ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿರಸಿ: ಬನವಾಸಿ ಕದಂಬೋತ್ಸವ ನೇರವಾಗಿ ಕಣ್ತುಂಬಿಕೊಳ್ಳಿ

|
Google Oneindia Kannada News

ಶಿರಸಿ, ಫೆ. 8: ಪ್ರಸಿದ್ಧ ಕದಂಬೋತ್ಸವವನ್ನು ಈ ಬಾರಿ ನೇರ ಪ್ರಸಾರದಲ್ಲಿ ಕಣ್ಣು ತುಂಬಿಕೊಳ್ಳಲು ಅವಕಾಶ ಒದಗಿಸಲಾಗಿದೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೇರವಾಗಿ ಕಣ್ಣು ತುಂಬಿಕೊಳ್ಳಬಹುದು.

ಬನವಾಸಿಯ ಮಯೂರ ವರ್ಮ ವೇದಿಕೆಯಲ್ಲಿ ನಡೆಯುವ ನೃತ್ಯ, ಸಂಗೀತ ಕಾರ್ಯಕ್ರಮಗಳನ್ನು ಮನೆಯಲ್ಲೆ ಕುಳಿತು ನೋಡಿ ಆನಂದಿಸಬಹುದು. ಪಂಪ ಪ್ರಶಸ್ತಿ ಸ್ವೀಕಾರಕ್ಕೆ ಪ್ರೊ. ಜಿ.ವೆಂಕಟಸುಬ್ಬಯ್ಯ ಆಗಮಿಸದಿದ್ದರೂ ಪರದೆಯ ಮೇಲೆ ಭಾಷಣ ಮಾಡಿ ಕೊರತೆಯನ್ನು ತುಂಬಿದರು.(ನೇರ ಪ್ರಸಾರ ನೋಡಿ)

ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಸಚಿವ ಆರ್.ವಿ.ದೇಶಪಾಂಡೆ, ಶಾಸಕ ಶಿವರಾಮ್ ಹೆಬ್ಬಾರ್, ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತಿತರರು ಹಾಜರಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನೆಗೆ ಆಗಮಿಸುತ್ತಾರೆ ಎಂಬ ನಿರೀಕ್ಷೆಯನ್ನು ಹುಸಿ ಮಾಡಿದರು. ಸಾಹಿತಿ ನಾ. ಡಿಸೋಜ ಸೇರಿದಂತೆ ಅನೇಕ ಗಣ್ಯರ ಹಾಜರಿ ಕಾರ್ಯಕ್ರಮಕ್ಕೆ ಹೊಸ ಮೆರಗು ತಂದಿತ್ತು.

ಉದ್ಘಾಟನೆ ನೆರವೇರಿಸಿದ ಗಣ್ಯರು

ಉದ್ಘಾಟನೆ ನೆರವೇರಿಸಿದ ಗಣ್ಯರು

ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಮತ್ತು ಪ್ರವಾಸೋದ್ಯಮ ಸಚಿವ ಆರ್.ವಿ.ದೇಶಪಾಂಡೆ ಕದಂಬೋತ್ಸವದ ಉದ್ಘಾಟನೆ ನೆರವೇರಿಸದರು. ಶಾಸಕರಾದ ಶಿವರಾಂ ಹೆಬ್ಬಾರ್, ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತಿತರರು ಹಾಜರಿದ್ದರು.

ಹರಿದ ಸಂಗೀತ ಸುಧೆ

ಹರಿದ ಸಂಗೀತ ಸುಧೆ

ಕದಂಬೋತ್ಸವದ ಪ್ರಯುಕ್ತ ಮಯೂರವರ್ಮ ವೇದಿಕೆಯಲ್ಲಿ ಗಾಯಕಿಯರಿಂದ ಹರಿದ ಸಂಗೀತ ಸುಧೆ ಪ್ರೇಕ್ಷಕರ ಮನ ತಣಿಸಿತು.

ಕಾಡಿದ ಸಿಎಂ ಅನುಪಸ್ಥಿತಿ

ಕಾಡಿದ ಸಿಎಂ ಅನುಪಸ್ಥಿತಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಕದಂಬೋತ್ಸವ ಉದ್ಘಾಟನೆಗೆ ಆಗಮಿಸುತ್ತಾರೆ ಎಂದೇ ಹೇಳಲಾಗಿತ್ತು. ಆದರೆ ನೀತಿ ಆಯೋಗದ ಸಭೆಗೆ ಹಾಜರಾಗಲು ಸಿಎಂ ದೆಹಲಿಗೆ ತೆರಳಿದ ಹಿನ್ನೆಲೆಯಲ್ಲಿ ಸಚಿವರೇ ಕಾರ್ಯಕ್ರಮ ಉದ್ಘಾಟಿಸಿದರು.

ಪರದೆ ಮೇಲೆ ಕಾಣಿಸಿಕೊಂಡ ವೆಂಕಟಸುಬ್ಬಯ್ಯ

ಪರದೆ ಮೇಲೆ ಕಾಣಿಸಿಕೊಂಡ ವೆಂಕಟಸುಬ್ಬಯ್ಯ

ಕೆಲ ಅನಿವಾರ್ಯ ಕಾರಣದಿಂದ ಪಂಪ ಪ್ರಶಸ್ತಿ ಸ್ವೀಕರಿಸಲು ಸಾಧ್ಯವಾಗದ ನಿಘಂಟು ತಜ್ಞ ವೆಂಕಟಸುಬ್ಬಯ್ಯ ಪರದೆಯ ಮೇಲೆ ಕಾಣಿಸಿಕೊಂಡು ಮಾತನಾಡಿದರು.

English summary
Sirsi: Historic Banavasi, the capital of the first Kannada kingdom celabarting two day the Kadambotsava. Number of cultural programmes will be the part of this festival. Government gave the facility for live telecast
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X