ಉರುಳಿದ ಬಿಜೆಪಿ ಸರ್ಕಾರ: ಸಿದ್ದರಾಮಯ್ಯ ಮೊದಲ ಟ್ವೀಟ್ ಪ್ರತಿಕ್ರಿಯೆ
ಬೆಂಗಳೂರು, ಮೇ 19: ಯಡಿಯೂರಪ್ಪ ಅವರು ಇಂದು ನಡೆದ ಅಧಿವೇಶನದಲ್ಲಿ ವಿಶ್ವಾಸಮತ ಯಾಚನೆ ಮಾಡದೆ ರಾಜಿನಾಮೆ ನೀಡಲು ತೆರಳುತ್ತಿದ್ದಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವಿಟ್ಟರ್ ಮೂಲಕ ಪ್ರತಕ್ರಿಯೆ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಸರ್ಕಾರ ಬಿದ್ದ ಕೂಡಲೇ ಟ್ವೀಟ್ ಮಾಡಿದ ಸಿದ್ದರಾಮಯ್ಯ, 'ಕರ್ನಾಟಕದಲ್ಲಿ ಪ್ರಜಾಪ್ರಭುತ್ವ ಗೆದ್ದಿದೆ. ಸಂವಿಧಾನ ವಿರೋಧಿ ಕ್ರಮಗಳಿಂದ ಅಧಿಕಾರ ಪಡೆಯಲು ಬಿಜೆಪಿ ಮಾಡಿದ ಸಂಚು ವಿಫಲಗೊಂಡಿದೆ' ಎಂದಿದ್ದಾರೆ.

ಬಿಜೆಪಿಯು ರಾಜ್ಯಪಾಲರನ್ನು ಬಳಸಿಕೊಂಡು ಪ್ರಜಾಪ್ರಭುತ್ವ ವಿರೋಧಿ ನಿರ್ಣಯಗಳ ಮೂಲಕ ಅಧಿಕಾರ ಹಿಡಿಯಲು ಯತ್ನಿಸಿದೆ ಎಂದು ಈ ಮುಂಚೆಯೂ ಸಿದ್ದರಾಮಯ್ಯ ಅವರು ಆರೋಪ ಮಾಡಿದ್ದರು. ಇಂದು ಕೂಡಾ ಸಿದ್ದರಾಮಯ್ಯ ಅವರು ಅದೇ ರೀತಿಯ ಟ್ವೀಟ್ ಮಾಡಿದ್ದಾರೆ.
ಕರ್ನಾಟಕದಲ್ಲಿ ಪ್ರಜಾಪ್ರಭುತ್ವ ಗೆದ್ದಿದೆ. ಸಂವಿಧಾನ ವಿರೋಧಿ ಕ್ರಮಗಳಿಂದ ಅಧಿಕಾರ ಪಡೆಯಲು ಬಿಜೆಪಿ ಮಾಡಿದ ಸಂಚು ವಿಫಲಗೊಂಡಿದೆ.
— Siddaramaiah (@siddaramaiah) May 19, 2018












Click it and Unblock the Notifications