ಶಿರಾದಲ್ಲಿ ವಿಜಯೇಂದ್ರ ತಂತ್ರ; ಗೌಡರ ಕೈ ಸೇರಿದ ವರದಿ
ಬೆಂಗಳೂರು, ಅಕ್ಟೋಬರ್ 28 : "ಶಿರಾದಲ್ಲಿ ಬಿಜೆಪಿ ಉಪಾಧ್ಯಕ್ಷ ಬಿ. ವೈ. ವಿಜಯೇಂದ್ರ ಅವರ ತಂತ್ರ ಏನೆಂಬುದು ಗೊತ್ತಾಗಿದೆ. ಅವರ ತಂತ್ರದ ವರದಿ ನನ್ನ ಬಳಿ ಇದೆ" ಎಂದು ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡ ಹೇಳಿದರು.
ಬುಧವಾರ ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ದೇವೇಗೌಡರು, "ಪೊಲೀಸರ ಮೂಲಕ ಹಣ ಹಂಚುವ ಕೆಲಸವನ್ನು ಬಿ. ವೈ. ವಿಜಯೇಂದ್ರ ಮಾಡುತ್ತಿದ್ದಾರೆ" ಎಂದು ಆರೋಪಿಸಿದರು.
2 ಶಿರಾ ಉಪ ಚುನಾವಣೆ ಚಿತ್ರಣ ಬದಲಿಸಿದ ಬಿ. ವೈ. ವಿಜಯೇಂದ್ರ! "ಶಿರಾ ಚುನಾವಣೆಗೆ ಬಿಜೆಪಿ ಯಾವ ತಂತ್ರವನ್ನು ಅನುಸರಿಸುತ್ತಿದೆ. ಅದರಲ್ಲಿ ವಿಜಯೇಂದ್ರ ಪಾತ್ರ ಏನು ಎಂಬ ವರದಿ ನನ್ನ ಬಳಿ ಇದೆ. ಪೊಲೀಸರ ಮೂಲಕ ಹಣ ಹಂಚಲಾಗುತ್ತಿದೆ. ಈ ಬಗ್ಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ" ಎಂದು ದೇವೇಗೌಡರು ತಿಳಿಸಿದರು.

"ಶಿರಾದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಮತ್ತೊಂದು ಸುತ್ತಿನ ಪ್ರಚಾರಕ್ಕಾಗಿ ಕ್ಷೇತ್ರಕ್ಕೆ ಹೋಗುತ್ತೇನೆ. ಪ್ರಾದೇಶಿಕ ಪಕ್ಷವನ್ನು ಗಟ್ಟಿಯಾಗಿ ಉಳಿಸಲು ಕೊನೆ ತನಕ ಹೋರಾಟ ಮಾಡುತ್ತೇನೆ" ಎಂದು ದೇವೇಗೌಡರು ಹೇಳಿದರು.
"ರಾಜ್ಯದಲ್ಲಿ ಜೆಡಿಎಸ್ ಅಸ್ತಿತ್ವದಲ್ಲಿ ಇರುವುದಿಲ್ಲ ಎಂದು ಕೆಲವರು ಹೇಳುತ್ತಾರೆ. ಇಂತಹ ಹೇಳಿಕೆ ನೀಡುವವರು ಪಕ್ಷದಲ್ಲಿಯೇ ಇದ್ದು ಅಧಿಕಾರ ಅನುಭವಿಸಿ ಹೋಗಿದ್ದಾರೆ. ಅವರ ಹೇಳಿಕೆ ಕೇಳಿ ಬೇಸರವಾಯಿತು" ಎಂದರು.
ನವೆಂಬರ್ 3ರಂದು ಶಿರಾ ಕ್ಷೇತ್ರದ ಉಪ ಚುನಾವಣೆ ನಡೆಯಲಿದೆ. ಬಿಜೆಪಿಯಿಂದ ಡಾ. ರಾಜೇಶ್ ಗೌಡ, ಕಾಂಗ್ರೆಸ್‌ನಿಂದ ಟಿ. ಬಿ. ಜಯಚಂದ್ರ ಮತ್ತು ಜೆಡಿಎಸ್‌ನಿಂದ ಅಮ್ಮಾಜಮ್ಮ ಕಣದಲ್ಲಿದ್ದಾರೆ. ನವೆಂಬರ್ 10ರಂದು ಫಲಿತಾಂಶ ಪ್ರಕಟವಾಗಲಿದೆ.












Click it and Unblock the Notifications