• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪರಿಣಾಮಕಾರಿ ಆಡಳಿತಕ್ಕೆ ಕ್ರಮ: ರಾಜ್ಯ ಸರ್ಕಾರ- ಸಿಇಜಿಐಎಸ್ ನಡುವೆ ಒಪ್ಪಂದ

|
Google Oneindia Kannada News

ಬೆಂಗಳೂರು,ನವೆಂಬರ್ 15: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲಿ ಇಂದು ಕರ್ನಾಟಕ ಸರ್ಕಾರವು (GOK) ಭಾರತೀಯ ರಾಜ್ಯಗಳ ಪರಿಣಾಮಕಾರಿ ಆಡಳಿತ ಕೇಂದ್ರದೊಂದಿಗೆ (CEGIS) ಐದು ವರ್ಷಗಳ ಒಡಂಬಡಿಕೆ (MOU) ಮಾಡಿಕೊಂಡಿತು.

ಈ ಒಪ್ಪಂದದನ್ವಯ ಸಿಇಜಿಐಎಸ್ ಸಂಸ್ಥೆಯು ರಾಜ್ಯದ ತೆರಿಗೆ ಸಂಗ್ರಹ ಸುಧಾರಣೆ, ತೆರಿಗೆ ಇಲಾಖೆಯ ಸಾಮರ್ಥ್ಯ ಮ್ಯಾಪಿಂಗ್ ಹಾಗೂ ಅಧಿಕಾರಿಗಳ ತರಬೇತಿ, ಶಿಕ್ಷಣ, ಆರೋಗ್ಯ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ದತ್ತಾಂಶ ಗುಣಮಟ್ಟ ಹಾಗೂ ದತ್ತಾಂಶ ಬಳಕೆಯ ಸುಧಾರಣೆಗೆ ತಾಂತ್ರಿಕವಾಗಿ ಹಾಗೂ ವಿಶ್ಲೇಷಣಾತ್ಮಕವಾಗಿ ಬೆಂಬಲ ನೀಡಲಿದೆ. ಇದಲ್ಲದೆ, ಹಣಕಾಸು ಇಲಾಖೆ, ಶಿಕ್ಷಣ, ಸಮಾಜ ಕಲ್ಯಾಣ ಮತ್ತು ಇತರ ಇಲಾಖೆಗಳೊಂದಿಗೆ ಪರಸ್ಪರ ಪೂರಕವಾದ ಅಂಶಗಳನ್ನು ಗುರುತಿಸಿ, ತಾಂತ್ರಿಕ ಮತ್ತು ವಿಶ್ಲೇಷಣಾತ್ಮಕ ಬೆಂಬಲ ನೀಡಲಿದೆ.

ಗುಜರಾತ್‌ ಎಎಪಿ ಮುಖ್ಯಮಂತ್ರಿ ಅಭ್ಯರ್ಥಿ ಇಸುದನ್ ಗಧ್ವಿ ಬಗ್ಗೆ ತಿಳಿಯಬೇಕಿರುವ ಅಂಶಗಳು ಗುಜರಾತ್‌ ಎಎಪಿ ಮುಖ್ಯಮಂತ್ರಿ ಅಭ್ಯರ್ಥಿ ಇಸುದನ್ ಗಧ್ವಿ ಬಗ್ಗೆ ತಿಳಿಯಬೇಕಿರುವ ಅಂಶಗಳು

ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸಂಕಲ್ಪಕ್ಕೆ ಪೂರಕವಾಗಿ 2025 ರ ವೇಳೆಗೆ ಕರ್ನಾಟಕವನ್ನು 1 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡಲು ಮುಖ್ಯಮಂತ್ರಿಗಳು ಕ್ರಿಯಾ ಯೋಜನೆಯನ್ನು ರೂಪಿಸಿದ್ದಾರೆ. ಅದರಂತೆ, ಸಿಇಜಿಐಎಸ್ ಕೆಲಸ ಆಡಳಿತಾತ್ಮಕ ದತ್ತಾಂಶದ ಗುಣಮಟ್ಟವನ್ನು ಸುಧಾರಿಸುವುದು, ಪರಿಣಾಮಕಾರಿ ನಿರ್ಧಾರ ಕೈಗೊಳ್ಳಲು ತಂತ್ರಜ್ಞಾನ ಮತ್ತು ದತ್ತಾಂಶ ಬಳಕೆಯ ಮೂಲಕ ಫಲಿತಾಂಶಗಳ ಉತ್ತಮ ಮಾಪನಕ್ಕೆ ಕೊಡುಗೆ ನೀಡುತ್ತದೆ.

ಹೆಚ್ಚುವರಿಯಾಗಿ, CEGIS ನಾಗರಿಕರ ಬದಲಾಗುತ್ತಿರುವ ಅಗತ್ಯತೆಗಳು ಮತ್ತು ಆಕಾಂಕ್ಷೆಗಳನ್ನು ಪರಿಹರಿಸಲು ಸರ್ಕಾರಿ ಅಧಿಕಾರಿಗಳ ನಿರಂತರ ಮತ್ತು ಉದ್ದೇಶಿತ ಸಾಮರ್ಥ್ಯ ಅಭಿವೃದ್ದಿ ಮತ್ತು ಕಲಿಕೆಗಾಗಿ ವಿವಿಧ ಇಲಾಖೆಗಳು ಮತ್ತು ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತದೆ. CEGIS ಸಾಮರ್ಥ್ಯ ನಿರ್ಮಾಣದ ರಾಷ್ಟ್ರೀಯ ಕಾರ್ಯಕ್ರಮದ ಭಾಗವಾಗಿಯೂ ಕಾರ್ಯನಿರ್ವಹಿಸುತ್ತಿದೆ.

ಕರ್ನಾಟಕ ಸರ್ಕಾರ ಮತ್ತು CEGIS ನಡುವಿನ ಈ ಪಾಲುದಾರಿಕೆಯು ಸರ್ಕಾರಿ ಸವಲತ್ತುಗಳ ಉತ್ತಮ ವಿತರಣೆಯನ್ನು ಒಳಗೊಂಡಂತೆ ಹೆಚ್ಚು ಪರಿಣಾಮಕಾರಿಯಾದ ಉತ್ತಮ ಆಡಳಿತವನ್ನು ಖಚಿತಪಡಿಸಿಕೊಳ್ಳಲು ಇರುವ ಅನೇಕ ರೀತಿಯ ಆಡಳಿತಾತ್ಮಕ ದತ್ತಾಂಶವನ್ನು ಸ್ಪಷ್ಟಪಡಿಸಲು ಮತ್ತು ಒಟ್ಟುಗೂಡಿಸಲು ಸಹಾಯ ಮಾಡುತ್ತದೆ. ಕರ್ನಾಟಕ ಸರ್ಕಾರವು ಆಡಳಿತಾತ್ಮಕ ಸುಧಾರಣೆಗಳಿಗೆ ಸಂಬಂಧಿಸಿದಂತೆ ಹಲವಾರು ಕ್ರಮಗಳನ್ನು ಕೈಗೊಂಡಿದ್ದು ಈ ಉದ್ದೇಶಗಳಿಗಾಗಿ ಭಾರತ ಸರ್ಕಾರದೊಂದಿಗೆ ಸಾಮಥ್ರ್ಯ ಅಭಿವೃದ್ದಿ ಆಯೋಗದೊಂದಿಗೆ ತೊಡಗಿಸಿಕೊಂಡಿದೆ.

2019ರಲ್ಲಿ ಸ್ಥಾಪನೆಯಾದ ಸಿಇಜಿಐಎಸ್, ಭಾರತೀಯ ರಾಜ್ಯ ಸರ್ಕಾರಗಳ ಕಾರ್ಯನಿರ್ವಹಣೆಯಲ್ಲಿ ಪರಿವರ್ತನಾತ್ಮಕ ಸುಧಾರಣೆಯನ್ನು ಸಕ್ರಿಯಗೊಳಿಸುವ ಗುರಿಯನ್ನು ಹೊಂದಿದೆ. ಅತ್ಯಾಧುನಿಕ ಸಂಶೋಧನೆ ಮತ್ತು ಪುರಾವೆಗಳ ಜೊತೆಗೆ ಕಾರ್ಯಗತಗೊಳಿಸಬಹುದಾದ ವಿಚಾರಗಳ ಕಡೆಗೆ ಪ್ರಾಯೋಗಿಕ ದೃಷ್ಟಿಕೋನದಿಂದ ತಿಳಿಸಲಾಗಿದೆ. ಸಿಇಜಿಐಎಸ್ ಆಡಳಿತ ಮತ್ತು ವೆಚ್ಚದ ಸುಧಾರಣೆಗಳಿಗಾಗಿ ವಿಶ್ಲೇಷಣಾತ್ಮಕ ಮಾರ್ಗಸೂಚಿಯನ್ನು ಸಿದ್ದಪಡಿಸುವಲ್ಲಿ ಭಾರತೀಯ ರಾಜ್ಯಗಳೊಂದಿಗೆ ಕೆಲಸ ಮಾಡುತ್ತದೆ. ಮತ್ತು ಈ ದೃಷ್ಟಿಕೋನವನ್ನು ತಲುಪಿಸಲು ಕಾರ್ಯತಂತ್ರದ ಅನುಷ್ಠಾನದ ಬೆಂಬಲವನ್ನು ಒದಗಿಸುತ್ತದೆ.

Signing of between CEGIS and Government of Karnataka

ಸಿಇಜಿಐಎಸ್ ಫಲಿತಾಂಶ ಮಾಪನ, ಸಿಬ್ಬಂದಿ ನಿರ್ವಹಣೆ, ಕಾರ್ಯತಂತ್ರದ ಸಾರ್ವಜನಿಕ ಹಣಕಾಸು ಮತ್ತು ಮಾರುಕಟ್ಟೆಗಳೊಂದಿಗೆ ಕೆಲಸ ಮಾಡುವ ರಾಜ್ಯದ ಸಾಮಥ್ರ್ಯವನ್ನು ಸುಧಾರಿಸುವಲ್ಲಿ ಸರ್ಕಾರಿ ಇಲಾಖೆಗಳು ಮತ್ತು ಅವರ ಏಜೆನ್ಸಿಗಳಿಗೆ ತಾಂತ್ರಿಕ ಬೆಂಬಲವನ್ನು ಒದಗಿಸುತ್ತದೆ. ಪ್ರಸ್ತುತ, ಸಿಇಜಿಐಎಸ್ ತೆಲಂಗಾಣ, ದೆಹಲಿಯ NCT ಬೋಡೋಲ್ಯಾಂಡ್ ಪ್ರಾದೇಶಿಕ ಭೂ-ಪ್ರದೇಶ, ಅಸ್ಸಾಂ ಮತ್ತು ತಮಿಳುನಾಡು ಸರ್ಕಾರಗಳೊಂದಿಗೆ ತೊಡಗಿಸಿಕೊಂಡಿದೆ.

ಹಣಕಾಸು ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐಎಸ್ ಎನ್ ಪ್ರಸಾದ್, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಆಡಳಿತ ಸುಧಾರಣೆ) ಪ್ರಧಾನ ಕಾರ್ಯದರ್ಶಿ ಡಾ.ಶ್ರೀವತ್ಸ ಕೃಷ್ಣ, ಸಿಇಜಿಐಎಸ್ ಸಹ ಸಂಸ್ಥಾಪಕ ಆಶಿಶ್ ಧವನ್, ಸಿಇಜಿಐಎಸ್ ನ ಸಹ ಸಂಸ್ಥಾಪಕ ಮತ್ತು ವ್ಶೆಜ್ಞಾನಿಕ ನಿರ್ದೇಶಕ ಪ್ರೊಫೆಸರ್ ಕಾರ್ತಿಕ್ ಮುರಳೀಧರನ್ ಮತ್ತು ಸಿಇಜಿಐಎಸ್ ಅಧ್ಯಕ್ಷ ಡಾ.ವಿಜಯ್ ಪಿಂಗಳೆ ಉಪಸ್ಥಿತರಿದ್ದರು.

English summary
A 5-year agreement was signed between the Center for Effective Governance of Indian States and the Government of Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X