karnataka assembly elections 2023; ಚುನಾವಣಾ ಕಾರ್ಯತಂತ್ರ; ಕೋಲಾರದಲ್ಲಿ ವಾರ್ ರೂಮ್ ಉದ್ಘಾಟಿಸಿದ ಸಿದ್ದರಾಮಯ್ಯ
ಸಿದ್ದರಾಮಯ್ಯ ಅವರು ಚುನಾವಣಾ ಕಾರ್ಯತಂತ್ರ, ಪ್ರಚಾರದ ರೂಪುರೇಷೆ ಸಿದ್ಧಪಡಿಸುವ ಕುರಿತು ಕೋಲಾರದ ಟೇಕಲ್ ರಸ್ತೆಯಲ್ಲಿ ವಾರ್ ರೂಮ್ ತೆರೆದಿದ್ದಾರೆ.
ಕೋಲಾರ, ಫೆಬ್ರವರಿ13: ಕರ್ನಾಟಕ ವಿಧಾನಸಭಾ ಚುನಾವಣೆಗೆ ಕೆಲ ತಿಂಗಳು ಮಾತ್ರ ಬಾಕಿ ಉಳಿದಿದ್ದು, ಈಗಾಗಲೇ ಕ್ಷೇತ್ರ ಘೋಷಿಸಿಕೊಂಡಿರುವ ವಿರೋಧ ಪಕ್ಷದ ನಾಯಾಕ ಸಿದ್ದರಾಮಯ್ಯ ಚುನಾವಣಾ ಕಾರ್ಯತಂತ್ರಕ್ಕಾಗಿ ಕೋಲಾರದಲ್ಲಿ ವಾರ್ ರೂಮ್ ನ್ನ ಸಿದ್ದರಾಮಯ್ಯ ಅವರು ಉದ್ಘಾಟಿಸಿದ್ದಾರೆ.
ಸಿದ್ದರಾಮಯ್ಯ ಅವರ ಕ್ಷೇತ್ರ ಹುಡುಕಾಟದ ವಿಚಾರವಾಗಿ ರಾಜ್ಯರಾಜಕಾರಣದಲ್ಲಿ ಸಾಕಷ್ಟು ಟೀಕೆ ಟಿಪ್ಪಣಿಗಳು ನಡೆದಿದ್ದು, ಈಗಾಗಲೇ ಎರಡ್ಮೂರು ಬಾರಿ ಕೋಲಾರ ಕ್ಷೇತ್ರದಲ್ಲಿ ಪ್ರಚಾರ ಮಾಡಿರುವ ಸಿದ್ದರಾಮಯ್ಯ ಅವರು ಚುನಾವಣಾ ಕಾರ್ಯತಂತ್ರ, ಪ್ರಚಾರದ ರೂಪುರೇಷೆ ಸಿದ್ಧಪಡಿಸುವ ಕುರಿತು ಕೋಲಾರದ ಟೇಕಲ್ ರಸ್ತೆಯಲ್ಲಿ ವಾರ್ ರೂಮ್ ತೆರೆದಿದ್ದಾರೆ. ಈ ಮೂಲಕ ಕ್ಷೇತ್ರದ ಸಂಪೂರ್ಣ ಚಿತ್ರಣವನ್ನು ಪಡೆದುಕೊಳ್ಳಲಿದ್ದಾರೆ.
ಇನ್ನೂ ಕೋಲಾರ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವ ಕುರಿತು ಈಗಾಗಲೇ ಎರಡ್ಮೂರು ಸಮೀಕ್ಷೆಗಳನ್ನ ಕಾಂಗ್ರೆಸ್ ನಾಯಕರು ನಡೆಸಿದ್ದಾರೆ ಎನ್ನಲಾಗಿದ್ದು, ಸಿದ್ದರಾಮಯ್ಯ ಅವರಿಗೆ ಕೋಲರದಲ್ಲಿ ಗೆಲುವು ಕಷ್ಟವಲ್ಲ ಆದರೆ, ಸಂಘಟಿತ ಪ್ರಯತ್ನ ನಡೆಸಬೇಕು ಎಂಬ ಮಾತುಕತೆ ನಡೆದಿದೆ ಎಂದು ಹೇಳಲಾಗಿದೆ.

ಈಗಾಗಲೇ ಕೊನೆ ಕ್ಷಣದಲ್ಲಿ ಸಿದ್ದರಾಮಯ್ಯ ಅವರು ಕ್ಷೇತ್ರ ಬದಲಾಯಿಸುತ್ತಾರೆ ಅಂತ ಬಿಜೆಪಿ ನಾಯಕ ಟೀಕೆಗೆ ಕೋಲಾರದಿಂದ ಕಣಕ್ಕಿಳಿಯಲು ಸಿದ್ದರಾಮಯ್ಯ ಅವರು ತೀರ್ಮಾನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವಾರ್ ರೂಮ್ ಕಾರ್ಯಾರಂಭ ಮಾಡಿದೆ ಎನ್ನಲಾಗಿದೆ.
ವಾರ್ ರೂಮ್ ಉದ್ಘಾಟನೆ ವೇಳೆ ವಿಧಾನಸಭೆ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಶಾಸಕರಾದ ಶ್ರೀನಿವಾಸಗೌಡ, ನಂಜೇಗೌಡ, ಬೈರತಿ ಸುರೇಶ್, ಅನಿಲ್ ಕುಮಾರ್, ನಸೀರ್ ಅಹಮದ್ ಸೇರಿದಂತೆ ಪಕ್ಷದ ಹಲವಾರು ಮುಖಂಡರು, ಕಾರ್ಯಕರ್ತರು ಹಾಜರಿದ್ದರು.

ಬೆಂಗಳೂರಿನ ಚುನಾವಣಾ ತಂತ್ರಗಾರಿಕೆ ತಂಡ ಪೋಲ್ ಹೌಸ್ ಕೋಲಾರ ವಿಧಾನಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿ ವಹಿಸಿಕೊಂಡಿದ್ದು, ಮುಂದಿನ ಮೂರು ತಿಂಗಳು ಕೋಲಾರದ ವಾರ್ ರೂಮ್ ಅನ್ನು ನಿರ್ವಹಿಸಲಿದೆ.











Click it and Unblock the Notifications