• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Siddaramaiah Biopic : ಬರುತ್ತಿದೆ ಸಿದ್ದರಾಮಯ್ಯ ಬಯೋಪಿಕ್‌, ನಟ ಯಾರು ಗೊತ್ತಾ?

|
Google Oneindia Kannada News

ಬೆಂಗಳೂರು, ನವೆಂಬರ್‌ 30: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುರಿತ ಸಿನೆಮಾ ಚಿತ್ರ ತಯಾರಾಗುತ್ತಿದ್ದು, ಸಿದ್ದರಾಮಯ್ಯ ಅವರ ಪಾತ್ರದಲ್ಲಿ ತಮಿಳುನಾಡಿನ ಖ್ಯಾತ ನಟ ವಿಜಯ್‌ ಸೇತುಪತಿ ನಟಿಸಲಿದ್ದಾರೆ ಎಂಬ ವರದಿಗಳು ಈಗ ಹರಿದಾಡುತ್ತಿವೆ.

4ನೇ ತರಗತಿಯಿಂದ ಶಾಲೆಯನ್ನು ಪ್ರಾರಂಭಿಸುವ ಮೊದಲು ಒಬ್ಬ ಹುಡುಗ ದನಗಳನ್ನು ಮೇಯಿಸುತ್ತಾನೆ. ಅವನು ಲೋಹಿಯಾ ವಿಚಾರಧಾರೆಯಿಂದ ಪ್ರಭಾವಿತನಾಗಿ ಕಾನೂನು ಪದವಿಯನ್ನು ಪಡೆಯುತ್ತಾನೆ. ಬಳಿಕ ರಾಜಕೀಯ ಸೇರಿ ಅವರು ಹಲವಾರು ತಿರುವುಗಳ ನಂತರ ಮುಖ್ಯಮಂತ್ರಿಯಾಗುತ್ತಾರೆ. ಈ ಕಥಾವಸ್ತುವು ರಾಜಕಾರಣದ ಎಲ್ಲಾ ಮೇಕಿಂಗ್‌ಗಳನ್ನು ಹೊಂದಿದೆ. ಎಲ್ಲವೂ ಯೋಜನೆಯ ಪ್ರಕಾರ ನಡೆದರೆ ತಮಿಳಿನ ಖ್ಯಾತ ನಟ ವಿಜಯ್ ಸೇತುಪತಿ ಸಿದ್ದರಾಮಯ್ಯನವರಂತೆ ತೆರೆ ಮೇಲೆ ಕಾಣಬಹುದು.

ಬಿಜೆಪಿಗೆ ಸಮಾಜದಲ್ಲಿ ಗಲಭೆ ಎಬ್ಬಿಸಲು ರೌಡಿಗಳು ಬೇಕು: ಸಿದ್ದರಾಮಯ್ಯಬಿಜೆಪಿಗೆ ಸಮಾಜದಲ್ಲಿ ಗಲಭೆ ಎಬ್ಬಿಸಲು ರೌಡಿಗಳು ಬೇಕು: ಸಿದ್ದರಾಮಯ್ಯ

ಕರ್ನಾಟಕದಲ್ಲಿ ಕಾಂಗ್ರೆಸ್‌ನ ಅತ್ಯಂತ ಜನಪ್ರಿಯ ನಾಯಕ ಸಿದ್ದರಾಮಯ್ಯ ಅವರ ಬಯೋಪಿಕ್ ತಯಾರಿಸಲು ಸಂಪರ್ಕಿಸಲಾಗಿದೆ. ಇದನ್ನು ಅವರ ನಿಷ್ಠಾವಂತ ಮಾಜಿ ಸಚಿವ ಶಿವರಾಜ್ ತಂಗಡಗಿ ಅವರು ನಿರ್ಮಿಸಲು ಮಾಡಲು ಉತ್ಸುಕರಾಗಿದ್ದಾರೆ ಎನ್ನಲಾಗಿದೆ. ಸಿದ್ದರಾಮಯ್ಯನವರ ಜೀವನಚರಿತ್ರೆ ಕುರಿತ ಚಿತ್ರ ಕರ್ನಾಟಕದ ರಾಜಕಾರಣಿಯ ಮೇಲೆ ಮೊದಲನೆಯ ಸಿನಿಮಾವಾಗಲಿದೆ. 2023ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಕಾಂಗ್ರೆಸ್ ನಾಯಕನ ಇಮೇಜ್ ಅನ್ನು ಎತ್ತಿ ಹಿಡಿಯುವ ಮತ್ತೊಂದು ಪ್ರಯತ್ನವಾಗಿದೆ. ಆಗಸ್ಟ್‌ನಲ್ಲಿ ಅವರ 75ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಲಕ್ಷಾಂತರ ಜನರನ್ನು ಕಾಂಗ್ರೆಸ್‌ ಸೆಳೆಯಿತು.

ಸತ್ಯರತ್ನಂ ಯುವ ನಿರ್ದೇಶಕರ ನಿರ್ದೇಶನ

ಸತ್ಯರತ್ನಂ ಯುವ ನಿರ್ದೇಶಕರ ನಿರ್ದೇಶನ

ಸಿದ್ದರಾಮಯ್ಯನವರ ಜೀವನಾಧಾರಿತ ಸಿನಿಮಾ ಮಾಡಲು ನನ್ನ ಕ್ಷೇತ್ರದಲ್ಲಿ ಕೆಲವು ಯುವಕರಿದ್ದಾರೆ. ಅವರು ಎಂಎಸ್ ಕ್ರಿಯೇಷನ್ಸ್ ಎಂಬ ಪ್ರೊಡಕ್ಷನ್ ಹೌಸ್ ಅನ್ನು ಸಹ ಪ್ರಾರಂಭಿಸಿದ್ದಾರೆ. ಈ ಸಿನಿಮಾವನ್ನು ಸತ್ಯರತ್ನಂ ಎಂಬ ಯುವ ನಿರ್ದೇಶಕ ನಿರ್ದೇಶಲಿದ್ದಾರೆ ಎಂದು ಕನಕಗಿರಿ ಮಾಜಿ ಶಾಸಕ ತಂಗಡಗಿ ಹೇಳಿದ್ದಾರೆ. ತಂಗಡಗಿ ಅವರು ಸಿದ್ದರಾಮಯ್ಯ ಅವರಿಂದ ಔಪಚಾರಿಕ ಚಾಲನೆ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಡಿಸೆಂಬರ್ 6 ರಿಂದ 8 ರ ನಡುವೆ ನಾವು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡುತ್ತೇವೆ. ಒಪ್ಪಿಗೆ ಸಿಕ್ಕರೆ ಡಿಸೆಂಬರ್ ಅಂತ್ಯದ ವೇಳೆಗೆ ಚಿತ್ರದ ಕೆಲಸ ಶುರುವಾಗಲಿದೆ ಎಂದರು.

ನಾವು ಯಾರಿಗೆ ಟಿಕೆಟ್ ನೀಡಿದರೂ ಕಾಂಗ್ರೆಸ್‌ಗೆ ಮತ ಹಾಕಿ: ಸಿದ್ದರಾಮಯ್ಯನಾವು ಯಾರಿಗೆ ಟಿಕೆಟ್ ನೀಡಿದರೂ ಕಾಂಗ್ರೆಸ್‌ಗೆ ಮತ ಹಾಕಿ: ಸಿದ್ದರಾಮಯ್ಯ

ನಟಿಸಲು ಸೇತುಪತಿ ಕಾಲ್‌ಶೀಟ್‌ ಕೋರಿಕೆ

ನಟಿಸಲು ಸೇತುಪತಿ ಕಾಲ್‌ಶೀಟ್‌ ಕೋರಿಕೆ

ಹಳ್ಳಿಗಾಡಿನ ಯುವಕ ಸಿದ್ದರಾಮಯ್ಯನ ಪಾತ್ರದಲ್ಲಿ ಸಿದ್ದರಾಮಯ್ಯನವರ ಹೋಲಿಕೆ, ಗಡ್ಡ ಮತ್ತು ಎಲ್ಲದರಿಂದಾಗಿ ತಮಿಳು ನಟ ಸೇತುಪತಿ ನಟಿಸಲು ಕಾಲ್‌ಶೀಟ್‌ ಕೋರಲಾಗಿದೆ. ನಿರ್ದೇಶಕರು ಮತ್ತು ನಿರ್ಮಾಪಕರು ಈಗಾಗಲೇ ಸೇತುಪತಿ ಅವರನ್ನು ಸಂಪರ್ಕಿಸಿದ್ದಾರೆ ಎಂದು ನನಗೆ ತಿಳಿಸಲಾಗಿದೆ ಎಂದು ತಂಗಡಗಿ ಹೇಳಿದರು.

ವಿಧಾನಸಭಾ ಚುನಾವಣೆಗೂ ಮುನ್ನ ಚಿತ್ರ

ವಿಧಾನಸಭಾ ಚುನಾವಣೆಗೂ ಮುನ್ನ ಚಿತ್ರ

ಯೋಜಿತ ಬಯೋಪಿಕ್ ಸಿದ್ದರಾಮಯ್ಯ ಅವರ ಹುಟ್ಟೂರಾದ ಸಿದ್ದರಾಮನಹುಂಡಿ ಗ್ರಾಮದಲ್ಲಿ ಅವರ ಜೀವನ, ಅವರ ಕಾಲೇಜು ದಿನಗಳು ಮತ್ತು ರಾಜಕೀಯ ಜೀವನವನ್ನು ಸೆರೆಹಿಡಿಯಲಿದೆ. ವಿಧಾನಸಭಾ ಚುನಾವಣೆಗೂ ಮುನ್ನ ಚಿತ್ರ ಬಿಡುಗಡೆಯಾಗಬೇಕು ಎಂಬುದು ನಮ್ಮ ಆಸೆ. ಚಲನಚಿತ್ರ ನಿರ್ಮಾಪಕರು ಇದನ್ನು ಪ್ಯಾನ್ ಇಂಡಿಯಾ ಪ್ರಾಜೆಕ್ಟ್ ಮಾಡಲು ಬಯಸುತ್ತಾರೆ. ಬಜೆಟ್‌ಗೆ ತಲೆಕೆಡಿಸಿಕೊಳ್ಳಲ್ಲ ಎಂದು ತಂಗಡಗಿ ಹೇಳಿದರು.

ಡಿಕೆ ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಕೂಲ್‌

ಡಿಕೆ ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಕೂಲ್‌

ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್, ಮುಖ್ಯಮಂತ್ರಿ ಆಕಾಂಕ್ಷಿ ಸಿದ್ದರಾಮಯ್ಯ ಅವರು ವ್ಯಕ್ತಿಗಳನ್ನು ಆರಾಧಿಸುವುದನ್ನು ನಿಲ್ಲಿಸಿ ಎಂದು ತಮ್ಮ ಬಣದಿಂದ ತುಂಬಿರುವ ಪಕ್ಷವನ್ನು ಪದೇ ಪದೇ ಕೇಳುತ್ತಿರುವ ಸಮಯದಲ್ಲಿ ಈ ಚಲನಚಿತ್ರದ ಕಲ್ಪನೆಯೂ ಬಂದಿದೆ. ಮುಂದಿನ ಕರ್ನಾಟಕ ವಿಧಾನಸಭಾ ಚುನಾವಣೆಗೆ ಪೂರಕವಾಗಿ ಕರ್ನಾಟಕದಲ್ಲಿ ಈಗಾಗಲೇ ಭಾರತ್‌ ಜೋಡೋ ಯಾತ್ರೆ ನಡೆಸಲಾಗಿದೆ. ಮುಂದಿನ ಸಿಎಂ ಯಾರು ಎಂಬ ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದ್ದರೂ ಪ್ರಚಾರದ ಬಗ್ಗೆ ಡಿಕೆ ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಕೂಲ್‌ ಆಗೆ ಇದ್ದಾರೆ. ಇನ್ನೂ ಮುಂದಿನ ವಿಧಾನಸಭೆಗೆ ನಿಲ್ಲಲು ಸಿದ್ದರಾಮಯ್ಯ ಕ್ಷೇತ್ರವನ್ನು ಹುಡುಕುತ್ತಿದ್ದಾರೆ.

ಸಿದ್ದರಾಮಯ್ಯ
Know all about
ಸಿದ್ದರಾಮಯ್ಯ
English summary
There are reports that Tamil Nadu's famous actor Vijay Sethupathi will play the role of Siddaramaiah in a film on former Karnataka Chief Minister Siddaramaiah.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X