ವಿದ್ಯುತ್ ಉಳಿತಾಯ : 2ನೇ ಸ್ಥಾನದಲ್ಲಿ ಕರ್ನಾಟಕ

Posted By:
Subscribe to Oneindia Kannada

ಬೆಂಗಳೂರು, ಜುಲೈ 25 : ಕೇಂದ್ರ ಸರಕಾರದೊಡನೆ ಕರ್ನಾಟಕವೂ ಸೇರಿದಂತೆ 27 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಉದಯ್ (Ujwal DISCOM Assurance Yojana) ಯೋಜನೆಗೆ ಒಪ್ಪಂದ ಮಾಡಿಕೊಂಡ ಮೇಲೆ ವಿದ್ಯುತ್ ತಯಾರಿಕೆಯಲ್ಲಿ ಆಗುತ್ತಿದ್ದ ನಷ್ಟವನ್ನು ಗಣನೀಯವಾಗಿ ತಗ್ಗಿಸಿಕೊಂಡಿವೆ.

ವಿದ್ಯುತ್ ನಿಂದ ಬೆಳಗುತ್ತಿದೆಯೇ ಗ್ರಾಮೀಣ ಭಾರತ?

ಭಾರತದ ವಿದ್ಯುತ್ ಸರಬರಾಜು ಕಂಪನಿ(DISCOM)ಗಳಿಗೆ ಹಣಕಾಸು ಸಹಾಯ ಒದಗಿಸಿ, ಅವುಗಳು ಎದುರಿಸುತ್ತಿರುವ ಹಣಕಾಸಿನ ಸಮಸ್ಯೆಗಳಿಗೆ ಪರ್ಮನಂಟಾಗಿ ಪರಿಹಾರ ದೊರಕಿಸಿಕೊಡುವ ಉದ್ದೇಶದಿಂದ ಉದಯ್ ಯೋಜನೆಯನ್ನು ಕೇಂದ್ರ ಸರಕಾರ ಆರಂಭಿಸಿದೆ. ಕರ್ನಾಟಕವೂ 2016ರ ಜೂನ್ ನಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಿದೆ.

Significant Reduction in Annual Losses of UDAY States

ಈ ಯೋಜನೆಯಡಿಯಲ್ಲಿ ಕರ್ನಾಟಕದ ಬೆಸ್ಕಾಂ (ಬೆಂಗಳೂರು), ಹೆಸ್ಕಾಂ (ಹುಬ್ಬಳ್ಳಿ, ಗೆಸ್ಕಾಂ (ಕಲಬುರಗಿ), ಮೆಸ್ಕಾಂ (ಮಂಗಳೂರು) ಮತ್ತು ಎಸ್ಇಎಸ್‌ಸಿ (ಚಾಮುಂಡೇಶ್ವರಿ) ಕಂಪನಿಗಳು ಬರುತ್ತಿವೆ. ಈ ಎಲ್ಲ ಕಂಪನಿಗಳು ಕಳೆದೊಂದು ವರ್ಷದಲ್ಲಿ ವಿದ್ಯುತ್ ಪೂರೈಕೆ, ಉಳಿತಾಯ, ಸಂಪರ್ಕದಲ್ಲಿ ಸಾಕಷ್ಟು ಪ್ರಗತಿ ಸಾಧಿಸಿವೆ ಮತ್ತು ಉಳಿತಾಯವನ್ನೂ ಮಾಡಿವೆ.

ಬೆಸ್ಕಾಂ ಸಹಾಯವಾಣಿಯ ಮತ್ತಷ್ಟು ಸಂಖ್ಯೆಗಳು ಪ್ರಕಟ

Significant Reduction in Annual Losses of UDAY States

ಹಾಗೆಯೆ, ಉತ್ತರಪ್ರದೇಶ, ರಾಜಸ್ತಾನ, ಮಧ್ಯಪ್ರದೇಶ, ತಮಿಳುನಾಡು, ಜಮ್ಮು ಮತ್ತು ಕಾಶ್ಮೀರ, ಮಹಾರಾಷ್ಟ್ರ, ಜಾರ್ಖಂಡ್, ಬಿಹಾರ, ಹರ್ಯಾಣ ಮುಂತಾದ ರಾಜ್ಯಗಳು ಕೂಡ ವಾರ್ಷಿಕ ನಷ್ಟವನ್ನು ಈ ಉದಯ್ ಯೋಜನೆಯಡಿ ಸಾಕಷ್ಟು ತಗ್ಗಿಸಿಕೊಂಡಿವೆ. ಹರ್ಯಾಣ ರಾಜ್ಯ ಶೇ.90ರಷ್ಟು ನಷ್ಟವನ್ನು ತಗ್ಗಿಸಿಕೊಂಡು ಅದ್ಭುತ ಪ್ರಗತಿಯನ್ನು ಕಂಡಿದೆ.

348 ಹುದ್ದೆಗಳಿಗೆ ಕೆಪಿಸಿಎಲ್ ಅರ್ಜಿ ಆಹ್ವಾನ

Significant Reduction in Annual Losses of UDAY States

ಉದಯ್ ಯೋಜನೆಯಡಿ ಉತ್ತಮ ಪ್ರಗತಿ ಸಾಧಿಸಿರುವ ರಾಜ್ಯಗಳಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಮೊದಲನೇ ಸ್ಥಾನ ಗುಜರಾತ್ ಗೆ ಸಂದಿದೆ. ನಂತರ ಮಹಾರಾಷ್ಟ್ರ, ಪಾಂಡಿಚೇರಿ, ತೆಲಂಗಾಣ, ಹಿಮಾಚಲ ಪ್ರದೇಶ ಮತ್ತು ತ್ರಿಪಾರಾ ಪಡೆದುಕೊಂಡಿವೆ. ತಮಿಳುನಾಡು ಕಡೆಯ ಸ್ಥಾನದಲ್ಲಿದೆ.

H D Kumaraswamy Questions D K Shivakumar | Oneindia Kannada

ಕೇಂದ್ರ ಇಂಧನ ಸಚಿವ ಪಿಯೂಶ್ ಗೋಯೆಲ್ ಅವರ ನೇತೃತ್ವದಲ್ಲಿ ಇಂಧನ ಸಚಿವಾಲಯ ಕೇಂದ್ರ ಸರಕಾರದ ಅನುಮತಿಯೊಂದಿಗೆ 2015ರ ನವೆಂಬರ್ 5ರಂದು 'ಉದಯ್' ಎಂಬ ಮಹತ್ವಾಕಾಂಕ್ಷಿ ಯೋಜನೆಯನ್ನು ಆರಂಭಿಸಿತು. ಇದರಡಿಯಲ್ಲಿ ಒಪ್ಪಂದ ಮಾಡಿಕೊಂಡಿರುವ ರಾಜ್ಯಗಳಿಗೆ ಹಣಕಾಸು ಸಹಾಯ, ನಿರ್ವಹಣೆ, ವಿದ್ಯುತ್ ಉಳಿತಾಯ ಮುಂತಾದ ಸೌಲಭ್ಯಗಳು ಸಿಗುತ್ತಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Under UDAY, high loss making States like UP, Rajasthan & TN have decreased their losses by 2/3 to 3/4 while Haryana has reduced losses by 90%. Overall DISCOM losses reduced by 41% under this govt. Karnataka is ranked 2nd in performance ranking after Gujarat.
Please Wait while comments are loading...