Dr Rajkumar: ನಾನೂ ಡಾ.ರಾಜ್‌ಕುಮಾರ್‌ ಅಭಿಮಾನಿ, ಕ್ಷಮಿಸಿ ಎಂದ ಗಾಯಕ!

Dr Rajkumar: ಡಾ.ರಾಜ್‌ಕುಮಾರ್‌ ಅವರ ಗಾಯನದ ಬಗ್ಗೆ ವ್ಯಂಗ್ಯವಾಡಿದ ಗಾಯಕ ಸಂಜಯ್‌ ನಾಗ್‌ ಕನ್ನಡಿಗರ ಆಕ್ರೋಶಕ್ಕೆ ಮಣಿದಿದ್ದು ಕೊನೆಗೂ ಕ್ಷಮೆಯಾಚಿಸಿದ್ದಾರೆ. ಆದರೆ, ಸಂಜಯ್‌ ನಾಗ್‌ ಅವರ ಈ ಟ್ವೀಟ್‌ಗೂ ಕನ್ನಡಿಗರು ಆಕ್ರೋಶ ಹೊರ ಹಾಕಿದ್ದಾರೆ. ಡಾ. ರಾಜ್‌ಕುಮಾರ್‌ ಅವರು ಅದ್ಭುತ ನಟ ಇರಬಹುದು. ಆದರೆ, ಭಯಾನಕ ಗಾಯಕ ಎಂದು ಸಂಜಯ್‌ ನಾಗ್‌ ಹೇಳಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಈ ವಿಚಾರವಾಗಿ ಸಂಜಯ್‌ನಾಗ್‌ ಮತ್ತೊಂದು ಟ್ವೀಟ್‌ ಮಾಡಿದ್ದಾನೆ. ಇದಕ್ಕೆ ಕನ್ನಡಿಗರ ರಿಯಾಕ್ಷನ್‌ ಯಾವ ರೀತಿ ಇದೆ ಎನ್ನುವ ವಿವರ ಇಲ್ಲಿದೆ.

ಡಾ.ರಾಜ್‌ಕುಮಾರ್‌ ಅವರ ಬಗ್ಗೆ ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಸಂಜಯ್‌ ನಾಗ್‌ ಅವರ ಮಾಡಿದ್ದ ಒಂದು ಸಾಲಿನ ಟ್ವೀಟ್‌ ಭಾರೀ ಆಕ್ರೋಕ್ಕೆ ಕಾರಣವಾಗಿತ್ತು. ಈ ಟ್ವೀಟ್‌ ವಿರುದ್ಧ ಕನ್ನಡಿಗರು ಆಕ್ರೋಶ ಹೊರ ಹಾಕಿದ್ದರು. ಇದೀಗ ಎರಡು ದಿನಗಳ ನಂತರ ಸಂಜಯ್‌ ನಾಗ್‌ ಕ್ಷಮೆ ಕೇಳಿದ್ದಾನೆ. ಇದಕ್ಕೂ ಸಹ ಕನ್ನಡಿಗರು ಕ್ಲಾಸ್‌ ತೆಗೆದುಕೊಂಡಿದ್ದಾರೆ.

Singer Sanjay Nag Says Sorry and Said I m Also Fan Dr Rajkumar

ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಸಂಜಯ್‌ ನಾಗ್‌, ಡಾ. ರಾಜ್‌ಕುಮಾರ್ ಅವರ ಕುರಿತು ನಾನು ಬರೆದ ಮಾತುಗಳಿಗೆ ಮನಃಪೂರ್ವಕ ಕ್ಷಮೆ ಯಾಚಿಸುತ್ತೇನೆ. ನಾನು ಚಿಕ್ಕಂದಿನಿಂದ ಅಣ್ಣಾವ್ರ ಅಭಿಮಾನಿ ಹಾಗೂ ಅಣ್ಣಾವ್ರ ಬಗ್ಗೆ ಅಪಾರವಾದ ಗೌರವ ಇದೆ. ನನ್ನ ಉದ್ದೇಶ ಯಾರಿಗೂ ನೋವುಂಟು ಮಾಡುವುದಲ್ಲ. ಅಚಾತುರ್ಯವಾಗಿ ಹೇಳಿದ ಮಾತಿಗೆ ಅಣ್ಣಾವ್ರ ಪ್ರತಿಯೊಬ್ಬ ಅಭಿಮಾನಿ ದೇವ್ರಿಗೂ ಮತ್ತು ದೊಡ್ಮನೆಯವರಿಗೂ ವೈಯಕ್ತಿಕ ಕ್ಷಮೆ ಯಾಚಿಸುತ್ತೇನೆ. 人人人 ಇಂತಿ ಸಂಜಯ್ ನಾಗ್ ಹೇಳಿದ್ದಾರೆ.

ಟ್ವೀಟ್‌ ಡಿಲೀಟ್‌: ಇನ್ನು ಕನ್ನಡಿಗರಿಂದ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಗಾಯಕ ಸಂಜಯ್‌ನಾಗ್‌ ಡಾ.ರಾಜ್‌ಕುಮಾರ್‌ ಅವರ ಬಗ್ಗೆ ಹೇಳಿದ್ದ ಟ್ವೀಟ್‌ ಡಿಲೀಟ್‌ ಮಾಡಿದ್ದಾನೆ.

ಕನ್ನಡಿಗರಿಂದ ಆಕ್ರೋಶ: ಡಾ. ರಾಜ್‌ಕುಮಾರ್‌ ಅವರ ಬಗ್ಗೆ ವ್ಯಂಗ್ಯವಾಡಿ ಇದೀಗ ಅವರ ಅಭಿಮಾನಿ ಅಂತ ಹೇಳುತ್ತಿರುವ ಗಾಯಕ ಸಂಜಯ್‌ ನಾಗ್‌ ನಡೆಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ನೂತನ್‌ ಎನ್ನುವವರು ಇದೊಂದು ಬಿಟ್ಟಿ ಶೋಕಿ ಆಗ್ಬಿಟ್ಟಿದೆ. ನಿಮ್ಮಂತ ಕೆಲಸವಿಲ್ಲದ ಅಬ್ಬೇಪಾರಿಗಳಿಗೆ.

ಸುಮ್ನೆ ಏನೋ ಒಂದ್ controversial ಬರಿಯೋದು, ಎಲ್ಲರ ಹತ್ರ ಉಗ್ಸ್ಕೊಂಡ್ ಆದ್ಮೇಲೆ ದೊಡ್ ಸೆಲೆಬ್ರಿಟಿ ಥರ ಪೋಸ್ಟ್ ಹಾಕಿ ಕ್ಷಮೆ ಕೇಳೋದು. ಇದರ ಮದ್ಯ ಪಡ್ಕೊಳ್ಳೋದ್ ಅಂತೂ ಏನು ಇಲ್ಲ ಮಣ್ಣು. ಸ್ವಂತ ಕಲೆ ಇಂದ ಹೆಸರು ಪಡ್ಕೋಳಕ್ಕೆ ಪ್ರಯತ್ನ ಮಾಡೋದು ಲೇಸು ಎಂದು ಹೇಳಿದ್ದಾರೆ.

ಶಂಕರ್ ಮಂದಗೆರೆ ಎನ್ನುವವರು, ಶಾಸ್ತ್ರೀಯ ಸಂಗೀತದ ಶಾಸ್ತ್ರೋಕ್ತ ಪಾಠ, ಕಲಿಕೆ ಇಲ್ಲದಿದ್ದರೂ, ಅಣ್ಣಾವ್ರ ಅಪಾರ ಪರಿಶ್ರಮ, ಕೌಶಲ್ಯ, ಆಸಕ್ತಿ ಹಾಗೂ ಸರಸ್ವತಿಯ ಕೃಪೆಯಿಂದ ಹಾಡುಗಾರಿಕೆಯಲ್ಲಿ ಒಳ್ಳೆಯ ಮಟ್ಟ ತಲುಪಿದ್ದರು. ಇಷ್ಟವಿಲ್ಲದಿದ್ದರೆ ಕೇಳಬೇಡಿ.

ಹಾಗೆಂದು, ಅವರ ಹಾಡುಗಾರಿಕೆ ಸರಿಯಿಲ್ಲ, ರಾಗ ತಾಳ ಲಯ ಪಾಲಿಸೋದಿಲ್ಲ ಎಂದೆಲ್ಲಾ ಟೀಕೆ ಮಾಡುವುದು ತೆರವಲ್ಲ. ಏನೂ ಇಲ್ಲದೇ "ನಾದಮಯ" ಹಾಡಿಗೆ ರಾಷ್ಟ್ರೀಯ ಪುರಸ್ಕಾರದಿಂದ ಸನ್ಮಾನಿತರಾದರೇ? ಅವರ 10% ಅಷ್ಟೂ ನೀವು ತಲುಪಿದರೆ ಅದು ದೊಡ್ಡ ಸಾಧನೆಯಾಗುತ್ತದೆ. ದೊಡ್ಡವರ, ಕೋಟ್ಯಂತರ ಅಭಿಮಾನಿಗಳ ಪ್ರೀತಿಗೆ ಪಾತ್ರರಾಗಿರುವವರ ಬಗ್ಗೆ, ಅವರ ಸಾಧನೆಗಳ ಬಗ್ಗೆ ಹಗುರವಾಗಿ ಮಾತನಾಡುವುದು ತಪ್ಪು. ತಿಳಿದುಕೊಂಡು ತಿದ್ದಿಕೊಳ್ಳಿ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+