ಲೋಕಾಯುಕ್ತದಲ್ಲಿ ಭ್ರಷ್ಟಾಚಾರ, ನ್ಯಾ.ಭಾಸ್ಕರರಾವ್ ವಿಚಾರಣೆ
ಬೆಂಗಳೂರು, ಆಗಸ್ಟ್ 13 : ಲೋಕಾಯುಕ್ತದಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣದ ತನಿಖೆ ನಡೆಸುತ್ತಿರುವ ಕಮಲ್ ಪಂಥ್ ನೇತೃತ್ವದ ವಿಶೇಷ ತನಿಖಾ ದಳ ಕರ್ನಾಟಕ ಲೋಕಾಯುಕ್ತ ನ್ಯಾ.ಭಾಸ್ಕರರಾವ್ ಅವರನ್ನು ವಿಚಾರಣೆ ನಡೆಸುವ ಸಾಧ್ಯತೆ ಇದೆ, ವಿಚಾರಣೆಗೆ ಈಗಾಗಲೇ ಪ್ರಶ್ನೆಗಳನ್ನು ಸಿದ್ಧಗೊಳಿಸಿಕೊಳ್ಳಲಾಗಿದೆ.
ಎಸ್‌ಐಟಿ ಮೂಲಗಳು ಒನ್ ಇಂಡಿಯಾಕ್ಕೆ ನೀಡಿರುವ ಮಾಹಿತಿಯ ಅನ್ವಯ ಆ.17ರಂದು ನ್ಯಾ.ಭಾಸ್ಕರರಾವ್ ವಿಚಾರಣೆ ನಡೆಯಲಿದೆ. ಸದ್ಯ, ಭಾಸ್ಕರರಾವ್ ಅವರು ರಜೆ ಮೇಲೆ ತೆರಳಿದ್ದು, ಶುಕ್ರವಾರ ಕಚೇರಿಗೆ ಆಗಮಿಸುವ ಸಾಧ್ಯತೆ ಇದೆ. ಆ.17ರಂದು ಪ್ರಶ್ನೆಗಳನ್ನು ಎಸ್‌ಐಟಿ ಅವರಿಗೆ ತಲುಪಿಸಲಿದೆ. [ಸೋಮವಾರದ ತನಕ ಅಶ್ವಿನ್ ರಾವ್ ಗೆ ಜೈಲು]

ಮೊದಲು ಎಸ್‌ಐಟಿ ಪ್ರಶ್ನೆಗಳನ್ನು ಭಾಸ್ಕರರಾವ್ ಅವರಿಗೆ ಕಳುಹಿಸಲಿದ್ದು, ಲೋಕಾಯುಕ್ತರು ಅದಕ್ಕೆ ಲಿಖಿತ ಉತ್ತರಗಳನ್ನು ನೀಡಿದರೆ ಸಾಕಾಗುತ್ತದೆ. ಅಗತ್ಯವಿದ್ದರೆ ಮತ್ತೊಮ್ಮೆ ಅವರನ್ನು ವಿಚಾರಣೆ ನಡೆಸಲು ಎಸ್‌ಐಟಿ ನಿರ್ಧರಿಸಿದೆ. [ವಿ.ಭಾಸ್ಕರ್ ಬಂಧನ]
ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳು ಲೋಕಾಯುಕ್ತ ಕಚೇರಿ ದೂರವಾಣಿಯನ್ನು ಬಳಸಿದ್ದಾರೆ ಎಂಬ ಆರೋಪಗಳಿಗೆ. ಆದ್ದರಿಂದ, ಈ ಕುರಿತು ಪ್ರಶ್ನೆಗಳನ್ನು ನ್ಯಾ.ಭಾಸ್ಕರರಾವ್ ಅವರಿಗೆ ಕೇಳಲಾಗುತ್ತದೆ. ಲೋಕಾಯುಕ್ತ ಕಚೇರಿಯಲ್ಲಿಯೇ ಹಣದ ಬೇಡಿಕೆ ಇಟ್ಟಿದ್ದರು ಎಂಬ ಆರೋಪಗಳಿವೆ. ಈ ಕುರಿತು ಪ್ರಶ್ನೆಗಳಿರುತ್ತವೆ.
ಅಂದಹಾಗೆ ಲೋಕಾಯುಕ್ತದಲ್ಲಿನ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅಶ್ವಿನ್ ರಾವ್, ಅಶೋಕ್ ಕುಮಾರ್, ಶ್ರೀನಿವಾಸಗೌಡ ಹಾಗೂ ಶಂಕರೇಗೌಡ, ಸೈಯದ್ ರಿಯಾಜ್ ಅವರನ್ನು ಬಂಧಿಸಲಾಗಿದೆ.












Click it and Unblock the Notifications