ಜನ್ಮದಿನದಂದು ಇಂದಿರಾ ಗಾಂಧಿ ನೆನಪಿಸಿಕೊಂಡ ಸಿದ್ದರಾಮಯ್ಯ
ಬೆಂಗಳೂರು, ನವೆಂಬರ್ 19 : ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜನ್ಮದಿನದ ಹಿನ್ನಲೆಯಲ್ಲಿ ಅವರನ್ನು ನೆನಪು ಮಾಡಿಕೊಂಡಿದ್ದಾರೆ. ಇಂದಿರಾ ಗಾಂಧಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಗೌರವ ಸಮರ್ಪಿಸಿದ್ದಾರೆ.
ಸೋಮವಾರ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಇಂದಿರಾ ಗಾಂಧಿ ಸ್ಮರಣೆ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರು ಪಾಲ್ಗೊಂಡಿದ್ದರು. ಇಂದಿರಾ ಗಾಂಧಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
'ಗರೀಬಿ ಹಠಾವೋ'ಎಂದು ಇಂದಿರಾ ಗಾಂಧಿ ಅವರು ಹೇಳಿದರು ನುಡಿದಂತೆಯೇ ನಡೆದರು. ಬ್ಯಾಂಕುಗಳನ್ನು ಬಡವರ ಮನೆ ಬಾಗಿಲಿಗೆ ತಂದರು ಎಂದು ಸಿದ್ದರಾಮಯ್ಯ ಅವರು ತಮ್ಮ ಸರಣಿ ಟ್ವೀಟ್‌ನಲ್ಲಿ ಹೇಳಿದ್ದಾರೆ.
ಇಂದಿರಾ ಗಾಂಧಿ ಅವರು 'ಗರೀಬಿ ಹಠಾವೋ' ಎಂದು ನುಡಿದರು, ನುಡಿದಂತೆಯೇ ನಡೆದರು. ಪ್ರಧಾನಿಯಾಗಿ ಅವರು ಅನುಷ್ಠಾನಗೊಳಿಸಿದ್ದ 20 ಅಂಶಗಳ ಕಾರ್ಯಕ್ರಮ ಇದಕ್ಕೆ ಸಾಕ್ಷಿ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
|
ಮೋದಿ ವಿರುದ್ಧ ಸಿದ್ದರಾಮಯ್ಯ ಟ್ವೀಟ್
ನರೇಂದ್ರ ಮೋದಿ ಅವರು ಬಡವರನ್ನು ಬ್ಯಾಂಕುಗಳಿಂದ ದೂರ ಓಡಿಸಿದರು ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.
|
ನಿಜವಾದ ಅಭಿವೃದ್ಧಿ ಮಾದರಿ
ಇಂದಿರಾಗಾಂಧಿ ಮಾದರಿಯೇ ನಿಜವಾದ ಅಭಿವೃದ್ದಿ ಮಾದರಿ ಎಂದು ಸಿದ್ದರಾಮಯ್ಯ ಟ್ವಿಟರ್‌ನಲ್ಲಿ ಹೇಳಿದ್ದಾರೆ.
|
ದೇಶವನ್ನು ಅಭಿವೃದ್ಧಿ ಮಾಡಿದರು
ಏಷ್ಯಾ ಖಂಡದಲ್ಲಿಯೇ ಭಾರತವನ್ನು ಅಭಿವೃದ್ಧಿಗೊಳಿಸಿದರು.
|
ಜನಸೇವೆಗೆ ಮಾದರಿ
ಇಂದಿರಾ ಗಾಂಧಿ ಆಳುವವರ ಪಾಲಿನ ನೈಜ ರೋಲ್ ಮಾಡೆಲ್, ನನಗೂ ಕೂಡಾ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
|
ಪುಷ್ಪ ನಮನ ಸಲ್ಲಿಕೆ
ಇಂದಿರಾ ಗಾಂಧಿ ಅವರ ಭಾವ ಚಿತ್ರಕ್ಕೆ ಸಿದ್ದರಾಮಯ್ಯ ಪುಷ್ಪ ನಮನ ಸಲ್ಲಿಸಿದರು.












Click it and Unblock the Notifications