ಸಿದ್ದರಾಮಯ್ಯ ಸಂಪುಟ ಸೇರುವ ಶಾಸಕರ ಪಟ್ಟಿ

Posted By:
Subscribe to Oneindia Kannada

ಬೆಂಗಳೂರು, ಜೂನ್ 18 : ಮೂರು ದಿನಗಳ ಸಚಿವ ಸಂಪುಟ ಪುನಾರಚನೆಗೆ ಕಗ್ಗಂಟು ಬಗೆಹರಿದಿದೆ. ಸಂಪುಟ ಪುನಾರಚನೆಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಒಪ್ಪಿಗೆ ನೀಡಿದರು. ಒಟ್ಟು 14 ಸಚಿವರನ್ನು ಸಂಪುಟದಿಂದ ಕೈಬಿಡಲಾಗುತ್ತದೆ. [ಸಂಪುಟದಿಂದ ಹೊರಹೋಗಲಿರುವ 13 ಸಚಿವರು]

ಶನಿವಾರ ಬೆಳಗ್ಗೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಸಿದ್ದರಾಮಯ್ಯ ಅವರು, 'ಸಂಪುಟ ಪುನಾರಚನೆಗೆ ಒಪ್ಪಿಗೆ ಸಿಕ್ಕಿದೆ. ನಾಳೆ ಅಥವ ನಾಡಿದ್ದು ರಾಜ್ಯಪಾಲರಿಗೆ ನೂತನ ಸಚಿವರ ಪಟ್ಟಿಯನ್ನು ರವಾನಿಸುತ್ತೇವೆ' ಎಂದು ಹೇಳಿದರು.

ಒಟ್ಟು 14 ಹಾಲಿ ಸಚಿವರನ್ನು ಸಂಪುಟದಿಂದ ಕೈ ಬಿಟ್ಟು, 11 ಅಥವ 12 ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ತೀರ್ಮಾನಿಸಲಾಗಿದೆ. ಭಾನುವಾರ ಸಂಜೆ 4 ಗಂಟೆಗೆ ನೂತನ ಸಚಿವರ ಪ್ರಮಾಣ ವಚನ ನಡೆಯಲಿದೆ ಎಂದು ತಿಳಿದುಬಂದಿದೆ. ಹಾಲಿ ಸಚಿವರಿಗೆ ಸಿದ್ದರಾಮಯ್ಯ ಅವರೇ ಕರೆ ಮಾಡಿ ರಾಜೀನಾಮೆ ನೀಡುವಂತೆ ಸೂಚನೆ ಕೊಡಲಿದ್ದಾರೆ.

siddaramaiah

ಸಂಪುಟ ಸೇರುವವರು : 1.ಸಂತೋಷ್ ಲಾಡ್ - ಕಲಘಟಗಿ, 2.ಪ್ರಿಯಾಂಕ ಖರ್ಗೆ - ಚಿತ್ತಾಪುರ, 3.ರುದ್ರಪ್ಪ ಲಮಾಣಿ - ಹಾವೇರಿ, 4.ಎಂ.ಆರ್.ಸೀತಾರಾಮ್ - ವಿಧಾನಪರಿಷತ್ ಸದಸ್ಯ, 5.ಪ್ರಮೋದ್ ಮಧ್ವರಾಜ್ - ಉಡುಪಿ, 6.ತನ್ವೀರ್ ಸೇಠ್ - ನರಸಿಂಹರಾಜ (ಮೈಸೂರು), 7.ಕಾಗೋಡು ತಿಮ್ಮಪ್ಪ - ಸಾಗರ, 8.ರಮೇಶ್ ಕುಮಾರ್ - ಶ್ರೀನಿವಾಸಪುರ, 9.ರಮೇಶ್ ಜಾರಕಿಹೊಳಿ - ಗೋಕಾಕ್, 10.ಬಸವರಾಜ್ ರಾಯರೆಡ್ಡಿ - ಕೊಪ್ಪಳ, 11.ಎಚ್‌.ವೈ.ಮೇಟಿ - ಬಾಗಲಕೋಟೆ, 12.ಎಸ್.ಎಸ್.ಮಲ್ಲಿಕಾರ್ಜುನ - ದಾವಣಗೆರೆ ಉತ್ತರ, 13.ಈಶ್ವರ ಖಂಡ್ರೆ - ಬಾಲ್ಕಿ

ಸಂಪುಟದಿಂದ ಹೊರ ಹೋಗುವವರು : 1.ಬಾಬೂರಾವ್ ಚಿಂಚನಸೂರು (ಜವಳಿ), 2.ದಿನೇಶ್ ಗುಂಡೂರಾವ್ (ಆಹಾರ ಮತ್ತು ನಾಗರಿಕ ಸರಬರಾಜು), 3.ಎಸ್.ಆರ್.ಪಾಟೀಲ್ (ಐಟಿ-ಬಿಟಿ), 4.ಕಿಮ್ಮನೆ ರತ್ನಾಕರ (ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ), 5.ಶಾಮನೂರು ಶಿವಶಂಕರಪ್ಪ (ತೋಟಗಾರಿಕೆ), 6.ಖಮರುಲ್ ಇಸ್ಲಾಂ (ಪೌರಾಡಳಿತ), 7.ಶ್ರೀನಿವಾಸ ಪ್ರಸಾದ್ (ಕಂದಾಯ), 8.ವಿನಯ್ ಕುಮಾರ್ ಸೊರಕೆ (ನಗರಾಭಿವೃದ್ಧಿ), 9.ಪರಮೇಶ್ವರ ನಾಯಕ್ (ಕಾರ್ಮಿಕ), 10.ಶಿವರಾಜ್ ತಂಗಡಗಿ (ಸಣ್ಣ ನೀರಾವರಿ), 11.ಸತೀಶ್ ಜಾರಕಿಹೊಳಿ (ಸಣ್ಣ ಕೈಗಾರಿಕೆ), 12.ಅಂಬರೀಶ್ (ವಸತಿ), 13.ಅಭಯ್ ಚಂದ್ರ ಜೈನ್ (ಕ್ರೀಡೆ)

ಹಿಂದಿನ ಸುದ್ದಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟ ಸೇರುವವರ ಪಟ್ಟಿ ಅಂತಿಮವಾಗಿದೆ. ಸಂಪುಟ ಪುನಾರಚನೆ ಬಗ್ಗೆ ಇಂದು ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ. ಸೋನಿಯಾ ಗಾಂಧಿ ಅವರ ನಿವಾಸದಲ್ಲಿ ಬೆಳಗ್ಗೆ 10 ಗಂಟೆಗೆ ಮಹತ್ವದ ಸಭೆ ನಡೆಯಲಿದೆ.

ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ, ಸಿದ್ದರಾಮಯ್ಯ ಮತ್ತು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಅವರು ಶುಕ್ರವಾರ ರಾತ್ರಿ ಸರಣಿ ಸಭೆಗಳನ್ನು ನಡೆಸಿ, ಸಂಪುಟ ಸೇರುವವರ ಮತ್ತು ಕೈ ಬಿಡುವವರ ಪಟ್ಟಿಯನ್ನು ಅಂತಿಮಗೊಳಿಸಿದ್ದಾರೆ. [ಸಂಪುಟ ಪುನಾರಚನೆ : ಶುಕ್ರವಾರದ 6 ಪ್ರಮುಖ ಬೆಳವಣಿಗೆಗಳು]

ಶುಕ್ರವಾರ ರಾತ್ರಿ ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಹಿರಿಯ ನಾಯಕ ಆಸ್ಕರ್ ಫರ್ನಾಂಡೀಸ್ ಅವರ ಜೊತೆ ಪ್ರತ್ಯೇಕವಾಗಿ ಮಾತುಕತೆ ನಡೆಸಿ, ಸಿದ್ದರಾಮಯ್ಯ ಅವರು ಸಚಿವರ ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ. ಈ ಪಟ್ಟಿಗೆ ಸೋನಿಯಾ ಗಾಂಧಿ ಅವರ ಅಂತಿಮ ಒಪ್ಪಿಗೆ ಮಾತ್ರ ಬೇಕಾಗಿದೆ. [ಸಚಿವ ಸಂಪುಟ ಪುನಾರಚನೆ : ಯಾರು, ಏನು ಹೇಳಿದರು?]

ಹಿರಿಯ ನಾಯಕರ ಹಗ್ಗಜಗ್ಗಾಟದಿಂದಾಗಿ ಸಂಪುಟದಿಂದ ಕೈ ಬಿಡುವವರ ಸಂಖ್ಯೆ ಒಂದಂಕಿಗೆ ಇಳಿದಿದೆ. ಮೊದಲು 12 ಸಚಿವರ ಹೆಸರು ಪಟ್ಟಿಯಲ್ಲಿತ್ತು. ನಂತರ ಅದು 10ಕ್ಕೆ ಇಳಿದಿತತು. ಸದ್ಯದ ಮಾಹಿತಿ ಪ್ರಕಾರ 6 ಜನರು ಸಂಪುಟದಿಂದ ಹೊರಬರಲಿದ್ದು, 6 ಶಾಸಕರು ಸಂಪುಟ ಸೇರಲಿದ್ದಾರೆ.

ಸಂಪುಟ ಸೇರುವವರು : ಕಾಗೋಡು ತಿಮ್ಮಪ್ಪ (ಸಾಗರ), ಪ್ರಮೋದ್ ಮಧ್ವರಾಜ್ (ಉಡುಪಿ), ಪ್ರಿಯಾಂಕ ಖರ್ಗೆ (ಚಿತ್ತಾಪುರ), ಲೇ ಔಟ್ ಕೃಷ್ಣಪ್ಪ (ವಿಜಯನಗರ), ಬಸವರಾಜ ರಾಯರೆಡ್ಡಿ (ಯಲಬುರ್ಗಾ), ರಮೇಶ್ ಕುಮಾರ್ (ಶ್ರೀನಿವಾಸಪುರ).

ಸಂಪುಟದಿಂದ ಹೊರಬರುವವರು : ಬಾಬೂರಾವ್ ಚಿಂಚನಸೂರ್ (ಜವಳಿ), ಶ್ರೀನಿವಾಸ ಪ್ರಸಾದ್ (ಕಂದಾಯ), ವಿನಯ್ ಕುಮಾರ್ ಸೊರಕೆ (ನಗರಾಭಿವೃದ್ಧಿ), ಕಿಮ್ಮನೆ ರತ್ನಾಕರ (ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ), ಪರಮೇಶ್ವರ ನಾಯಕ್ (ಕಾರ್ಮಿಕ), ಶಿವರಾಜ್ ತಂಗಡಗಿ (ಸಣ್ಣ ನೀರಾವರಿ).

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Chief Minister Siddaramaiah in New Delhi to undertake a major reshuffle of the cabinet. Siddaramaiah will meet AICC president Sonia Gandhi on morning 10 am.
Please Wait while comments are loading...