ಗೋಡ್ಸೆ ಬೆಂಬಲಿಸುವ ಸಾಧ್ವಿಗೆ ನರೇಂದ್ರ ಮೋದಿ ಶ್ರೀರಕ್ಷೆ: ಸಿದ್ದರಾಮಯ್ಯ

ಬೆಂಗಳೂರು, ಮೇ 17: ಮಹಾತ್ಮ ಗಾಂಧಿ ಅವರನ್ನು ಹತ್ಯೆ ಮಾಡಿದ ನಾಥೂರಾಮ್ ಗೋಡ್ಸೆ ಒಬ್ಬ ದೇಶಭಕ್ತ ಎಂಬ ಬಿಜೆಪಿ ಅಭ್ಯರ್ಥಿ, ಮಾಲೆಗಾಂವ್ ಬಾಂಬ್ ಸ್ಫೋಟದ ಆರೋಪಿ ಸಾಧ್ವಿ ಪ್ರಗ್ಯಾ ಸಿಂಗ್ ಹೇಳಿಕೆ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಗೋಡ್ಸೆ ಮತ್ತು ಪ್ರಗ್ಯಾ ಸಂಘ ಪರಿವಾರದ ಸಿದ್ಧಾಂತದಿಂದ ಪ್ರೇರೇಪಣೆಗೊಂಡವರು. ಗಾಂಧಿಯನ್ನು ಕೊಂದ ಅವರು ಅವರ ಮಕ್ಕಳನ್ನೂ ಕೊಂದರು ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

Siddaramaiah said Godse and Prgya inspired by Sangh pariwar

ಹೀಗೆ ಗಾಂಧಿಯನ್ನು ಕೊಂದ ಗೋಡ್ಸೆಯನ್ನು ಸಮರ್ಥಿಸಿಕೊಳ್ಳುವ ಪ್ರಗ್ಯಾ ಅವರಂಥವರಿಗೆ ಪ್ರಧಾನಿ ನರೇಂದ್ರ ಮೋದಿ ಬೆಂಬಲ ನೀಡುತ್ತಿದ್ದಾರೆ. ಈ ಮೂಲಕ ಸಂಘ ಪರಿವಾರದ ದ್ವೇಷ ಸಿದ್ಧಾಂತವನ್ನು ಉತ್ತೇಜಿಸುವ ಕೆಲಸ ಮಾಡಲಾಗುತ್ತಿದೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗೋಡ್ಸೆ ಸಂಘ ಪರಿವಾರದ ಸಿದ್ಧಾಂತದಿಂದ ಪ್ರೇರೇಪಣೆಗೊಂಡಿದ್ದ. ಮತ್ತೀಗ ಪ್ರಗ್ಯಾ ಕೂಡ. ಹಿಂದಿನವ ನಮ್ಮ ಮಹಾತ್ಮರನ್ನು ಹತ್ಯೆ ಮಾಡಿದ ಮತ್ತು ಈಗಿನವರು ಮಹಾತ್ಮನ ಮಕ್ಕಳನ್ನು ಕೊಂದಿದ್ದಾರೆ. ಗೋಡ್ಸೆ ಒಬ್ಬ ದೇಶಭಕ್ತ ಎಂದು ಕರೆದಿರುವ ಪ್ರಗ್ಯಾಳನ್ನು ನರೇಂದ್ರ ಮೋದಿ ಬೆಂಬಲಿಸುತ್ತಾರೆ. ಇದು ಸಂಘದ ದ್ವೇಷ ಆಧಾರಿತ ಸಿದ್ಧಾಂತವನ್ನು ವೃದ್ಧಿಸುವ ಪ್ರಯತ್ನದ ಸಂಕೇತವೇ? ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+