಸುಧಾರಣೆಗಳು ಮತ್ತು ಸಾಧನೆಗಳಿಗಾಗಿ ಮಹಾತ್ಮಾ ಗಾಂಧಿಯವರಿಂದ 'ರಾಜರ್ಷಿ' ಎಂಬ ಗೌರವವನ್ನು ಗಳಿಸಿದ್ದಾರೆ ಎಂದು ಕೃಷ್ಣ ಹೇಳಿದ್ದಾರೆ.

Bengaluru Mysuru Expressway : ಸಚಿವ ಗಡ್ಕರಿಯಿಂದ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇ ಪರಿಶೀಲನೆBengaluru Mysuru Expressway : ಸಚಿವ ಗಡ್ಕರಿಯಿಂದ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇ ಪರಿಶೀಲನೆ

ಅವರ 1902 ಮತ್ತು 1940ರ ನಡುವೆ ಆಳ್ವಿಕೆಯಲ್ಲಿ ನಾಲ್ವಡಿ ಕೃಷ್ಣರಾಜ ಅವರು ಈ ಪ್ರದೇಶದ ರೈತರ ಜೀವನಾಡಿ ಕೃಷ್ಣರಾಜ ಸಾಗರ (ಕೆಆರ್ಎಸ್), ಶಿವನಸಮುದ್ರದಲ್ಲಿ ಜಲವಿದ್ಯುತ್ ಯೋಜನೆ, ಕನ್ನಡ ಸಾಹಿತ್ಯ ಪರಿಷತ್ತಿನ ರಚನೆ, ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ, ಭದ್ರಾವತಿ, ಕೆ.ಆರ್.ಆಸ್ಪತ್ರೆ, ಶ್ರೀಗಂಧದ ಎಣ್ಣೆ ಕಾರ್ಖಾನೆ ಹಾಗೂ ಮೈಸೂರು ಸಕ್ಕರೆ ಕಾರ್ಖಾನೆ ಸೇರಿದಂತೆ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಕೈಗೊಂಡಿದ್ದರು ಎಂದು ಕೃಷ್ಣ ಪತ್ರದಲ್ಲಿ ತಿಳಿಸಿದ್ದಾರೆ.

ಪರಂಪರೆ ಮತ್ತು ಸಂಪ್ರದಾಯಗಳಿಂದ ಸಮೃದ್ಧ

ಪರಂಪರೆ ಮತ್ತು ಸಂಪ್ರದಾಯಗಳಿಂದ ಸಮೃದ್ಧ

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ತಮ್ಮ ಸುಮಾರು ನಾಲ್ಕು ದಶಕಗಳ ಆಳ್ವಿಕೆಯಲ್ಲಿ, ಸಮುದಾಯ ಸಹಬಾಳ್ವೆಯ ಮಾನವೀಯ ದೃಷ್ಟಿಯನ್ನು ಬೆಳೆಸಿದರು. ಅದು ಮೈಸೂರಿನ ಸಂಸ್ಕೃತಿಯನ್ನು ರೂಪಿಸಿತು. ಇದು ಪರಂಪರೆ ಮತ್ತು ಸಂಪ್ರದಾಯಗಳಿಂದ ಸಮೃದ್ಧವಾಗಿದೆ ಎಂದು ಪತ್ರಗಳಲ್ಲಿ ತಿಳಿಸಲಾಗಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿಯ ನೀತಿಗಳು ಮತ್ತು ಕಲ್ಯಾಣ ಕ್ರಮಗಳು ಬೆಂಗಳೂರು ಮತ್ತು ಮೈಸೂರಿನ ಲಕ್ಷಾಂತರ ಜನರ ಮನಸ್ಸಿನಲ್ಲಿ ಅಚ್ಚೊತ್ತಿವೆ. ಆದ್ದರಿಂದ ಎಕ್ಸ್‌ಪ್ರೆಸ್‌ವೇಗೆ (ಎನ್‌ಎಚ್ 275) ಅವರ ಹೆಸರನ್ನು ಇಡುವುದು ದೊಡ್ಡ ಗೌರವವಾಗಿದೆ ಎಂದು ಎಸ್‌ಎಂ ಕೃಷ್ಣ ತಿಳಿಸಿದ್ದಾರೆ.

ಎರಡು ನಗರಗಳ ನಡುವಿನ ಅಂತರ ಕಡಿಮೆ

ಎರಡು ನಗರಗಳ ನಡುವಿನ ಅಂತರ ಕಡಿಮೆ

ಕಾಂಗ್ರೆಸ್ ಎಂಎಲ್ಸಿಗಳಾದ ದಿನೇಶ್ ಗೂಳಿಗೌಡ ಮತ್ತು ಮಧು ಜಿ ಮಾದೇಗೌಡ ಅವರು ಮಾಡಿದ ಇದೇ ರೀತಿಯ ಬೇಡಿಕೆಯನ್ನು ಮಾಡಿದ್ದರು. ಈ ಇಬ್ಬರೂ ಎಕ್ಸ್‌ಪ್ರೆಸ್‌ವೇಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಿಡಲು ಕೋರಿದ್ದರು. ಡಿಸೆಂಬರ್ 21 ರಂದು ಮೈಸೂರು- ಕೊಡಗಿನ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರು ಗಡ್ಕರಿ ಅವರಿಗೆ ಪತ್ರ ಬರೆದು ದೆಹಲಿಯ 'ಯಮುನಾ ಎಕ್ಸ್‌ಪ್ರೆಸ್‌ವೇ' ಮತ್ತು ಮಧ್ಯಪ್ರದೇಶದ 'ನರ್ಮದಾ ಎಕ್ಸ್‌ಪ್ರೆಸ್‌ವೇ' ರೀತಿಯಲ್ಲಿ ಹೆದ್ದಾರಿಯನ್ನು 'ಕಾವೇರಿ ಎಕ್ಸ್‌ಪ್ರೆಸ್‌ವೇ' ಎಂದು ಮರುನಾಮಕರಣ ಮಾಡುವಂತೆ ಕೇಂದ್ರ ಸಚಿವರನ್ನು ಕೋರಿದ್ದರು. ಮಹತ್ವಾಕಾಂಕ್ಷೆಯ ದಶಪಥ ಹೆದ್ದಾರಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಯೋಜನೆ (ರಾಷ್ಟ್ರೀಯ ಹೆದ್ದಾರಿ 275) ಎರಡು ನಗರಗಳ ನಡುವಿನ ಅಂತರವನ್ನು ಅರ್ಧದಷ್ಟು ಕಡಿಮೆ ಮಾಡುತ್ತದೆ.

ಕಾವೇರಿ ಎಕ್ಸ್‌ಪ್ರೆಸ್‌ವೇ ಎಂದಿಡಲು ಆಗ್ರಹ

ಕಾವೇರಿ ಎಕ್ಸ್‌ಪ್ರೆಸ್‌ವೇ ಎಂದಿಡಲು ಆಗ್ರಹ

ರಾಜ್ಯದಲ್ಲಿ ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್‌ವೇಗೆ ಹೆಸರು ಇಡುವುದೆ ಒಂದು ರಾಜಕಾರಣವಾಗಿ ಬದಲಾಗಿದ್ದು, ಈಗಾಗಲೇ ಈ ಹೆದ್ದಾರಿಗೆ ಕಾವೇರಿ ಎಕ್ಸ್‌ಪ್ರೆಸ್‌ವೇ ಎಂದು ಹೆಸರಿಡಲು ಮನವಿ ಮಾಡಲಾಗಿತ್ತು. ಈಗ ಕಾಂಗ್ರೆಸ್ ನಾಯಕರು ಒಡೆಯರ್ ಎಕ್ಸ್‌ಪ್ರೆಸ್‌ವೇ ಎಂದು ಹೆಸರಿಡಲು ಮನವಿ ಮಾಡಿದ್ದರು. 2023 ರ ಜನವರಿ 5 ರಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಎಕ್ಸ್‌ಪ್ರೆಸ್‌ವೇಯನ್ನು ಪರಿಶೀಲಿಸಲು ನಿರ್ಧರಿಸಲಾಗಿದೆ ಎಂದು ಲೋಕೋಪಯೋಗಿ ಸಚಿವ ಸಿ ಸಿ ಪಾಟೀಲ್ ಬುಧವಾರ ವಿಧಾನ ಪರಿಷತ್ತಿಗೆ ಮಾಹಿತಿ ನೀಡಿದ್ದಾರೆ.

118 ಕಿಲೋಮೀಟರ್ ಉದ್ದದ ರಸ್ತೆ

118 ಕಿಲೋಮೀಟರ್ ಉದ್ದದ ರಸ್ತೆ

ಕೆಂಗೇರಿಯಿಂದ ಮೈಸೂರಿಗೆ ಎಕ್ಸ್‌ಪ್ರೆಸ್‌ವೇ ಪ್ರಸ್ತುತ 3.5 ಗಂಟೆಗಳ ಪ್ರಯಾಣವನ್ನು ಕೇವಲ 1.5 ಗಂಟೆಗೆ ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ರಸ್ತೆಯು 118 ಕಿಲೋಮೀಟರ್ ಉದ್ದವನ್ನು ಹೊಂದಿದ್ದು, ಉದ್ಘಾಟನೆಗೂ ಮುನ್ನವೇ ವಾಹನಗಳ ಭಾರೀ ಸಂಚಾರಕ್ಕೆ ಸಾಕ್ಷಿಯಾಗಿದೆ. ಎನ್‌ಎಚ್‌ಎಐ ಅಧಿಕಾರಿಗಗಳು ಹೇಳುವಂತೆ ಎಕ್ಸ್‌ಪ್ರೆಸ್‌ವೇಯಲ್ಲಿ 16 ಅಪಘಾತ ವಲಯಗಳಿದೆ. ಆದರೆ ಅಧಿಕಾರಿಗಳು ಯಾವುದೇ ಸೂಚನಾ ಫಲಕಗಳನ್ನು ಅಳವಡಿಸಿಲ್ಲ.

English summary
Former Chief Minister and senior BJP leader SM Krishna has written to Union Road Transport and Highways Minister Nitin Gadkari and Chief Minister Basavaraj Bommai demanding that the Bengaluru-Mysore Expressway be named after Nalwadi Krishnaraja Wodeyar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X