ಪ್ರಧಾನಿ ಮೋದಿಯನ್ನು ಕಿಚಾಯಿಸಿದ ಸಿದ್ದರಾಮಯ್ಯ!
Recommended Video

ಬೆಂಗಳೂರು, ಜನವರಿ 17: ಬಿಜೆಪಿ ತನ್ನ ಶಾಸಕರನ್ನು ಗುರುಗ್ರಾಮ(ಗುರ್ಗಾಂವ್) ಮತ್ತು ಮುಂಬೈಯ ರೆಸಾರ್ಟ್ ನಲ್ಲಿ ಕೂಡಿಟ್ಟುಕೊಂಡಿರುವುದನ್ನು ಕಟುವಾಗಿ ಟೀಕಿಸಿರುವ ಸಿದ್ದರಾಮಯ್ಯ, ಪ್ರಧಾನಿ ಮೋದಿ ಅವರನ್ನು ಕಿಚಾಯಿಸಿದ್ದಾರೆ.
"ದೆಹಲಿಯಲ್ಲಿರುವ ನಮ್ಮ ರಾಜ್ಯದ ಶಾಸಕರು 'ಚೌಕಿದಾರ್' ಬಂಧನದಿಂದ ಆದಷ್ಟು ಶೀಘ್ರವಾಗಿ ಬಿಡುಗಡೆಗೊಂಡು ಬರಲಿ, ಆತಂಕದಲ್ಲಿರುವ ಅವರ ಕುಟುಂಬಸ್ತರ ಜತೆ ಸೇರಿಕೊಳ್ಳಲಿ ಎಂದು ಹಾರೈಸುತ್ತೇನೆ" ಎಂದು ಟ್ವೀಟ್ ಮಾಡುವ ಮೂಲಕ ಬಿಜೆಪಿ ನಾಯಕರನ್ನು ಸಿದ್ದರಾಮಯ್ಯ ಅಣಕಿಸಿದ್ದಾರೆ.

ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಅತೃಪ್ತ ಶಾಸಕರನ್ನು 'ಆಪರೇಷನ್ ಕಮಲ'ದ ಮೂಲಕ ಸೆಳೆದು ಮೈತ್ರಿಕೂಟ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ನಾಯಕರು ಪ್ರಯತ್ನ ನಡೆಸಿದ್ದು, ಹೀಗಾಗಿಯೇ ಬಿಜೆಪಿಯ ಶಾಸಕರಿಗೆ ಗುರುಗ್ರಾಮದ ಹೋಟೆಲ್ ನಲ್ಲಿ ವಾಸ್ತವ್ಯ ಕಲ್ಪಿಸಲಾಗಿತ್ತು.
ದೆಹಲಿಯಲ್ಲಿರುವ ನಮ್ಮ ರಾಜ್ಯದ ಶಾಸಕರು 'ಚೌಕಿದಾರ್' ಬಂಧನದಿಂದ ಆದಷ್ಟು ಶೀಘ್ರವಾಗಿ ಬಿಡುಗಡೆಗೊಂಡು ಬರಲಿ, ಆತಂಕದಲ್ಲಿರುವ ಅವರ ಕುಟುಂಬಸ್ತರ ಜತೆ ಸೇರಿಕೊಳ್ಳಲಿ ಎಂದು ಹಾರೈಸುತ್ತೇನೆ.@INCKarnataka
— Siddaramaiah (@siddaramaiah) January 16, 2019
ಅಂತೆಯೇ ಕಾಂಗ್ರೆಸ್ ನ ಆರು ಶಾಸಕರೂ ಮೂರು ದಿನಗಳಿಂದ ನಾಪತ್ತೆಯಾಗಿದ್ದು, ರಾಜ್ಯ ರಾಜಕೀಯದಲ್ಲಿ ತಲ್ಲಣ ಸೃಷ್ಟಿಸಿತ್ತು. ಈಗಲೂ ಗುರುಗ್ರಾಮದಲ್ಲೇ ಇರುವ ಶಾಸಕರು ಆದಷ್ಟು ಬೇಗ ಮನೆಗೆ ಬಂದು ಕುಟುಂಬಸ್ತರನ್ನು ಸೇರಿಕೊಳ್ಳಲಿ ಎಂದು ನಾನು ಹಾರೈಸುತ್ತೇನೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿ, ಬಿಜೆಪಿಗೆ ಟಾಂಗ್ ನೀಡಿದ್ದಾರೆ.












Click it and Unblock the Notifications