Siddaramaiah: ಕಲ್ಪತರು ನಾಡಿನಲ್ಲಿ ಟಗರು ಪ್ರಚಾರ; ಕೇಸರಿ ಬಿಳಿ ಹಸಿರು ಬಣ್ಣದ ಪೇಟ ತಿರಸ್ಕರಿಸಿದ ಸಿದ್ದರಾಮಯ್ಯ
ತುಮಕೂರು,ಮೇ1: ರಾಜ್ಯ ರಾಜಕಾರಣದಲ್ಲಿ ದಿನದಿಂದ ದಿನಕ್ಕೆ ಚುನಾವಣಾ ಕಾವು ಜೋರಾಗಿದೆ. ರಾಜಕೀಯ ಪಕ್ಷಗಳಿಗೆ 2023 ರ ವಿಧಾನಸಭಾ ಚುನಾವಣೆ ಪ್ರತಿಷ್ಠೆಯ ಕಣವಾಗಿದ್ದು, ಕಾಂಗ್ರೆಸ್ ಬಿಜೆಪಿ ಹಾಗೂ ಜೆಡಿಎಸ್ ನಾಯಕರ ನಡುವೆ ಮಾತಿನ ಭರಾಟೆ ಜೋರಾಗಿದೆ.
ಕೇಸರಿ ಬಣ್ಣದ ಮೂಲಕ ಬಿಜೆಪಿ ನಾಯಕರ ವಿರುದ್ದ ಕಿಡಿಕಾರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಕೇಸರಿ, ಬಿಳಿ, ಹಸಿರು ಬಣ್ಣದ ಪೇಟವನ್ನೇ ತಿರಸ್ಕರಿಸಿದ್ದು, ಈ ಕುರಿತು ಸಾಕಷ್ಟು ಚರ್ಚೆಗಳು ಶುರುವಾಗಿದೆ.

ಹೌದು, ತುಮಕೂರ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಸಿದ್ದರಾಮಯ್ಯ ಪ್ರಚಾರಕ್ಕೆ ಆಗಮಿಸಿದ್ದರು. ಶಿರಾ, ಚಿಕ್ಕನಾಯಕನಹಳ್ಳಿ ಸೇರಿ ಹಲವೆಡೆ ಸಿದ್ದರಾಮಯ್ಯ ಕ್ಯಾಂಪೇನ್ ಮಾಡಿದರು. ಶಿರಾದಲ್ಲಿ ಟಿ.ಬಿ ಜಯಚಂದ್ರ ಪರ ಸಿದ್ದರಾಮಯ್ಯ ಅವರು ಮತಯಾಚನೆ ಮಾಡಿದ್ದು, ಕಾಂಗ್ರೆಸ್ ಕಾರ್ಯಕರ್ತರು ಆಯೋಜಿಸಿದ್ದ ಕಾರ್ಯಕರ್ಮದಲ್ಲಿ ವೇದಿಕೆ ಮೇಲೆ ಸಿದ್ದರಾಮಯ್ಯ ಅವರನ್ನು ಸನ್ಮಾನಿಸಲಾಯಿತು.
ಈ ವೇಳೆ ಸಿದ್ದರಾಮಯ್ಯ ಅವರಿಗೆ ಕಂಬಲಿ ಹಾಕಿ ಸನ್ಮಾನಿಸಲಾಯಿತು, ನಂತರ ಸಿದ್ದರಾಮಯ್ಯಗೆ ಕೇಸರಿ ಬಿಳಿ ಹಸಿರು ಬಣ್ಣದ ಪೇಟ ತೊಡಿಸಲು ನಾಯಕರು ಮುಂದಾಗಿದ್ದು, ಈ ವೇಳೆ ಸಿದ್ದರಾಮಯ್ಯ ಅವರು ತಿರಸ್ಕರಿಸಿದರು. ನಂತರ ಹಾರ ಹಾಕಿಸಿಕೊಂಡಿದ್ದಾರೆ.
ಈ ಕಾರ್ಯಕ್ರಮದ ಕುರಿತು ಸಿದ್ದರಾಮಯ್ಯ ಮಾತನಾಡಿ, ರಾಜ್ಯದಲ್ಲಿಕಾಂಗ್ರೆಸ್ ಪರ ಗಾಳಿ ಬೀಸುತ್ತಿದ್ದು, ಜನರ ಸ್ಪಂದನೆ ನಿರೀಕ್ಷೆಗೂ ಮೀರಿದೆ. ಕಾಂಗ್ರೆಸ್ ನೂರಕ್ಕೆ ನೂರು ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪ್ರಧಾನಿ ಮೋದಿ 'ಮೇ ಕಾವುಂಗಾ, ಮೇ ಕಾನೇದುಂಗಾ' ಅಂತಾರಲ್ಲ, ಕಮಿಷನ್ ಹೊಡೆಯುತ್ತಿದ್ದಾರೆ ಅಂಥ ಗುತ್ತಿಗೆದಾರರು ಪತ್ರ ಬರೆದಿದ್ದಕ್ಕೆ ಏನು ಏನು ಕ್ರಮ ಕೈಗೊಂಡರು? ಇಲ್ಲಿ ಬಸವರಾಜ ಬೊಮ್ಮಾಯಿಗೆ ತಿನ್ನಲು ಬಿಟ್ಟಿದ್ದಾರೆ ಎಂದು ವ್ಯಂಗ್ಯವಾಡಿದರು.

ನಾನು ಬೇಕು ಅಂದರೆ ನೀವು ಕಾಂಗ್ರೆಸ್‌ಗೆ ಮತ ಹಾಕಿ. ನನಗೆ ನೀವು ಬೇಕು, ನಿಮಗೆ ನಾನು ಬೇಕು. ಕಾಂಗ್ರೆಸ್‌ಗೆ ಹಾಕುವ ಒಂದೊಂದು ಮತವೂ ನನಗೇ ಹಾಕಿದಂತೆ ಎಂದು ಮನವಿ ಮಾಡಿದರು. ಮಾಜಿ ಸಂಸದ ಎಸ್.ಪಿ. ಮುದ್ದಹನುಮೇಗೌಡ ಬಿಜೆಪಿಗೆ ಹೋಗಿ ಇಂಗು ತಿಂದ ಮಂಗನಂತಾಗಿದ್ದಾರೆ. ಬಿಜೆಪಿಯವರು ಈಗ ಟೋಪಿ ಹಾಕಿದ್ದಾರೆ. ಪಾರ್ಲಿಮೆಂಟ್‌ಗೆ ನಿಲ್ಲಿತಾಳ್ಮೆ ತಗೋಳಿ, ಗ್ರಾಮಾಂತರ ಕ್ಷೇತ್ರಕ್ಕೆ ನಿಲ್ಲಿಟಿಕೆಟ್ ಕೊಡುತ್ತೇವೆ ಎಂದಿದ್ದೆ. ನನ್ನ ಮಾತು ಕೇಳದೆ ತಿರುಪತಿ ತಿಮ್ಮಪ್ಪನ ನಾಮ ಹಾಕಿಸಿಕೊಂಡಿದ್ದಾರೆ ಎಂದು ಹೇಳಿದರು.
ರಾಜ್ಯದಲ್ಲಿಬಿಜೆಪಿ ಅವರು 55 ಅಥವಾ 60 ಸೀಟು ಗೆದ್ದರೆ ಅದೇ ಹೆಚ್ಚು. ಜೆಡಿಎಸ್‌ನವರು 23 ಗೆಲ್ಲಲ್ಲಎಂದರು. ಜೆಡಿಎಸ್‌ನವರು ಗೆದ್ದೆತ್ತಿನ ಬಾಲ ಹಿಡಿಯುವವರು. ತಮ್ಮ ಬೇಳೆ ಬೇಯಿಸಲು ಅತಂತ್ರ ಫಲಿತಾಂಶ ಬರಲೆಂದು ಹೋಮ ಹವನ ಮಾಡಿಸೋರು ಎಂದು ವ್ಯಂಗ್ಯವಾಡಿದರು.












Click it and Unblock the Notifications