ಸುಳ್ಳಾಯಿತು ಸಿದ್ದರಾಮಯ್ಯ ನುಡಿದ ಭವಿಷ್ಯ

Recommended Video

      ICC World Cup 2019: ಸಿದ್ದರಾಮಯ್ಯ ನುಡಿದಿದ್ದ ಭವಿಷ್ಯ ಸುಳ್ಳಾಯಿತು

      ಬೆಂಗಳೂರು, ಜುಲೈ 10: ಸಿದ್ದರಾಮಯ್ಯ ಅವರು ನುಡಿದಿದ್ದ ಭವಿಷ್ಯವೊಂದು ಸುಳ್ಳಾಗಿದೆ. ಆದರೆ ಇದು ರಾಜಕೀಯ ವಿಷಯವಾಗಿ ನುಡಿದಿದ್ದ ಭವಿಷ್ಯವಲ್ಲ, ಬದಲಿಗೆ ಕ್ರಿಕೆಟ್ ವಿಶ್ವಕಪ್‌ ಬಗ್ಗೆ ನುಡಿದಿದ್ದ ಭವಿಷ್ಯ.

      ಭಾರತದ ವಿಶ್ವಕಪ್‌ ಕನಸು ಭಗ್ನ, ಫೈನಲ್‌ಗೆ ನ್ಯೂಜಿಲೆಂಡ್‌

      ಕೆಲವು ದಿನಗಳ ಹಿಂದೆಯಷ್ಟೆ ಸಿದ್ದರಾಮಯ್ಯ ಅವರು 'ಭಾರತ ಕ್ರಿಕೆಟ್ ತಂಡ ವಿಶ್ವಕಪ್ ಗೆದ್ದೇ ಗೆಲ್ಲುತ್ತದೆ' ಎಂದು ಭವಿಷ್ಯ ನುಡಿದಿದ್ದರು, ಆದರೆ ಭಾರತವು ಇಂದು ನ್ಯೂಜಿಲೆಂಡ್ ವಿರುದ್ಧ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಸೋಲುಂಡು, ವಿಶ್ವಕಪ್ ಗೆಲ್ಲುವ ಕನಸನ್ನು ಕೈಬಿಟ್ಟಿದೆ.

      ಜುಲೈ 5 ರಂದು ಮಾಧ್ಯಮಗಳೊಂದಿಗೆ ಮಾತನಾಡಿದ್ದ ಸಿದ್ದರಾಮಯ್ಯ, ಆಸ್ಟ್ರೇಲಿಯಾ ತಂಡಕ್ಕಿಂತ ಭಾರತ ಬಲಿಷ್ಠವಾಗಿದೆ. ನಾನು ಹಾಕಿರುವ ಲೆಕ್ಕಾಚಾರದ ಪ್ರಕಾರ ಭಾರತ ವಿಶ್ವಕಪ್ ಗೆಲ್ಲಲಿದೆ' ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭವಿಷ್ಯ ನುಡಿದಿದ್ದರು, ಆದರೆ ಅವರ ಭವಿಷ್ಯ ಸುಳ್ಳಾಗಿದೆ.

      Siddaramaiahs prediction about world cup failed

      ಸಿದ್ದರಾಮಯ್ಯ ಅವರ ಭವಿಷ್ಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಜೋಕುಗಳು ಹರಿದಾಡುತ್ತಿದ್ದು, ಕುಮಾರಸ್ವಾಮಿ ಅವರಪ್ಪನಾಣೆ ಸಿಎಂ ಆಗಲ್ಲ ಎಂದಿದ್ದರು, ಆದರೆ ಕುಮಾರಸ್ವಾಮಿ ಸಿಎಂ ಆದರು, ಮೋದಿ ಪ್ರಧಾನಿ ಆಗಲ್ಲ ಎಂದಿದ್ದರು, ಮೋದಿ ಪ್ರಧಾನಿ ಆದರು, ಭಾರತ ವಿಶ್ವಕಪ್ ಗೆಲ್ಲುತ್ತೆ ಎಂದರು ಆದರೆ ವಿಶ್ವಕಪ್ ಗೆಲ್ಲಲಿಲ್ಲ, ಸಿದ್ದರಾಮಯ್ಯ ಹೇಳಿದ್ದು ಯಾವೊಂದೂ ಆಗುವುದಿಲ್ಲ ಎಂದು ಹಾಸ್ಯ ಮಾಡುತ್ತಿದ್ದಾರೆ.

      ಮೈತ್ರಿ ಸರ್ಕಾರ ಐದು ವರ್ಷ ಆಳ್ವಿಕೆ ನಡೆಸುತ್ತದೆ ಎಂದೂ ಸಹ ಸಿದ್ದರಾಮಯ್ಯ ಅವರು ಭವಿಷ್ಯ ನುಡಿದಿದ್ದರು, ಆದರೆ ಈಗ ಸರ್ಕಾರಕ್ಕೆ ಎದುರಾಗಿರುವ ಸಂಕಟ ನೋಡಿದರೆ ಅದೂ ಸಾಧ್ಯವಾಗದ ಪರಿಸ್ಥಿತಿ ಇದೆ

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+