ಸಿದ್ದು ಮಾಡಿದರೆ ಗರತೀತನ, ಬೇರೆಯವರ ಮಾಡಿದರೆ ಹಾದರವೇ: ಬಿಜೆಪಿ ಶಾಸಕ

ಬೆಂಗಳೂರು, ಜುಲೈ 9: ಸಮ್ಮಿಶ್ರ ಸರಕಾರದ ವಿಶ್ವಾಸಮತಯಾಚನೆ ಕಾರ್ಯಕಲಾಪ ಎರಡನೇ ದಿನವೂ ಮುಂದುವರಿದಿದ್ದು, ಶುಕ್ರವಾರ, ಸದನದಲ್ಲಿ ಯಾವಯಾವ ರೀತಿ ಬೆಳವಣಿಗೆ ನಡೆಯಲಿದೆ ಎನ್ನುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ಪಕ್ಷಾಂತರದ ಬಗ್ಗೆ ಸದನದಲ್ಲಿ ಗುರುವಾರ (ಜುಲೈ 18) ಮಾಜಿ ಮುಖ್ಯಮಂತ್ರಿ ಮತ್ತು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮಾಡಿದ ಭಾಷಣದ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವ್ಯಂಗ್ಯವಾಡಿದ್ದಾರೆ.

ಪಕ್ಷಾಂತರದ ಬಗ್ಗೆ ಭಾಷಣ ಬಿಗಿಯುವ ಸಿದ್ದರಾಮಯ್ಯನವರು ಜೆಡಿಎಸ್ ನಿಂದ ಕಾಂಗ್ರೆಸ್ಸಿಗೆ ಬಂದದ್ದು ಪಕ್ಷಾಂತರವಲ್ಲದೇ ಇನ್ನೇನು ಎಂದು ಯತ್ನಾಳ್ ಲೇವಡಿ ಮಾಡಿದ್ದಾರೆ.

Siddaramaiah also done the Pakshantara, BJP MLA BR Patil Yatnal

ಈ ಬಗ್ಗೆ ಯತ್ನಾಳ್ ಮಾಡಿರುವ ಟ್ವೀಟ್ ಹೀಗಿದೆ, 'ಮಾನ್ಯ ಬಾದಾಮಿ ಶಾಸಕ @siddaramaiah ನವರು ಕೂಡ ಪಕ್ಷಾಂತರ ಮಾಡಿಯೇ @INCKarnataka ಸೇರಿದ್ದೆಂದು ಮರೆಯಬಾರದು.

'ಹಾಗೆ ನೀವು ಮುಖ್ಯಮಂತ್ರಿ ಆಗಿದ್ದಾಗ 7ಜನ ಜೆಡಿಎಸ್ ನ ಶಾಸಕರನ್ನು ರಾಜೀನಾಮೆ ಕೊಡಿಸಿದ ಸಿದ್ದ ಪುರುಷ ನೀವೇ. ನೀವು ಮಾಡಿದರೆ ಗರತೀತನ ಬೇರೆ ಅವರು ಮಾಡಿದರೆ ಮಾತ್ರ ಹಾದರವೇ' ಇದು ಯತ್ನಾಳ್ ಮಾಡಿರುವ ಟ್ವೀಟ್.

ಇದಕ್ಕೆ ಬಂದ ಒಂದು ಟ್ವೀಟ್ ಪ್ರತಿಕ್ರಿಯೆ ಹೀಗಿದೆ, ' ವ್ಯಕ್ತಿತ್ವ ಹರಣದ ರಾಜಕಾರಣ ಬಗ್ಗೆ. ಅದಕ್ಕೆಂದೇ ಸುಲಭದಲ್ಲಿ ಸಿಗುವ ವ್ಯಕ್ತಿ ಪ್ರಬಲ ಸಮದಾಯಗಳ ಬೆಂಬಲವಿಲ್ಲದ ಹಿಂದುಳಿದ ಹಾಗೂ ಶೋಷಿತರ ದನಿಯಾಗಿರುವ @siddaramaiah. ಗಾಗಿ ಎಲ್ಲದಕ್ಕೂ ಸಿದ್ದರಾಮಯ್ಯನೇ ಕಾರಣ ಎಂದು ಬಿಂಬಿಸಲಾಗುತ್ತಿದೆ.

'ಮಾನ್ಯ ಪಾಟೀಲ್ ರೆ ನೀವು, ಹಾಸ್ಯಾಸ್ಪದ ಸಂಗತಿಯಾಗಿದ್ದು ಇದನ್ನು ಜನತೆ ಅರ್ಥ ಮಾಡಿಕೊಳ್ಳಬೇಕಿದೆ' ಎನ್ನುವ ಟ್ವೀಟ್ ಪ್ರತಿಕ್ರಿಯೆ ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+