ಗೌರಿ ಲಂಕೇಶ್‌ ಹತ್ಯೆಗೆ ವಾಹನ ಒದಗಿಸಿದ್ದ 'ಮೆಕ್ಯಾನಿಕ್‌' ಬಂಧನ

ಬೆಂಗಳೂರು, ಅಕ್ಟೋಬರ್ 12: ಗೌರಿ ಲಂಕೇಶ್ ಹತ್ಯೆಗೆ ಬೈಕ್ ಒದಗಿಸಿದ್ದ ವ್ಯಕ್ತಿ ಸೂರ್ಯವಂಶಿ ಎಂಬುವನನ್ನು ಎಸ್‌ಐಟಿ ಪೊಲೀಸರು ಬಂಧಿಸಿದ್ದಾರೆ.

ಮಹಾರಾಷ್ಟ್ರ ಪೊಲೀಸರ ಬಂಧನದಲ್ಲಿದ್ದ ಸೂರ್ಯವಂಶಿ ಅಲಿಯಾಸ್ ಮೆಕ್ಯಾನಿಕ್‌ನನ್ನು ಎಸ್‌ಐಟಿ ಪೊಲೀಸರು ಈ ಮೊದಲೆ ಬಾಡಿ ವಾರೆಂಟ್‌ ಮೂಲಕ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಕೃತ್ಯದಲ್ಲಿ ಆತನ ಕೈವಾಡವೂ ಇರುವುದು ಖಾತ್ರಿಯಾಗುತ್ತಿದ್ದಂತೆ ಬಂಧಿಸಿ ಕೇಸು ದಾಖಲಿಸಲಾಗಿದೆ.

ಸೂರ್ಯವಂಶಿಯನ್ನು ಮಹಾರಾಷ್ಟ್ರ ಪೊಲೀಸರು ಎರಡು ತಿಂಗಳ ಹಿಂದೆಯೇ ನರೇಂದ್ರ ದಾಬೋಲ್ಕರ್‌ ಹತ್ಯೆ ಕೇಸಿನಲ್ಲಿ ಬಂಧಿಸಿದ್ದರು. ಮೆಕ್ಯಾನಿಕ್ ಆಗಿದ್ದ ಸೂರ್ಯವಂಶಿ ಬೈಕ್ ಕಳ್ಳತನ ಕೂಡ ಮಾಡುತ್ತಿದ್ದ. ದಾಬೋಲ್ಕರ್‌ ಹತ್ಯೆ ಪ್ರಕರಣದಲ್ಲೂ ಈತನ ಕೈವಾಡ ಇತ್ತೆನ್ನಲಾಗಿದೆ.

'ಮೆಕ್ಯಾನಿಕ್‌'ಗಾಗಿ ಬಲೆ ಬೀಸಿದ ಎಸ್‌ಐಟಿ

'ಮೆಕ್ಯಾನಿಕ್‌'ಗಾಗಿ ಬಲೆ ಬೀಸಿದ ಎಸ್‌ಐಟಿ

ಗೌರಿ ಹತ್ಯೆಗೆ ಬಳಸಿದ್ದ ಬೈಕ್, ಮಹಾರಾಷ್ಟ್ರದಲ್ಲಿ ಬಂಧಿತನಾದ ಶರದ್ ಕಳಾಸ್ಕರ್ ಬಳಿ ಪತ್ತೆಯಾಗಿತ್ತು. ಆದರೆ ಆತ ಬೈಕಿನ ಮಾಲೀಕನಾಗಿರಲಿಲ್ಲ. ಈ ಬೈಕ್‌ ಅನ್ನು ಮೆಕ್ಯಾನಿಕ್ ಒಬ್ಬ ನನಗೆ ನೀಡಿದ್ದ ಎಂದು ಆತ ಎಸ್‌ಐಟಿ ಬಳಿ ಹೇಳಿದ್ದ ಹಾಗಾಗಿ ಎಸ್‌ಐಟಿಯು ಮೆಕ್ಯಾನಿಕ್‌ನ ಪತ್ತೆಗೆ ಬಲೆ ಬೀಸಿತ್ತು.

ಅಮೋಲ್ ಕಾಳೆ ಡೈರಿಯಿಂದ ಸುಳಿವು

ಅಮೋಲ್ ಕಾಳೆ ಡೈರಿಯಿಂದ ಸುಳಿವು

ಗೌರಿ ಹತ್ಯೆಯ ಮಾಸ್ಟರ್‌ ಮೈಂಡ್ ಅಮೋಲ್ ಕಾಳೆ ಡೈರಿಯಲ್ಲಿಯೂ ಸಹ 'ಮೆಕ್ಯಾನಿಕ್‌' ಎಂಬ ಹೆಸರಿತ್ತು. ಹಾಗಾಗಿ ಎಸ್‌ಐಟಿ ಪೊಲೀಸರು ಮಹಾರಾಷ್ಟ್ರ ಎಎಸ್‌ಟಿ ವಶದಲ್ಲಿದ್ದ ಸೂರ್ಯವಂಶಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿ ಸತ್ಯಾಂಶ ಹೊರತೆಗೆದಿದ್ದಾರೆ.

ಬೈಕ್‌ ಕಳ್ಳತನ ಮಾಡುತ್ತಿದ್ದ ಸೂರ್ಯವಂಶಿ

ಬೈಕ್‌ ಕಳ್ಳತನ ಮಾಡುತ್ತಿದ್ದ ಸೂರ್ಯವಂಶಿ

ಮೊದಲಿಗೆ ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಸೂರ್ಯವಂಶಿ ಆ ನಂತರ ಮೆಕ್ಯಾನಿಕ್‌ ಶಾಪ್ ತೆರೆದು ಮೆಕ್ಯಾನಿಕ್ ಆದ ನಂತರ ಬೈಕ್‌ ಕಳ್ಳತನ ಪ್ರಾರಂಭಿಸಿದ್ದ. ಹಿಂದೂ ಸಂಘಟನೆಯೊಂದಿಗೆ ನಂತರವೂ ನಿಕಟ ಸಂಪರ್ಕ ಮುಂದುವರೆಸಿದ್ದ ಹತ್ಯೆಗಳಿಗೆ ಕದ್ದ ಬೈಕ್‌ ಒದಗಿಸುವ ಕಾರ್ಯವನ್ನು ಸೂರ್ಯವಂಶಿ ಮಾಡುತ್ತಿದ್ದ.

2023ರ ವೇಳೆಗೆ ಹಿಂದೂ ರಾಷ್ಟ್ರ ನಿರ್ಮಾಣದ ಗುರಿ

2023ರ ವೇಳೆಗೆ ಹಿಂದೂ ರಾಷ್ಟ್ರ ನಿರ್ಮಾಣದ ಗುರಿ

2023 ರ ವೇಳೆಗೆ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಪರಿವರ್ತಿಸುವ ಗುರಿ ಈ ತಂಡಕ್ಕೆ ಇದ್ದುದಾಗಿ ಆತ ಎಸ್‌ಐಟಿ ಮುಂದೆ ಹೇಳಿಕೆ ನೀಡಿದ್ದಾನೆ ಗುರಿ ಈಡೇರಿಕೆಗಾಗಿ ಹಿಂದೂ ಧರ್ಮದ ವಿರುದ್ಧ ಮಾತನಾಡುವವರನ್ನು ಹತ್ಯೆ ಮಾಡಲು ಅವರು ನಿರ್ಧರಿಸಿದ್ದರು.

ನಿವೃತ್ತ ನ್ಯಾಯಾಧೀಶರ ಹತ್ಯೆಗೆ ಸಂಚು

ನಿವೃತ್ತ ನ್ಯಾಯಾಧೀಶರ ಹತ್ಯೆಗೆ ಸಂಚು

ನಿವೃತ್ತ ನ್ಯಾಯಾಧೀಶರೊಬ್ಬರ ಹತ್ಯೆಗೆ ಸಂಚು ಮಾಡಿದ್ದಾಗಿ ಬಂಧಿತ ಸೂರ್ಯವಂಶಿ ಮಹಾರಾಷ್ಟ್ರ ಪೊಲೀಸರು ಹಾಗೂ ನರೇಂದ್ರ ದಾಬೋಲ್ಕರ್‌ ಹತ್ಯೆ ತನಿಖೆ ನಡೆಸುತ್ತಿರುವ ಸಿಬಿಐ ಬಳಿ ಹೇಳಿಕೆ ನೀಡಿದ್ದ. ಅಷ್ಟೆ ಅಲ್ಲದೆ ದಾಬೋಲ್ಕರ್ ಹತ್ಯೆ ತನಿಖಾ ತಂಡದಲ್ಲಿ ಇದ್ದ ತನಿಖಾಧಿಕಾರಿಯನ್ನು ಕೊಲ್ಲಲು ಸಹ ಈ ತಂಡ ಯೋಜನೆ ಮಾಡಿತ್ತು ಎಂದು ಸಿಬಿಐ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+