ಒಳಮೀಸಲಾತಿ; 6+6+5 ರೀತಿ ಹಂಚಿಕೆ, 'ಈ ಸಮುದಾಯಗಳ ಕ್ಷಮೆ ಕೇಳ್ತಾರಾ ಸಿದ್ದರಾಮಯ್ಯ'
ಬೆಂಗಳೂರು, ಸೆಪ್ಟೆಂಬರ್ 06: ಒಳ ಮೀಸಲಾತಿ ವಿಚಾರದಲ್ಲಿ ರಾಜಕೀಯ ಪಂಚಾಯಿತಿ ಮಾಡಿ, 6-6-5 ಹಂಚಿಕೆ ಮಾಡಿ ಕೈಬಿಟ್ಟಿದ್ದಾರೆ ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಬಸವರಾಜ ಬೊಮ್ಮಾಯಿ ಅವರು ಟೀಕಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಿ, ಅತ್ಯಂತ ಕನಿಷ್ಠ ಸಮುದಾಯಗಳಿಗೆ ನ್ಯಾಯ ಕೊಡಬೇಕು. ಗೊಂದಲವನ್ನು ನಿವಾರಿಸಬೇಕು. ಇಲ್ಲವಾದರೆ ನೀವು ಒಳಜಗಳದ ಅಪಖ್ಯಾತಿಗೆ ನೀವು ಈಡಾಗುತ್ತೀರಿ ಎಂದು ಎಚ್ಚರಿಸಿದರು.
ನಾವು ಮಾಡಿದ್ದನ್ನೇ ಇವತ್ತು ಒಪ್ಪಿಕೊಂಡಿದ್ದೀರಿ; ಅವತ್ತಿನ ಮಾತನ್ನು ಹಿಂಪಡೆದು ನೀವು ಇವತ್ತು ಈ ಸಮುದಾಯಗಳ ಕ್ಷಮೆ ಕೇಳುವಿರಾ ಎಂದು ಪ್ರಶ್ನೆಯನ್ನೂ ಮುಂದಿಟ್ಟರು. ಶೇ 17ರ ಬದಲು ಇನ್ನೊಂದು ಶೇಕಡಾ ಹೆಚ್ಚಿಸಿ ಎಲ್ಲರಿಗೂ ನ್ಯಾಯ ಕೊಡುವ ಪ್ರಯತ್ನ ಮಾಡುವಿರಾ ಎಂದು ಕೇಳಿದರು. ರಾಜಕೀಯ ನಿರ್ಣಯ ಮಾಡುವುದಾದರೆ ಇವೆಲ್ಲ ಆಯೋಗಗಳನ್ನು ಯಾಕೆ ಮಾಡಬೇಕಿತ್ತು ಎಂದು ಪ್ರಶ್ನಿಸಿದರು. ನ್ಯಾ.ನಾಗಮೋಹನದಾಸ್ ಸಮಿತಿ ವರದಿಯನ್ನು 2-3 ವಾರ ಇಟ್ಟುಕೊಂಡು ಸಂಪುಟದಲ್ಲಿ ತೀರ್ಮಾನ ಮಾಡಿದ್ದಾರೆ. ಅವರ ಶಿಫಾರಸು ಗಾಳಿಗೆ ತೂರಿದ್ದಾರೆ. ಸದಾಶಿವ ಆಯೋಗವು ಒಳ ಮೀಸಲಾತಿ ಬಗ್ಗೆ ವರದಿ ಗಾಳಿಗೆ ತೂರಿದರು. ಮಾಧುಸ್ವಾಮಿಯವರ ವರದಿಯನ್ನೂ ಕಡೆಗಣಿಸಿದರು ಎಂದು ದೂರಿದರು.

ಇದು ಸಂವಿಧಾನ ವಿರೋಧಿ, 3 ಆಯೋಗಗಳ ವರದಿಯನ್ನೂ ಪರಿಗಣಿಸಿಲ್ಲ; ಸುಪ್ರೀಂ ಕೋರ್ಟಿನ ನಿರ್ಧಾರವನ್ನೂ ತಿರಸ್ಕಾರ ಮಾಡಿದ್ದೀರಿ. ಕೇವಲ ರಾಜಕೀಯ ಲಾಭಕ್ಕಾಗಿ, ಮತಬ್ಯಾಂಕಿನ ಸುರಕ್ಷತೆಗಾಗಿ ಈ ಕೆಲಸ ಮಾಡಿದ್ದೀರಿ ಎಂದು ಟೀಕಿಸಿದರು. ಸಾಮಾಜಿಕ ನ್ಯಾಯ ಕೊಡುವ ಸುಪ್ರೀಂ ಕೋರ್ಟಿನ ತೀರ್ಪು ಅನುಷ್ಠಾನದಲ್ಲಿ ಸಿದ್ದರಾಮಯ್ಯನವರು ಎಲ್ಲ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಜನಸಂಖ್ಯೆಗೆ ಅನುಗುಣವಾಗಿ ಮಾಡಿಲ್ಲ. ಆದಿ ದ್ರಾವಿಡ, ಆದಿ ಕರ್ನಾಟಕ ಮೊದಲಾದ ಸಮುದಾಯಗಳು ಪ್ರತ್ಯೇಕ ಇರಬೇಕಿದ್ದು, ಎಕೆ, ಎಡಿ, ಎಎ ಇವರು ಯಾವ ಪಂಗಡಕ್ಕೂ ಸೇರಿಲ್ಲ. ಸರಕಾರಿ ಆಜ್ಞೆಯಲ್ಲಿ ಸ್ಪಷ್ಟತೆ ಇಲ್ಲ ಎಂದು ತಿಳಿಸಿದರು. ಸಾಮಾಜಿಕ ನ್ಯಾಯದ ಜೊತೆ ಸಾಮಾನ್ಯ ಜ್ಞಾನವನ್ನೂ ಇಟ್ಟುಕೊಂಡು ಆದೇಶ ಮಾಡಬೇಕಿತ್ತು ಎಂದು ಹೇಳಿದರು. ಅವರನ್ನು ಗೊಂದಲದಲ್ಲಿ ಹಾಕಿದ್ದಾರೆ ಎಂದರು. ಈ ಶ್ರೇಣಿಯಲ್ಲಿ ಅತ್ಯಂತ ಕೆಳಗಡೆ ಇರುವ ಬದುಕನ್ನೇ ಕಟ್ಟಿಕೊಳ್ಳದ ಅಲೆಮಾರಿಗಳಿಗೆ ಯಾವುದೇ ಮೀಸಲಾತಿ ಕೊಟ್ಟಿಲ್ಲ ಎಂದು ದೂರಿದರು. ಯಾರೂ ಸಂತುಷ್ಟವಾಗಿಲ್ಲ, ಬಲಗೈಯವರೂ ಅಸಮಾಧಾನ ಸೂಚಿಸಿದ್ದಾರೆ. ಲಂಚಾಣಿ, ಬೋವಿ ಸಮುದಾಯಕ್ಕೆ ಶೇ 0.5 ಹೆಚ್ಚಿಸಿ 59 ಜಾತಿ ಸೇರಿಸಿದ್ದಾರೆ. ಸರಕಾರದ ವಲಯದಲ್ಲಿ ಕೋರ್ಟಿಗೆ ಹೋಗಿ ಎಂಬ ಉತ್ತರ ಸಿಗುತ್ತಿದೆ ಎಂದು ಹೇಳಿದರು.
ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಎಲ್ಲ ವರ್ಗದವರು ಹೋರಾಟದಲ್ಲಿ ಧುಮುಕಬೇಕೆಂಬುದು ಮಹಾತ್ಮ ಗಾಂಧಿಯವರ ಆಶಯವಾಗಿತ್ತು. ಆಗ ಡಾ. ಬಾಬಾಸಾಹೇಬ ಅಂಬೇಡ್ಕರರು ಅತ್ಯಂತ ತುಳಿತಕ್ಕೆ ಒಳಗಾದ ಸಮುದಾಯಗಳ ಭವಿಷ್ಯ ಏನೆಂದು ಚಿಂತನೆ ಮಾಡುತ್ತಿದ್ದರು. ದೇಶವ್ಯಾಪಿ ಚರ್ಚೆ ನಡೆದು, ಪುಣೆಯಲ್ಲಿ ಮಹಾತ್ಮ ಗಾಂಧಿ ಅವರಿದ್ದ ಜೈಲಿನಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರರು ಮತ್ತು ಗಾಂಧಿಯವರು ಒಂದು ವಾರಕ್ಕೂ ಹೆಚ್ಚು ಚರ್ಚೆ ಮಾಡಿದರು. ಗಾಂಧಿಯವರ ಭರವಸೆ ಮೇರೆಗೆ ಎಲ್ಲ ತುಳಿತಕ್ಕೆ ಒಳಗಾದ ದಲಿತ ಸಮುದಾಯಗಳು ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದ್ದವು ಎಂದು ನೆನಪಿಸಿದರು. ಬಳಿಕ ಸ್ವಾತಂತ್ರ್ಯ ಹೋರಾಟಕ್ಕೆ ಪರಿಪೂರ್ಣತೆ ಬಂದಿತ್ತು ಎಂದರು.
ಸಂವಿಧಾನ ರಚಿಸುವಾಗ ಇದೇ ಅಂಶಗಳು ಮುಂದೆ ಬಂದವು. ಕರ್ನಾಟಕದ 6 ಸಮುದಾಯಗಳು ಮೊದಲನೇ ಪಟ್ಟಿಯಲ್ಲಿ ಸೇರಿದವು. ಈಗ 101 ಆಗಿದೆ. ಕಾಂಗ್ರೆಸ್ ಪಕ್ಷದವರು ಸ್ವಾತಂತ್ರ್ಯ ಹೋರಾಟದ ಫಲಾನುಭವಿಗಳು. ಅವರು ತಮ್ಮ ರಾಜಕೀಯ ಸ್ಥಾನಮಾನಕ್ಕೆ ಹೆಚ್ಚು ಒತ್ತು ಕೊಟ್ಟರೇ ಹೊರತಾಗಿ ಡಾ. ಬಾಬಾಸಾಹೇಬ ಅಂಬೇಡ್ಕರರು ಸಂವಿಧಾನದಲ್ಲಿ ಇಟ್ಟುಕೊಂಡಿದ್ದ ಆಶಯಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಹಿಂಜರಿದರು ಎಂದು ಆಕ್ಷೇಪಿಸಿದರು.
6 ಜಾತಿ ಇದ್ದ ಎಸ್‍ಸಿ ಸಮುದಾಯ 101 ಜಾತಿಗೇರಿದೆ. ಮೀಸಲಾತಿ ಪ್ರಮಾಣ ಹೆಚ್ಚಿಸಲೇ ಇಲ್ಲ. ಇದರಿಂದ ಆ ಸಮುದಾಯಗಳಲ್ಲಿ ಅಸಮಾಧಾನ ಹೆಚ್ಚಾಗಿ, ಹಲವಾರು ಸಂದರ್ಭಗಳಲ್ಲಿ ಅದು ವ್ಯಕ್ತವಾಯಿತು. ಒಳ ಮೀಸಲಾತಿಗೆ ದೊಡ್ಡ ಧ್ವನಿ ಪಕ್ಕದ ಆಂಧ್ರದಿಂದ ಆರಂಭವಾಗಿ ಕರ್ನಾಟಕದಲ್ಲೂ ಕೇಳಿಸಿತು. ಸಮ್ಮಿಶ್ರ ಸರಕಾರ ಇದ್ದಾಗ ನಾಗಮೋಹನದಾಸ್ ಸಮಿತಿ ರಚಿಸಲಾಯಿತು ಎಂದು ವಿವರಿಸಿದರು. ಬಿಜೆಪಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಒತ್ತಾಸೆಯಿಂದ ನಾವು ವರದಿ ಪಡೆದೆವು. ಈ ಸಮಿತಿಯು ಶೇ 15 ಇದ್ದ ಮೀಸಲಾತಿಯನ್ನು 17ಕ್ಕೆ ಹೆಚ್ಚಿಸಲು ಶಿಫಾರಸು ಮಾಡಿತ್ತು ಎಂದರು. ಎಸ್‍ಟಿ 3 ಇದ್ದುದನ್ನು 7ಕ್ಕೆ ಏರಿಸಲು ಶಿಫಾರಸು ಮಾಡಿದ್ದರು ಎಂದು ವಿವರಿಸಿದರು.
-
ಮಗುವನ್ನ ಸಾಕಲು ಹಣ ಬೇಕಾದ್ರೆ ಯಾರ ಜೊತೆ ಬೇಕಿದ್ರೂ ಮಲಗುವೆ: ಬಿಗ್ಬಾಸ್ ಖ್ಯಾತಿಯ ಚಂದ್ರಿಕಾ ದೀಕ್ಷಿತ್ -
Karnataka Weather: ಬೆಂಗಳೂರು ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
ಸಿನಿಮಾ ಕಥೆಗೆ ವಿರುದ್ಧವಾಗಿ ಕುಂಭಮೇಳ ಮೊನಾಲಿಸಾ ಮದುವೆ, 10 ಕೋಟಿ ರೂ. ಸಾಲ ಮಾಡಿದ್ದೇನೆ: ನಿರ್ದೇಶಕ ಸನೋಜ್ ಮಿಶ್ರಾ ಆತಂಕ -
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
SSLC ವಿದ್ಯಾರ್ಥಿಗಳ ಗಮನಕ್ಕೆ: ಮಾರ್ಚ್ 18ಕ್ಕೆ ಪ್ರಥಮ ಭಾಷೆ ಕನ್ನಡ ಪರೀಕ್ಷೆ; ಪಾಸಾಗಲು ಈ ಪ್ರಮುಖ ಅಂಶಗಳನ್ನು ಗಮನಿಸಿ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ












Click it and Unblock the Notifications