ಕೋಡಿಮಠದ ಶ್ರೀಗಳನ್ನ ಭೇಟಿ ಮಾಡಿದ ಸಿದ್ದರಾಮಯ್ಯ! ಸಿದ್ದುಗೆ ಶ್ರೀಗಳು ಹೇಳಿದ್ದೇನು?

ಭವಿಷ್ಯ ಹಾಗೂ ಜ್ಯೋತಿಷ್ಯದ ಮೇಲೆ ಒಲವಿಲ್ಲದ ಸಿದ್ದರಾಮಯ್ಯ ಚುನಾವಣೆ ಸಂದರ್ಭದಲ್ಲಿ ಕೋಡಿಮಠಕ್ಕೆ ಭೇಟಿ ನೀಡಿರುವುದು ಅಚ್ಚರಿಗೆ ಕಾರಣವಾಗಿದೆ.

ಹಾಸನ,ಮಾರ್ಚ್6: ವಿಧಾನಸಭಾ ಚುನಾವಣೆಗೆ ಈಗಾಗಲೇ ರಾಜಕೀಯ ಪಕ್ಷಗಳು ಬಿರುಸಿನ ಪ್ರಚಾರವನ್ನ ಕೈಗೊಂಡಿದ್ದು, ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಸೇರಿಂತೆ ಹಲವು ಪಕ್ಷಗಳು ರಾಜ್ಯಾದ್ಯಂತ ಅಬ್ಬರದ ಪ್ರಚಾರವನ್ನ ನಡೆಸುತ್ತಿವೆ.

ಇತ್ತ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೋಲಾರ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದು ಘೋಷಿಸಿಕೊಂಡಿ ಬಳಿಕ ರಾಜಕೀಯ ವಲಯದಲ್ಲಿ ಸಿದ್ದರಾಮಯ್ಯ ಸ್ಪರ್ಧೆಯ ಕುರಿತು ಸಾಕಷ್ಟು ಚರ್ಚೆಯಾಗುತ್ತಿದೆ. ಈ ನಡುವೆ ಭವಿಷ್ಯ ಹಾಗೂ ಜ್ಯೋತಿಷ್ಯದ ಮೇಲೆ ಒಲವಿಲ್ಲದ ಸಿದ್ದರಾಮಯ್ಯ ಕೋಡಿಮಠಕ್ಕೆ ಭೇಟಿ ನೀಡಿ ಸುದೀರ್ಘ ಒಂದು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿ, ರಾಜಕೀಯ ಭವಿಷ್ಯ ಕೇಳಿರುವುದು ಇದೀಗ ಅಚ್ಚರಿಯನ್ನ ಮೂಡಿಸಿದೆ.

 Siddaramaiah Visits Kodi Mutt Shree In Haranahalli Of Hassan District

ಸಹಜವಾಗಿಯೇ ಚುನಾವಣಾ ಪೂರ್ವದಲ್ಲಿ ಘಟಾನುಗಟಿ ರಾಜಕೀಯ ನಾಯಕರು ಜ್ಯೋತಿಷ್ಯವನ್ನ ಕೇಳಿಸುತ್ತಾರೆ. ಈ ಹಿಂದೆ ಮಾಜಿ ಪ್ರಧಾನಿ ಇಂದಿರಾಗಾಂಧಿ ಕೋಡಿಮಠಕ್ಕೆ ಭೇಟಿ ನೀಡಿ ಭವಿಷ್ಯ ಕೇಳಿಸಿದ್ದು, ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಯಾಗಿದ್ದು, ಇದೀಗ ಚುನಾವಣೆ ಹೊತ್ತಲಿ ಸಿದ್ದರಾಮಯ್ಯ ಕೋಡಿಮಠಕ್ಕೆ ಭೇಟಿ ನೀಡಿರುವುದು ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ.

ಇನ್ನೂ ಸಿದ್ದರಾಮಯ್ಯ ಕೋಡಿಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಸಿದ್ದರಾಮಯ್ಯಗೆ ಶಾಲು ಹೊದಿಸಿ, ಹಾರ ಹಾಕಿ ಆಶೀರ್ವಾದ ಮಾಡಿದ್ದು, ಸುದೀರ್ಘ ಒಂದು ಗಂಟೆಗೂ ಹೆಚ್ಚಿನ ಸಮಯ ಚರ್ಚೆ ನಡೆಸಿದ್ದಾರೆ. ಮುಂದೆ ಯಾವ ಪಕ್ಷ ಅಧಿಕಾರಕ್ಕೆ ಬರಬಹುದು? ತಮ್ಮ ರಾಜಕೀಯ ಭವಿಷ್ಯ ಹೇಗಿದೆ? ಮತ್ತೊಮ್ಮೆ ಸಿಎಂ ಆಗ್ತೀನಾ? ಮುಂದಿನ ರಾಜ್ಯ ರಾಜಕಾರಣ ಹೇಗಿರುತ್ತೆ..? ಎಂಬುದನ್ನ ಸಿದ್ದರಾಮಯ್ಯ ಅವರು ಕೇಳಿದ್ದಾರೆ ಎಂದು ಹೇಳಲಾಗಿದೆ.

 Siddaramaiah Visits Kodi Mutt Shree In Haranahalli Of Hassan District

ಇದಕ್ಕೆ ಶ್ರೀಗಳ ಸಿದ್ದರಾಮಯ್ಯ ಅರಿಗೆ ರಾಜಕೀಯ ಭವಿಷ್ಯ ಉಜ್ವಲ ಭವಿಷ್ಯವಿರುಗುದಾಗಿ ಹೇಳಿದ್ದೇನೆ ಎನ್ನಲಾಗಿದೆ. ಇನ್ನೂ ಕೋಡಿಮಠದಲ್ಲೇ ವಿರೋಧ ಪಕ್ಷದ ನಾಯರಾದ ಸಿದ್ದರಾಮಯ್ಯ ಅವರು ಊಟ ಮಾಡಿ ಬಂದಿದ್ದಾರೆ. ಇತ್ತ ಭವಿಷ್ಯ ಜೋತಿಷ್ಯ ಮೇಲೆ ಒಲವು ತೋರದ ಸಿದ್ದರಾಮಯ್ಯ ದೀಡಿರ್ ಮಠಕ್ಕೆ ಬೇಟಿ ನೀಡಿ ಚರ್ಚೆ ನಡೆಸಿರುವುದು ಸಾರ್ವಜನಿಕ ವಲಯದಲ್ಲಿ ಸಾಕಷ್ಡು ಚರ್ಚೆಗೆ ಕಾರಣವಾಗಿದೆ.

ಸಿದ್ದರಾಮಯ್ಯ ಗೆ ಮನೆ ದೇವರ ಭವಿಷ್ಯ!

ಈ ಹಿಂದೆ ಸಿದ್ದರಾಮಯ್ಯ ಕೋಲಾರ ಕ್ಷೇತ್ರದಿಂದ ಸ್ಫರ್ಧಿಸುವುದಾಗಿ ಘೋಷಣೆ ಮಾಡಿದ ಬಳಿಕ ಸಿದ್ದರಾಮಯ್ಯ ಅವರ ಮನೆ ದೇವರು ನುಡಿದಿರುವ ಭವಿಷ್ಯ ಮತ್ತಷ್ಟು ಕುತೂಹಲವನ್ನು ಸೃಷ್ಟಿಸಿತ್ತು.

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಚೊಟ್ಟನಹಳ್ಳಿ ಗ್ರಾಮದಲ್ಲಿರುವ ಆದಿನಾಡು ಚಿಕ್ಕಮ್ಮ ದೇವಿ ದೇವಾಲಯಕ್ಕೆ ಶಾಸಕ ಯತೀಂದ್ರ ಸಿದ್ದರಾಮಯ್ಯ ಇತ್ತೀಚಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. ಈ ವೇಳೆ ಸಿದ್ದರಾಮಯ್ಯ ರಾಜಕೀಯ ಭವಿಷ್ಯದ ಬಗ್ಗೆ ಆದಿ ನಾಡು ಚಿಕ್ಕಮ್ಮತಾಯಿ ಎಚ್ಚರಿಕೆ ನೀಡಿದ್ದು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಒಂದೇ ಕ್ಷೇತ್ರದಲ್ಲಿ ನಿಂತರೆ ಬಲವಿಲ್ಲ, ಎರಡು ಕ್ಷೇತ್ರದಲ್ಲಿ ನಿಲ್ಲುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+