ರಾಜ್ಯದ 43 ಹೊಸ ತಾಲೂಕು ಸ್ವಾಗತಿಸಲು ಸಿದ್ದರಾಗಿ

ಬೆಂಗಳೂರು, ಮಾ.25: ರಾಜ್ಯದಲ್ಲಿ ಹೊಸದಾಗಿ 43 ತಾಲೂಕು ರಚನೆಗೆ ಸರ್ಕಾರ ಬದ್ಧವಾಗಿದ್ದು, ಹಣಕಾಸು ಲಭ್ಯತೆ ಆಧಾರದ ಮೇಲೆ ಹಂತ ಹಂತವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಅವರು ಸದನದಲ್ಲಿ ಹೇಳಿದ್ದಾರೆ. ಈ ಮೂಲಕ ಬಹುಕಾಲದ ಬೇಡಿಕೆ ಕೊನೆಗೂ ಈಡೇರುವ ಹಂತ ತಲುಪಿದ ಸಂತೋಷ ಅನೇಕ ಜಿಲ್ಲೆಗಳಲ್ಲಿ ಕಂಡು ಬಂದಿದೆ.

ಜೆಡಿಎಸ್‌ನ ಎನ್.ಎಚ್. ಕೋನರೆಡ್ಡಿ ಅವರ ಪ್ರಸ್ತಾವಕ್ಕೆ ಉತ್ತರಿಸಿದ ಸಚಿವರು, ಮುಂದಿನ ಆರ್ಥಿಕ ಸಾಲಿನ ಬಜೆಟ್‌ನಲ್ಲಿ ನೂತನ ತಾಲೂಕು ರಚನೆಗೆ ಹಣ ಒದಗಿಸದಿದ್ದರೂ ಹಣಕಾಸಿನ ಲಭ್ಯತೆ ಮೇಲೆ ಆದ್ಯತೆ ನೀಡಲಾಗುತ್ತದೆ ಎಂದು ವಿ.ಶ್ರೀನಿವಾಸ್ ಪ್ರಸಾದ್ ಹೇಳಿದರು.[43 ಹೊಸ ತಾಲೂಕುಗಳ ಪಟ್ಟಿ ಇಲ್ಲಿದೆ]

Siddaramaiah cabinet approves 43-new-taluks Karnataka

ಬಿಜೆಪಿ ಆಡಳಿತಾವಧಿಯಲ್ಲಿ 16 ಜಿಲ್ಲೆಗಳಲ್ಲಿ 43 ಹೊಸ ತಾಲೂಕು ರಚಿಸುವ ತರಾತುರಿ ಘೋಷಣೆ ಮಾಡಲಾಗಿತ್ತು. ಬೆಂಗಳೂರು ನಗರ ಜಿಲ್ಲೆಯ ಯಲಹಂಕವೂ ಹೊಸ ತಾಲೂಕು ಪಟ್ಟಿಯಲ್ಲಿ ಸೇರಿದೆ. ಅದಕ್ಕೆ ಬೇಕಾದ ಆರ್ಥಿಕ ಸಂಪನ್ಮೂಲ ಒದಗಿಸಿರಲಿಲ್ಲ. ನಮ್ಮ ಸರ್ಕಾರ ಹೊಸ ತಾಲೂಕು ರಚನೆ ಕೈಬಿಡದೆ ಮುಂದುವರೆಸುವ ಬದ್ಧತೆ ಹೊಂದಿದೆ ಎಂದರು.

ಹನ್ನೊಂದು ಉಪ ವಿಭಾಗ ಹಾಗೂ 124 ಹೋಬಳಿಗಳ ರಚನೆ ಮಾಡಲಾಗುವುದು. ನೂತನ ತಾಲೂಕು ರಚಿಸಲು ತಲಾ 25 ಕೋಟಿ ರೂ. ನಂತೆ 2000 ಕೋಟಿ ರೂ.ಗಳ ಅಗತ್ಯವಿದ್ದು, ಹಣಕಾಸಿನ ಲಭ್ಯತೆ ಮೇಲೆ ಕ್ರಮ ಕೈಗೊಳ್ಳಲಾಗುವುದು. ಈ ಅಧಿವೇಶನದ ನಂತರ ಹೊಸ ತಾಲೂಕು ರಚನೆ ಪ್ರಕ್ರಿಯೆಗೆಚಾಲನೆ ದೊರೆಯಲಿದೆ ಎಂದು ಸಚಿವ ಶ್ರೀನಿವಾಸ್ ಪ್ರಸಾದ್ ಭರವಸೆ ನೀಡಿದರು.

ಜಗದೀಶ್ ಶೆಟ್ಟರ್ ಅವರ ಸರ್ಕಾರ ಬಜೆಟ್ ನಲ್ಲಿ ಸುಮಾರು 43 ಹೊಸ ತಾಲೂಕುಗಳನ್ನು ರಚನೆ ಮಾಡಲು 86 ಕೋಟಿ ರು ಘೋಷಿಸಿತ್ತು. ಈಗ ಇದೇ ತಂತ್ರ ಮುಂದುವರೆಸಿರುವ ಸಿದ್ದರಾಮಯ್ಯ ಸರ್ಕಾರ ಅಷ್ಟೇ ಸಂಖ್ಯೆಯ ತಾಲೂಕುಗಳ ಉದಯಕ್ಕೆ ನಾಂದಿ ಹಾಡಿದೆ. ಬಜೆಟ್ ಅಧಿವೇಶನದಲ್ಲಿ ಇದಕ್ಕೆ ಅನುಮೋದನೆ ಸಿಕ್ಕಿದೆ.

ಘೋಷಿತ ಹೊಸ ತಾಲ್ಲೂಕು:

* ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ, ರಬಕವಿ-ಬನಹಟ್ಟಿ ಮತ್ತು ಇಳಕಲ್,
* ಬೆಳಗಾವಿ ಜಿಲ್ಲೆಯ ನಿಪ್ಪಾಣಿ, ಮೂಡಲಗಿ ಮತ್ತು ಕಾಗವಾಡ,
* ಚಾಮರಾಜನಗರ ಜಿಲ್ಲೆಯ ಹನೂರು,
* ದಾವಣಗೆರೆ ಜಿಲ್ಲೆಯ ನ್ಯಾಮತಿ,
* ಬೀದರ್ ಜಿಲ್ಲೆ ಚಿಟ್ಟಗುಪ್ಪ, ಹುಲಸೂರು ಮತ್ತು ಕಮಲನಗರ,
* ಬಳ್ಳಾರಿ ಜಿಲ್ಲೆ ಕುರುಗೋಡು, ಕೊಟ್ಟೂರು ಮತ್ತು ಕಂಪ್ಲಿ,
* ಧಾರವಾಡ ಜಿಲೆಯ ಅಣ್ಣಿಗೇರಿ, ಆಳ್ನಾವರ ಮತ್ತು ಹುಬ್ಬಳ್ಳಿ ನಗರ,
* ಗದಗ ಜಿಲ್ಲೆಯ ಗಜೇಂದ್ರ ಗಢ ಮತ್ತು ಲಕ್ಷ್ಮೇಶ್ವರ,
* ಕಲಬುರಗಿ ಜಿಲ್ಲೆಯ ಕಾಳಗಿ, ಕಮಲಾಪುರ ಮತ್ತು ಶಹಾಬಾದ್,
* ಯಾದಗಿರ್ ಜಿಲ್ಲೆಯ ಹುಣಸಗಿ, ಯಡ್ರಾವಿ, ವಡಗೆರ ಮತ್ತು ಗುರುಮಿಟ್ಕಲ್,
* ಕೊಪ್ಪಳ ಜಿಲ್ಲೆಯ ಕೂಕನೂರು, ಕನಕಗಿರಿ ಮತ್ತು ಕಾರಟಗಿ,
* ರಾಯಚೂರು ಜಿಲ್ಲೆಯ ಮಸ್ಕಿ ಮತ್ತು ಸಿರವಾರ,
* ಉಡುಪಿ ಜಿಲ್ಲೆಯ ಬ್ರಹ್ಮಾವರ ಮತ್ತು ಬೈಂದೂರು,
* ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆ ಮತ್ತು ಕಡಬ,
* ಬೆಂಗಳೂರು ನಗರ ಜಿಲ್ಲೆಯ ಯಲಹಂಕ
* ವಿಜಯಪುರ ಜಿಲ್ಲೆಯ ಬಬಲೇಶ್ವರ, ನಿಡಗುಂದಿ, ತಿಕೋಟ, ದೇವರಹಿಪ್ಪರಗಿ, ತಾಳಿಕೋಟೆ, ಚಡಚಣ ಮತ್ತು ಕೋಲ್ಹಾರ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+