ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಎಸ್‌ಐ ಜಗದೀಶ್‌ಗೆ ಗುಂಡು ಹಾರಿಸಲು ನಿರ್ಧರಿಸಿದ್ದ ಹಂತಕರು

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಅಕ್ಟೋಬರ್ 26 : ದೊಡ್ಡಬಳ್ಳಾಪುರ ಠಾಣೆ ಪಿಎಸ್‌ಐ ಜಗದೀಶ್ ಹತ್ಯೆ ಮಾಡಿದ ಆರೋಪಿಗಳಾದ ಮಧು ಮತ್ತು ಹರೀಶ್ ಬಾಬುವನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ಆರೋಪಿಗಳ ತಂಡ ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ ವಿವಿಧ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿತ್ತು ಎಂಬುದು ತನಿಖೆಯಿಂದ ಬಹಿರಂಗಗೊಂಡಿದೆ.

ವಿಚಾರಣಾ ಅಧಿಕಾರಿಯೊಬ್ಬರು ಒನ್ ಇಂಡಿಯಾಕ್ಕೆ ನೀಡಿರುವ ಮಾಹಿತಿಯಂತೆ ಹರೀಶ್ ಬಾಬು, ಮಧು ಸೇರಿದಂತೆ ಹಲವು ಸದಸ್ಯರಿರುವ ಈ ತಂಡವನ್ನು ಮಧುವಿನ ತಾಯಿ ತಿಮ್ಮಕ್ಕ ಮುನ್ನೆಡೆಸುತ್ತಿದ್ದಳು. ಕರ್ನಾಟಕ ಮತ್ತು ನೆಲ್ಲೂರಿನಲ್ಲಿ ಈ ತಂಡ ಕಳ್ಳತನಗಳನ್ನು ನಡೆಸುತ್ತಿತ್ತು. [ಜಗದೀಶ್ ಕೊಂದ ಆರೋಪಿಗಳು 14 ದಿನ ಪೊಲೀಸ್ ವಶಕ್ಕೆ]

doddaballapur

ಈ ತಂಡ ದಾವಣೆಗರೆಯನ್ನು ತಮ್ಮ ಕೇಂದ್ರ ಸ್ಥಾನವಾಗಿ ಮಾಡಿಕೊಂಡಿತ್ತು. ತಿಮ್ಮಕ್ಕ ದಾವಣಗೆರೆಯಲ್ಲಿ ಸ್ವಂತ ಮನೆ ಹೊಂದಿದ್ದು, ಎರಡೂ ರಾಜ್ಯದಲ್ಲಿ ಕದ್ದ ವಸ್ತುಗಳನ್ನು ಮನೆಗೆ ತರುತ್ತಿದ್ದರು. ಅಲ್ಲಿಂದ ಬೇರೆ ಸ್ಥಳಗಳಿಗೆ ವಿಲೇವಾರಿ ಮಾಡುತ್ತಿದ್ದರು. [ಮಧು ಮತ್ತು ಹರೀಶ್ ಬಾಬು ಪೊಲೀಸರಿಗೆ ಸಿಕ್ಕಿದ್ದು ಹೇಗೆ?]

ದಾವಣಗೆರೆಯಿಂದ ಬೇರೆ-ಬೇರೆ ಕಡೆ ಹೋಗುತ್ತಿದ್ದ ಈ ತಂಡದ ಸದಸ್ಯರು ಲಾಡ್ಜ್‌ನಲ್ಲಿ ವಾಸ್ತವ್ಯ ಹೂಡುತ್ತಿದ್ದರು. ಕಳ್ಳತನ ಮಾಡಿದ ಬಳಿಕ ದಾವಣಗೆರೆಗೆ ವಾಪಸ್ ಆಗುತ್ತಿದ್ದರು. ಈ ಗುಂಪಿನ ಕೆಲವು ಸದಸ್ಯರು ಜೈಲಿಗೆ ಹೋದಾಗ ತಿಮ್ಮಕ್ಕ ತನ್ನ ಮನೆಯ ದಾಖಲೆಗಳನ್ನು ನೀಡಿ ಅವರಿಗೆ ಜಾಮೀನು ಕೊಡಿಸಿದ್ದಳು. [ಜಗದೀಶ್ ಕೊಂದವರು ನಾಗ್ಪುರದಲ್ಲಿ ಸಿಕ್ಕಿಬಿದ್ರು]

ಗುಂಡು ಹಾರಿಸಲು ಭಯವಾಯಿತು : ನೆಲಮಂಗಲ ಬಳಿ ಅಕ್ಟೋಬರ್ 16ರಂದು ತಮ್ಮನ್ನು ಹಿಡಿಯಲು ಬಂದ ದೊಡ್ಡಬಳ್ಳಾಪುರದ ಠಾಣೆಯ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಜಗದೀಶ್ ಅವರ ಬಳಿಯಿದ್ದ ರಿವಾಲ್ವಾರ್ ಕಸಿದುಕೊಂಡ ಆರೋಪಿಗಳು ಅವರನ್ನು ಹತ್ಯೆ ಮಾಡಲು ನಿರ್ಧರಿಸಿದ್ದರು.

ಜಗದೀಶ್ ಅವರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದರೆ, ಪೊಲೀಸರ ತಮ್ಮನ್ನು ಕೊಲ್ಲಬಹುದೆಂಬ ಭಯದಲ್ಲಿ ಚಾಕುವಿನಿಂದ ಇರಿದು ಪರಾರಿಯಾದರು. ಜಗದೀಶ್ ಹತ್ಯೆಯ ನಂತರ ಕರ್ನೂಲ್‌ನಲ್ಲಿದ್ದ ತನ್ನ ಸ್ನೇಹಿತನಿಗೆ 70ಕ್ಕೂ ಅಧಿಕ ಬಾರಿ ಕರೆ ಮಾಡಿದ್ದ ಮಧು ಹಣವ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದ್ದ.

ಹಣ ಸಿಕ್ಕರೆ ಕರ್ನೂಲ್‌ನಲ್ಲಿಯೇ ತಲೆಮರೆಸಿಕೊಳ್ಳಲು ಆರೋಪಿಗಳು ನಿರ್ಧರಿಸಿದ್ದರು. ಕರ್ನೂಲ್‌ಗೆ ಬರಲು ನಿರ್ಧರಿಸಿ ರೈಲು ಹತ್ತಿದಾಗಲೇ ನಾಗ್ಪುರ ರೈಲ್ವೆ ನಿಲ್ದಾಣದಲ್ಲಿ ಮಧು ಮತ್ತು ಹರೀಶ್ ಬಾಬು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಸದ್ಯ, ಇಬ್ಬರು ಆರೋಪಿಗಳು ಪೊಲೀಸರ ವಶದಲ್ಲಿದ್ದು, ವಿಚಾರಣೆ ಮುಂದುವರೆದಿದೆ.

English summary
The investigation into the murder of PSI Jagadish has revealed several details. We decided to shoot the SI as we feared that we would be killed said Harish Babu and Madhu who arrested in connection with the murder case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X