ಸಿದ್ದರಾಮಯ್ಯ ಒಂದು ಓಟಿನ ಬೆಲೆ 500 ರಿಂದ 1000 ರೂ: ಎಚ್ಡಿಕೆ

ಮೈಸೂರು, ಮಾರ್ಚ್ 28: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಒಂದು ಓಟಿನ ಬೆಲೆ 500 ರಿಂದ 1000 ರೂ. ಎಂದು ಮುಖ್ಯಮಂತ್ರಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ. ಮೈಸೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

"ಹಣದ ಮೂಲಕವೇ ಚುನಾವಣೆ ಗೆಲ್ಲುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ ಶಾಲಾ ಮಕ್ಕಳು ಸಹ ಸಿದ್ದರಾಮಯ್ಯ ಅವರ ಬೋರ್ಡ್ ಗೆ ಕಲ್ಲು ಹೊಡೆಯುತ್ತಿದ್ದಾರೆ. ಸಿದ್ದರಾಮಯ್ಯ ಅವರು ಸಿಕ್ಕರೆ ಏನ್ ಮಾಡ್ತಾರೋ ಗೊತ್ತಿಲ್ಲ! ಇನ್ನು ಗೆಲ್ಲುವು ಎಲ್ಲಿಂದ ಎಂದು ಪ್ರಶ್ನಿಸಿದರು.

"ಚಾಮುಂಡೇರಿಯಲ್ಲಿ ಸಿದ್ದರಾಮಯ್ಯ ನಿಂತರೆ ಸೋಲು ಗ್ಯಾರಂಟಿ. ಅದಕ್ಕೆ ಈಗಲೂ ಚಾಮುಂಡೇಶ್ಚರಿಯಲ್ಲಿ ಅವರು ನಿಲ್ಲೋದು ಡೌಟು! ಚಾಮುಂಡೇಶ್ಚರಿ ಚುನಾವಣೆಗೆ ಬರ್ಲಿ ನೋಡೋಣ" ಎಂದು ಸವಾಲು ಹಾಕಿದರು.

Siddaramaiah pays Rs 500 to 1000 for a single vote: HD Kumaraswamy

"ಚುನಾವಣೆ ಫಲಿತಾಂಶ ದಿನ ನಾನೇ ಮೈಸೂರಿಗೆ ಬರುತ್ತೇನೆ. ನಿಮ್ಮ ಜೊತೆ ಸಿಎಂ ಸೋಲುವ ಬಗ್ಗೆ ಮಾಹಿತಿ ನೀಡುತ್ತೇನೆ. ಸಿದ್ದರಾಮಯ್ಯ ಎನ್.ಆರ್. ಕ್ಷೇತ್ರದ ಮೇಲೆ ಕಣ್ಣು ಹಾಕಿದ್ದಾರೆ. ಚಾಮುಂಡೇಶ್ಚರಿ ಕ್ಷೇತ್ರ ಬಿಟ್ಟು ಎನ್.ಆರ್. ಕ್ಷೇತ್ರಕ್ಕೆ ಹೋದ್ರೂ ಆಶ್ಚರ್ಯ ಪಡುವಂತಿಲ್ಲ" ಎಂದರು.

"ಸಿದ್ದರಾಮಯ್ಯ ತಾವೊಬ್ಬರೇ ಮುಸ್ಲಿಂ ಚಾಂಪಿಯನ್ ಎಂದುಕೊಂಡಿದ್ದಾರೆ. ಎಲ್ಲಿ ನಿಲ್ಲುತ್ತಾರೋ ನೋಡೋಣ ಎಂದರಲ್ಲದೆ, 'ರಾಮನಗರ ನನ್ನ ಕರ್ಮಭೂಮಿ' ಎಂದ ಅವರು ಎರಡು ಕಡೆ ಚುನಾವಣೆಗೆ ನಿಲ್ಲುವ ಯೋಚನೆ ಇದೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+