ಪ್ರಜ್ವಲ್ ರೇವಣ್ಣಗೆ ಎದುರಾಯ್ತು 'ಸೀರೆ' ಸಂಕಷ್ಟ
ಮಹಿಳೆಯರಿಗೆ ಲೈಂಗಿಕ ಕಿರುಕುಳ ಹಾಗೂ ಅತ್ಯಾಚಾರದ ಆರೋಪದಲ್ಲಿ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸದ್ಯ ಜೈಕು ಸೇರಿದ್ದಾರೆ. ಇನ್ನು ಈ ಕೇಸ್‌ನಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ಅಧಿಕಾರಿಗಳು ಪ್ರಜ್ವಲ್ ರೇವಣ್ಣ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದು, ಇದರಲ್ಲಿ ಆಘಾತಕಾರಿ ಅಂಶಗಳು ಹೊರಬಂದಿದೆ ಎಂದು ಹೇಳಲಾಗುತ್ತಿದೆ.
ತನಿಖಾಧಿಕಾರಿಗಳು ಬರೋಬ್ಬರಿ 1,632 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದ್ದು, ಇದರಲ್ಲಿ 113 ಸಾಕ್ಷಿಗಳು ಒಳಗೊಂಡಿವೆ ಎನ್ನಲಾಗಿದೆ. ಇದರಲ್ಲಿ ಪ್ರಜ್ವಲ್ ರೇವಣ್ಣ ಮಹಿಳೆಯರಿಗೆ ಯಾವ ಲೈಂಗಿಕ ಕಿರುಕುಳ ನೀಡಿದ್ದರು? ಅವರ ಕ್ರೌರ್ಯ ಯಾವ ರೀತಿ ಇತ್ತು? ಎಂಬುದೆಲ್ಲ ಉಲ್ಲೇಖವಾಗಿದೆ.

ಅದರಲ್ಲೂ ಪ್ರಜ್ವಲ್ ಪಾಲಿಗೆ ಈಗ ಸೀರೆ ವಿಲನ್ ಆಗಿದೆ. ಪ್ರಜ್ವಲ್ ಅವರಿಂದ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಾರೆ ಎನ್ನಲಾದ ಸಂತ್ರಸ್ತೆಯರ ಸೀರೆಯಲ್ಲಿ ವೀರ್ಯ (sperm) ಮತ್ತು ಕೂದಲು ಪತ್ತೆಯಾಗಿದೆ ಎನ್ನಲಾಗಿದೆ. ಈ ಸೀರೆಯಲ್ಲಿ ಪತ್ತೆಯಾಗಿರುವ ವೀರ್ಯ ಯಾರದ್ದು? ಪ್ರಜ್ವಲ್ ಅತ್ಯಾಚಾರದ ವೇಳೆ ವೀರ್ಯ ಸಂತ್ರಸ್ತೆಯರ ಸೀರೆ ಮೇಲೆ ಬಿದ್ದಿತ್ತಾ? ಎನ್ನುವುದನ್ನು ದೃಢಪಡಿಸಿಕೊಳ್ಳಲು ಪ್ರಜ್ವಲ್ ರೇವಣ್ಣಗೆ ಡಿಎನ್‌ಎ ಪರೀಕ್ಷೆ ಕೂಡ ನಡೆಸಲಾಗಿದೆಯಂತೆ.
ಈ ಸಂಬಂಧ ಪ್ರಜ್ವಲ್ ರೇವಣ್ಣ ಅವರ ವೀರ್ಯದ ಮಾದರಿಯನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದ್ದು, ಡಿಎನ್‌ಎ ವರದಿಯಲ್ಲಿ ಸೀರೆಯಲ್ಲಿ ಪತ್ತೆಯಾದದ್ದು ಪ್ರಜ್ವಲ್ ಅವರ ವೀರ್ಯ ಎಂದು ಹೋಲಿಕೆಯಾದರೆ, ಈ ಕೇಸ್ ಮತ್ತೊಂದು ತಿರುವು ಪಡೆದುಕೊಳ್ಳಲಿದೆ. ಅಲ್ಲದೆ, ಪ್ರಜ್ವಲ್ ರೇವಣ್ಣಗೆ ಸಂಕಷ್ಟ ಮತ್ತೊಮ್ಮೆ ಎದುರಾಗಲಿದೆ ಎಂದೂ ಹೇಳಲಾಗುತ್ತಿದೆ.
ಚಾರ್ಜ್‌ಶೀಟ್‌ನಲ್ಲಿ ಕ್ರೌರ್ಯದ ಉಲ್ಲೇಖ: ಪ್ರಜ್ವಲ್ ರೇವಣ್ಣ ಬನ್ನಿಕೋಡ ತೋಟದ ಮನೆಯಲ್ಲಿ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಚಾರ್ಜ್‌ಶೀಟ್‌ನಲ್ಲಿ ಎಳೆಎಳೆಯಾಗಿ ಬಿಚ್ಚಿಡಲಾಗಿದೆ. ಮೊದಲಿಗೆ ಮಹಿಳೆಗೆ ನೀರು ತರುವಂತೆ ಸೂಚಿಸಿದ ಪ್ರಜ್ವಲ್, ಕೊಠಡಿಗೆ ಬಂದ ಕೂಡಲೇ ಬಾಗಿಲು ಹಾಕಿದ್ದರು. ನಂತರ ಮಹಿಳೆ ಎಷ್ಟು ಕೇಳಿಕೊಂಡರೂ ಬಾಗಿಲು ತೆಗೆದಿಲ್ಲ. ಕೊನೆಗೆ ಬಲವಂತವಾಗಿ ಸೀರೆ ಎಳೆದು, ಒಳ ಉಡುಪುಗಳನ್ನು ಬಿಚ್ಚಿಸಿ, ಮಹಿಳೆಗೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಬಳಿಕ ಅದರ ವಿಡಿಯೋ ಕೂಡ ರೆಕಾರ್ಡ್ ಮಾಡಿಕೊಂಡಿದ್ದರು ಎನ್ನುವ ವಿಚಾರ ಚಾರ್ಜ್‌ಶೀಟ್‌ನಲ್ಲಿ ಎಸ್‌ಐಟಿ ಅಧಿಕಾರಿಗಳು ಉಲ್ಲೇಖಿಸಿದ್ದಾರೆ.

ಇದೇ ರೀತಿ ಬಸವನಗುಡಿಯ ಮನೆಯಲ್ಲೂ ಮಹಿಳೆ ಸ್ವಚ್ಛತಾ ಕೆಲಸಕ್ಕೆಂದು ಬಂದಿದ್ದಾಗಲೂ ಪ್ರಜ್ವಲ್ ರೇವಣ್ಣ ಇದೇ ಮಾದರಿಯಲ್ಲಿ ಕಿರುಕುಳ ನೀಡಿದ್ದರು. ಬಟ್ಟೆ ತೆಗೆದುಕೊಂಡು ಹೋಗುವ ನೆಪದಲ್ಲಿ ಮಹಿಳೆಯನ್ನು ರೂಮಿಗೆ ಕರೆದಿದ್ದರು. ಆದರೆ, ಮಹಿಳೆ ಒಳ ಹೋಗಲು ಒಪ್ಪಿರಲಿಲ್ಲ. ಆಗ ಗದರಿಸಿ, ಮಹಿಳೆಯನ್ನು ಒಳಗೆ ಕರೆದುಕೊಂಡಿದ್ದರು. ಒಳಗೆ ಹೋಗುತ್ತಿದ್ದಂತೆ ಚಿಲಕ ಹಾಕಿಕೊಂಡು ಅವರ ಮೇಲೆರಗಿ ಅತ್ಯಾಚಾರ ಮಾಡಿದ್ದರು ಎಂದೂ ಉಲ್ಲೇಖಿಸಿರುವುದಾಗಿ ವರದಿಯಾಗಿದೆ.
ಇನ್ನು ಈ ಕೃತ್ಯ ಎಸಗುವಾಗ ಪ್ರಜ್ವಲ್ ರೇವಣ್ಣ ತನ್ನ ಮೊಬೈಲ್ ಮೂಲಕ ಅತ್ಯಾಚಾರದ ವಿಡಿಯೋ ರೆಕಾರ್ಡ್ ಮಾಡಿದ್ದರು. ಸಂತ್ರಸ್ತೆ ಕೈ ಮುಗಿದು ಬೇಡಿದ್ದರೂ ಬಿಟ್ಟಿರಲಿಲ್ಲ. ಸಂತ್ರಸ್ತೆಯು ನಾನು ನಿಮ್ಮ ತಾತ ಹಾಗೂ ಅಪ್ಪನಿಗೆ ಇದೇ ಕೈಯಲ್ಲಿ ಊಟ ಹಾಕಿದ್ದೇನೆ. ದಯವಿಟ್ಟು ನನ್ನನ್ನು ಬಿಡು ಎಂದು ಬೇಡಿಕೊಂಡರೂ ಪ್ರಜ್ವಲ್ ಕ್ರೌಯ ಮುಂದುವರಿಸಿದ್ದರು ಎಂದು ಎಸ್‌ಐಟಿ ಅಧಿಕಾರಿಗಳು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.












Click it and Unblock the Notifications