ಕರ್ನಾಟಕ ಬಿಜೆಪಿ ಕೋರ್ ಕಮಿಟಿಯಿಂದ ಶೋಭಾ ಔಟ್!

Written By:
Subscribe to Oneindia Kannada

ಬೆಂಗಳೂರು, ಜುಲೈ, 07: ಕರ್ನಾಟಕ ಬಿಜೆಪಿ ಕೋರ್ ಕಮಿಟಿಯಿಂದ ಶೋಭಾ ಕರಂದ್ಲಾಜೆ ಅವರನ್ನು ಹೊರಗೆ ಇಡಲಾಗಿದೆ. ಬಿಜೆಪಿ ಹೈಕಮಾಂಡ್ 12 ಜನರ ಕೋರ್ ಕಮಿಟಿ ರಚನೆ ಮಾಡಿದ್ದು ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿಎಸ್ ಯಡಿಯೂರಪ್ಪ ಆಪ್ತರಾಗಿ ಗುರುತಿಸಿಕೊಂಡಿರುವ ಶೋಭಾ ಕರಂದ್ಲಾಜೆಗೆ ಸ್ಥಾನ ನೀಡಲಾಗಿಲ್ಲ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನಿರ್ದೇಶನದಂತೆ ಕೋರ್ ಕಮಿಟಿ ರಚನೆ ಮಾಡಲಾಗಿದೆ. ಬಿಎಸ್ ಯಡಿಯೂರಪ್ಪ, ಅನಂತ್ ಕುಮಾರ್, ಜಗದೀಶ್ ಶೆಟ್ಟರ್, ಆರ್ ಅಶೋಕ್ ಅವರನ್ನು ಒಳಗೊಂಡಂತೆ ಹೊಸ ಕೋರ್ ಕಮಿಟಿ ರಚನೆ ಮಾಡಲಾಗಿದೆ.[ಈಶ್ವರಪ್ಪನ ಮೂಲೆಗೆ ತಳ್ಳಿ ಒಗ್ಗೂಡಿದ ಬಿಜೆಪಿ ನಾಯಕರು]

bjp

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನಿರ್ದೇಶನದ ಅನ್ವಯ ಹೊಸ ಕೋರ್ ಕಮಿಟಿ ರಚನೆ ಮಾಡಲಾಗಿದೆ. ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಕೋರ್ ಕಮಿಟಿಯನ್ನು ಪ್ರಕಟಿಸಿದ್ದಾರೆ. 12 ಜನ ಸದಸ್ಯರು ಮತ್ತು ನಾಲ್ಕು ಜನ ಆಹ್ವಾನಿತ ಸದಸ್ಯರನ್ನು ಒಳಗೊಂಡ ಕಮಿಟಿ ರಚನೆ ಮಾಡಲಾಗಿದೆ.[ಶೋಭಾ ಕರಂದ್ಲಾಜೆ ನೋಡಿದ್ರೆ ಸಿಟಿ ರವಿ ಸಿಟ್ಟಾಗ್ತಾರೆ ಏಕೆ?]

ಯಡಿಯೂರಪ್ಪ ಮನವಿ
ಶೋಭಾ ಕರಂದ್ಲಾಜೆ ಮತ್ತು ರವಿಕುಮಾರ್ ಅವರನ್ನು ಕೋರ್ ಕಮಿಟಿಗೆ ಸೇರಿಸಿಕೊಳ್ಳುವಂತೆ ಒತ್ತಾಯಿಸಿ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಕೇಂದ್ರ ನಾಯಕರಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಕೋರ್ ಕಮಿಟಿ ಸದಸ್ಉರ ಸಂಖ್ಯೆಯನ್ನು 14ಕ್ಕೆ ಹೆಚ್ಚಿಸಲು ಕೋರಿದ್ದಾರೆ.

ಅಮಿತ್ ಶಾ ನಿರ್ದೇಶನ
ಕೋರ್ ಕಮಿಟಿಯ ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯುಂತೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ರಾಜ್ಯ ಬಿಜೆಪಿ ಅಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರಿಗೆ ಖಡಕ್ ಸೂಚನೆ ನೀಡಿದ್ದಾರೆ.[ಶೋಭಾ ಕರಂದ್ಲಾಜೆ ಕರ್ನಾಟಕದ ಜಯಲಲಿತಾ ಆಗುವರೆ?]

ಭುಗಿಲೆದ್ದಿದ್ದ ಭಿನ್ನಮತ
ಜಿಲ್ಲಾ ಪದಾಧಿಕಾರಿಗಳ ನೇಮಕದಲ್ಲಿ ಬಿಎಸ್ ವೈ ಮತ್ತು ಶೋಭಾ ಕರಂದ್ಲಾಜೆ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿ ಕೆ ಎಸ್ ಈಶ್ವರಪ್ಪ ಭಿನ್ನಮತದ ಮಾತುಗಳನ್ನು ಆಡಿದ್ದರು. ಅಲ್ಲದೇ ದೆಹಲಿ ನಾಯಕರ ಬಳಿ ತೆರಳಿ ಶೋಭಾ ಕರಂದ್ಲಾಜೆ ವಿರುದ್ಧ ದೂರು ದಾಖಲಿಸಿ ಬಂದಿದ್ದರು.

ಕಮೀಟಿಯಲ್ಲಿ ಯಾರ್ಯಾರಿದ್ದಾರೆ?

1. ಬಿಎಸ್ ಯಡಿಯೂರಪ್ಪ
2. ಅನಂತ್ ಕುಮಾರ್
3. ಆರ್ ಅಶೋಕ್
4. ಕೆ ಎಸ್ ಈಶ್ವರಪ್ಪ
5. ಪ್ರಹ್ಲಾದ್ ಜೋಷಿ
6. ಜಗದೀಶ್ ಶೆಟ್ಟರ್
7. ಸಿ ಎಂ ಉದಾಸಿ
8. ಅರವಿಂದ್ ಲಿಂಬಾವಳಿ
9. ಸಿಟಿ ರವಿ
10. ಗೋವಿಂದ ಕಾರಜೋಳ
11. ನಳೀನ್ ಕುಮಾರ್ ಕಟೀಲ್
12. ಸದಾನಂದ ಗೌಡ

4 ಜನ ಖಾಯಂ ಆಹ್ವಾನಿತ ಸದಸ್ಯರು
1. ರಾಮ್ ಲಾಲ್
2. ಸಂತೋಷ್
3. ಪಿ. ಮರುರಳೀಧರ್
4. ಅರುಣ್ ಕುಮಾರ್

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bengaluru: In a major development BJP State President B S Yeddyurappa loyal Udupi- Chikkamagaluru MP Shobha Karandlaje kept out of Karnataka BJP Core Committee.
Please Wait while comments are loading...